Monday, December 23, 2024

ರಾಜಮಾರ್ತಾಂಡನ ಎಂಟ್ರಿಗೆ ಮುಹೂರ್ತ ಫಿಕ್ಸ್​​

ಚಿರು ಅಭಿನಯದ ಕೊನೆಯ ಸಿನಿಮಾ ರಾಜಮಾರ್ತಾಂಡ. ಮೆಚ್ಚಿನ ಅಭಿಮಾನಿಗಳ ನೆಚ್ಚಿನ ನಟ ಚಿರು ತೆರೆಯ ಮೇಲೆ ನೋಡೋಕೆ ಫ್ಯಾನ್ಸ್​ ಕೂಡ ಸಖತ್​ ಎಗ್ಸೈಟ್​​ ಆಗಿದ್ದಾರೆ. ಅಂತೂ ಧ್ರುವ ಸರ್ಜಾ ರಿಲೀಸ್​ ಡೇಟ್​​ ಫೈನಲ್​ ಮಾಡಿ ಗುಡ್​​ ನ್ಯುಸ್​ ಕೊಟ್ಟಿದ್ದಾರೆ. ಇನ್ನೇನು ರಾಜಮಾರ್ತಾಂಡನ ರಾಜಾತಿಥ್ಯಕ್ಕೆ ಸಕಲ ಸಿದ್ಧತೆ ಜೋರಾಗಿರಲಿದೆ. ಯೆಸ್​​.. ಚಿರು ಕೊನೆಯ ಚಿತ್ರದ  ಎಕ್ಸ್​​​ಕ್ಲ್ಯೂಸಿವ್​ ಅಪ್ಡೇಟ್​ ಇಲ್ಲಿದೆ.

ರಾಜಮಾರ್ತಾಂಡನ ಎಂಟ್ರಿಗೆ ಮುಹೂರ್ತ ಇಟ್ಟ ಧ್ರುವ

ಚಿರು ಕೊನೆಯ ಸಿನಿಮಾಗೆ ಇರಲಿದೆ ಗ್ರ್ಯಾಂಡ್​ ವೆಲ್ಕಮ್​​

ಚಿರು ರಾಯಲ್​ ಎಂಟ್ರಿಗೆ ಸ್ಯಾಂಡಲ್​ವುಡ್​ ಸ್ಟಾರ್ಸ್​ ಸಾಥ್​

ರಾಜಮಾರ್ತಾಂಡನ ದರ್ಬಾರ್​ ಜೊತೆ ರಾಯನ್​ ಕಟೌಟ್​​

ಚಿರಂಜೀವಿ ಸರ್ಜಾ ಕೇವಲ ನಟನೆಯ ಮೂಲಕ ಜನಮನ ಗೆದ್ದವರಲ್ಲ. ತಮ್ಮ ನಡತೆ, ಸ್ನೇಹಪರ ಕಾಳಜಿ, ಪ್ರೀತಿ ವಿಶ್ವಾಸದಿಂದ ಎಲ್ಲರಿಗೂ ಅಚ್ಚುಮೆಚ್ಚಾದವರು. ಅವರ ಅಗಲಿಕೆಯ ನೋವು ಕುಟುಂಬಕ್ಕೆ ಮಾತ್ರವಲ್ಲದೇ ಇಡೀ ಕರುನಾಡಿನ ಕೋಟಿ ಮನಗಳಲ್ಲಿ ಮಾಸದೇ ಅಚ್ಚೊತ್ತಿದೆ. ಅವರ ಸಿನಿಮಾಗಳು ಅವರ ನೆನಪು ಕಾಡುವಂತೆ ಮಾಡುತ್ತವೆ. ಮತ್ತೆ ಸಿಲ್ವರ್​ ಸ್ಕ್ರೀನ್ ಮೇಲೆ  ಚಿರು ಅವರ ಸಹಜಾಭಿನಯ ನೋಡೋದೆ ಚಂದ. ಯೆಸ್​​.. ನಿಮ್ಮೆಲ್ಲರ ಕನಸಿಗೆ ರೆಕ್ಕೆಯಾಗಿ ರಾಜಾಮಾರ್ತಾಂಡ ಸದ್ಯದಲ್ಲೇ ಬರ್ತಿದ್ದಾನೆ.

ರಾಜಮಾರ್ತಾಂಡನ ಅಬ್ಬರ ಶುರುವಾಗೋಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಖುದ್ದಾಗಿ ಧ್ರುವ ಸರ್ಜಾ, ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸೋ ಅಣ್ಣನಿಗೆ ಡಬ್ಬಿಂಗ್​ ಮಾಡಿ ಜೀವ ತುಂಬಿದ್ದಾರೆ. ಜೊತೆಗೆ ಸೆಪ್ಟೆಂಬರ್​ 02ಕ್ಕೆ ರಾಜ್ಯಾದ್ಯಂತ ತೆರೆಗೆ ಬರೋದಾಗಿ ಅನೌನ್ಸ್​ ಮಾಡಿ ಅಭಿಮಾನಿಗಳ ದಿಲ್​ ಖುಷ್​ ಮಾಡಿದ್ದಾರೆ. ಚಿತ್ರದ ಹಾಡುಗಳು ಕೇಳುಗರಿಗೆ ಗುಂಗಿಡಿಸಿದ್ದು, ಟ್ರೈಲರ್​ ಸಿಕ್ಕಾಪಟ್ಟೆ ಹಿಟ್​​ ಆಗಿದೆ. ಇನ್ನೇನು ರಾಜಮಾರ್ತಾಂಡನನ್ನು ಅದ್ದೂರಿಯಾಗಿ ವೆಲ್ಕಮ್​ ಮಾಡೋಕೆ  ಸೆ 02 ಫೈನಲ್​ ಡೇಟ್​ ಫಿಕ್ಸ್ ಆಗಿದೆ.

