Saturday, November 23, 2024

ಪರದೇಶದ ಶಿಕ್ಷಣ ಪದ್ದತಿಯಿಂದ ನಾವು ಹೊರಬರಲೇಬೇಕು : ಸದಾನಂದಗೌಡ

ತುಮಕೂರು : ನಾವು ಯಾವುದರಲ್ಲೂ ರಾಜಕಾರಣ ತುರುಕಿ, ಬೆಳಯುವಂತಾ ಮಕ್ಕಳ ಮನಸ್ಸನ್ನ ಹಾಳು ಮಾಡಲ್ಲಾ ಎಂದು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುವೆಂಪು ಕುರಿತಂತೆ ಪಠ್ಯದಲ್ಲಿ ಹೆಚ್ಚಿನ ವಿಚಾರ ಸೇರಿಸಿದ್ದು ಬಿಜೆಪಿ. ಕುವೆಂಪು ಅವರ ಎರಡು ಕವನವನ್ನ ನಾಡಗೀತೆ ಮಾಡಿದ್ದು ಬಿಜೆಪಿ. ಹಾಗಾಗಿ ನಾವು ಅಪಮಾನ ಮಾಡಲು ಸಾಧ್ಯನಾ..? ಕೆಲವು ಸಣ್ಣಪುಟ್ಟ ಬದಲಾವಣೆ ಮಾಡಲು ಸರ್ಕಾರ ಒಪ್ಪಿಕೊಂಡಿದೆ ಎಂದರು.

ಪಠ್ಯಪುಸ್ತಕ ವಾಪಸ್ ಪಡೆದುಕೊಳ್ಳುವಂತೆ ದೇವೇಗೌಡರ ಪತ್ರ ವಿಚಾರವಾಗಿ ಮಾತನಾಡಿದ ಅವರು, ಈ ಕುರಿತು ಮಾತನಾಡೋದಕ್ಕೆ ಸಿಎಂ ಹಾಗೂ ಶಿಕ್ಷಣ ಸಚಿವರು ತಯಾರಿದ್ದಾರೆ. ಆದರೆ ದೇವೇಗೌಡರೇ ಮಾತನಾಡೋಕೆ ಬಾರದೇ ಮಾರ್ಗದಲ್ಲಿ ಕುಳಿತುಕೊಳ್ತೇನೆ ಅಂದರೇ ಹೇಗೆ ಎಲ್ಲವೂ ರಾಜಕೀಯ ಪ್ರೇರಿತವಾಗಿರಬಾರದು. ಈಗಾಗಲೇ ಕೆಲವು ಬದಲಾವಣೆಗಳನ್ನ ಮಾಡಲಾಗಿದೆ. ನಾವು ಯಾವುದರಲ್ಲೂ ರಾಜಕಾರಣ ತುರುಕಿ, ಬೆಳಯುವಂತಾ ಮಕ್ಕಳ ಮನಸ್ಸನ್ನ ಹಾಳು ಮಾಡಲ್ಲಾ. ದೇಶದ ಸಂಸ್ಕೃತಿ,ಸಂಸ್ಕಾರ ಉಳಿಯಬೇಕು. ಪರದೇಶದ ಶಿಕ್ಷಣ ಪದ್ದತಿಯಿಂದ ನಾವು ಹೊರಬರಲೇಬೇಕು. ಮೆಕಾಲೆ ಆಧಾರಿತ ಶಿಕ್ಷಣ ಪದ್ದತಿಯನ್ನ ಭಾರತೀಯ ಶಿಕ್ಷಣ ಪದ್ದತಿಯಾಗಿ ಬದಲಾಯಿಸಬೇಕು ಎಂದು ಹೇಳಿದರು.

ಭಾರತೀಯ ಸಂಸ್ಕೃತಿಯ ಮೂಲ ಬೇರಿನೊಂದಿಗೆ ನಮ್ಮ ಶಿಕ್ಷಣ ಪದ್ದತಿ ಸಾಗಬೇಕು. ಕಾಂಗ್ರೆಸ್ ಗೆ ಹೋರಾಟ ಮಾಡಲು ಬೇರೆ ವಿಚಾರವಿಲ್ಲಾ. ಅಗ್ನಿಪಥ್​ನಲ್ಲಿ ಭಾಗಿಯಾದ ಯುವಕರಿಗೆ ಮಹೇಂದ್ರ, ಅಧಾನಿ ಸೇರಿ ಖಾಸಗಿ ಕಂಪನಿಗಳು ಉದ್ಯೋಗ ಮೀಸಲಿಡ್ತೇವೆ ಎಂದಿದ್ದಾರೆ. ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡ ತಕ್ಷಣ ಮಿಲಿಟರಿ ವ್ಯವಸ್ಥೆ ಬದಲಾಗಲ್ಲಾ. ಮೂಲ ವ್ಯವಸ್ಥೆ ಹಾಗೆಯೇ ಇರುತ್ತೆ. ಕಾಂಗ್ರೆಸ್​​ನವರಿಗೆ ಸಂವಿಧಾನಿಕ ಸಂಸ್ಥೆ ಮೇಲೆ ನಂಬಿಕೆ‌ ಇಲ್ಲಾ. ಹಾಗಾಗಿ ಅವರು ಇಡಿ ಮೇಲೆ ಆರೋಪ ಮಾಡ್ತಿದ್ದಾರೆ. ಮೋದಿ ಅವರು ಗುಜರಾತ್ ಸಿಎಂ ಆಗಿದ್ದಾಗ ಎಸ್ಐಟಿ ಮುಂದೆ ಹಾಜರಾಗಿದ್ದರು. ಸುಪ್ರೀಂ ಕೋರ್ಟ್ ನಿಂದ ಇಂದು ಆರೋಪಮುಕ್ತರಾಗಿದ್ದಾರೆ ಎಂದು ತುಮಕೂರಿನಲ್ಲಿ ಮಾಜಿ ಸಿಎಂ ಸದಾನಂದಗೌಡ ಹೇಳಿದ್ದಾರೆ.

RELATED ARTICLES

Related Articles

TRENDING ARTICLES