ಚಿರು ಈ ಸಿನಿಮಾದಲ್ಲಿ ಮಾಸ್​ ಹೀರೋ ಆಗಿ ಮಿಂಚಿದ್ದಾರೆ. ಖಡಕ್​ ಡೈಲಾಗ್​, ಆ್ಯಕ್ಷನ್​​ ಸೀಕ್ವೆನ್ಸ್​​ಗಳಲ್ಲಿ ಭರ್ಜರಿಯಾಗಿ ಕಾಣಿಸಿದ್ದಾರೆ. ರಗಡ್​ ರೋಲ್​​ನಲ್ಲಿ ಪ್ರತಿ ಫ್ರೇಮಿನಲ್ಲೂ ಫಸ್ಟ್​ ಕ್ಲಾಸ್​ ಆಗಿ ಅಭಿನಯಿಸಿದ್ದಾರೆ. ನಾಯಕಿಯಾಗಿ ದೀಪ್ತಿ ಸಾಥಿ ಕೂಡ ಸಖತ್ ಆಗಿ ಮಿಂಚಿದ್ದಾರೆ. ಇದ್ರ ಜೊತೆಯಲ್ಲಿ ಚಿರು ಪುತ್ರ ರಾಯನ್ ಕೂಡ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರಂತೆ. ಥಿಯೇಟರ್​ ಮುಂದೆ ಚಿರು ಕಟೌಟ್​ ಜೊತೆ ಮಗ ರಾಯನ್​ ಕಟೌಟ್​​ ಕೂಡ ರಾರಾಜಿಸಲಿದೆಯಂತೆ.

ಸ್ಯಾಂಡಲ್​ವುಡ್​ನ ಸ್ಟಾರ್​ ನಟರ ಜೊತೆ ತೆರೆ ಹಂಚಿಕೊಂಡಿರುವ ಕನ್ನಡದ ವಾಯುಪುತ್ರ ಚಿರಂಜೀವಿ ಸರ್ಜಾ ಎಲ್ಲರಿಗೂ ಅಚ್ಚುಮೆಚ್ಚು. ಹಾಗಾಗಿ ಚಂದನವನದ ತಾರೆಯರು ಚಿರು ಸಿನಿಮಾಗೆ ಕಾಯ್ತಿದ್ದಾರೆ. ಸರ್ಜಾ ಕುಟುಂಬಕ್ಕೂ ಈ ಸಿನಿಮಾ ತುಂಬಾ ವಿಶೇಷವಾಗಿರೋದ್ರಿಂದ ಭರ್ಜರಿಯಾಗಿ ವೆಲ್ಕಮ್​ ಮಾಡೋಕೆ ಎಲ್ಲರೂ ತುದಿಗಾಲಲ್ಲಿ ಕಾಯ್ತಿದ್ದಾರೆ.

ಕೆ. ರಾಮ್ ನಾರಾಯಣ್ ನಿರ್ದೇಶನದಲ್ಲಿ ಮೂಡಿ ಬಂದಿರೋ ರಾಜಮಾರ್ತಾಂಡ ಚಿತ್ರಕ್ಕೆ ಶಿವಕುಮಾರ್ ಬಂಡವಾಳ ಹೂಡಿದ್ದಾರೆ. ಶ್ರೀ ಮಾದೇಶ್ವರ ಪ್ರೊಡಕ್ಷನ್ ಅಡಿಯಲ್ಲಿ ಮಾರ್ತಾಂಡನ ಮ್ಯಾಜಿಕ್ ಇಂಪ್ರೆಸ್ ಮಾಡಲಿದೆ. ಅರ್ಜುನ್ ಜನ್ಯಾ ಮ್ಯೂಸಿಕ್ ಈಗಾಗ್ಲೇ ಹಿಟ್ ಆಗಿದೆ. ಒಟ್ಟಾರೆಯಾಗಿ ಚಿತ್ರರಸಿಕರು, ಚಿರು ಅಭಿಮಾನಿಗಳು ಬಹು ನಿರೀಕ್ಷೆಯಿಂದ ಕಾಯ್ತಾ ಇರೋ ಸಿನಿಮಾ ರಾಜಾಮಾರ್ತಾಂಡ ಯಶಸ್ಸು ಕಾಣಲಿ ಎಂದು ಆಶಿಸೋಣ.

ರಾಕೇಶ್​ ಆರುಂಡಿ, ಫಿಲ್ಮ್ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES