ರಾಮನಗರ: ಹಾಲಿ ಸರ್ಕಾರವನ್ನು ತೆಗೆದು ಬಿಜೆಪಿ ಸರ್ಕಾರ ರಚನೆ ಮಾಡಲು ಹೊರಟಿದ್ದಾರೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ಆಪರೇಷನ್ ಕಮಲ ವಿಚಾರವಾಗಿ ಮಾತನಾಡಿದ ಅವರು, ನಮಗೇನು ಗೊತ್ತಿಲ್ಲ ಎಂಬ ಹೇಳಿಕೆಗಳನ್ನು ಬಿಜೆಪಿ ನಾಯಕರು ಹೇಳಿದ್ರು ಇಡೀ ದೇಶಕ್ಕೆ ಅದು ಗೊತ್ತಿದೆ. ಬಿಜೆಪಿಯ ಸರ್ಕಾರಗಳಿರುವ ರಾಜ್ಯಕ್ಕೆ ಅಲ್ಲಿನ ಶಾಸಕರನ್ನು ಹೈಜಾಕ್ ಮಾಡಿ ಇಲ್ಲಿ ಇರಿಸಿಕೊಂಡಿದ್ದಾರೆ ಎಂದರು.
ಅದಲ್ಲದೇ, ಕರ್ನಾಟಕದಲ್ಲೂ ನಮ್ಮ ಸರ್ಕಾರ ಇದ್ದಾಗ ಮುಂಬೈನಲ್ಲಿ ಅವರು ಶಾಸಕರನ್ನು ಇಟ್ಟುಕೊಂಡಿದ್ದು ಇಲ್ಲಿ ನೆನಪಾಗುತ್ತದೆ. ಶಾಸಕರು ಹೊರ ಹೋಗುವ ಸಂದರ್ಬದಲ್ಲಿ ಶಾಸಕರಿಗೆ ಏನೆಲ್ಲಾ ಆಮಿಶಗಳನ್ನು ಕೊಟ್ಟಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಚುನಾಯಿತ ಸರ್ಕಾರಗಳನ್ನು ಅಸ್ಥಿರಗೊಳಿಸಲು ಬಿಜೆಪಿ ಹೊರಟಿದೆ ಎಂದು ಹೇಳಿದರು.
ಇನ್ನು, ದೇಶದಲ್ಲಿ ಯಾವುದೇ ವಿರೋಧ ಪಕ್ಷಗಳು ಇರಬಾರದು ಎಂದು ಬಿಜೆಪಿ ಹೊರಟಿದೆ. ಕೇಂದ್ರಗಳನನ್ನು ಒಳಗೊಂಡತೆ ಎಲ್ಲಾ ರಾಜ್ಯಗಳಲ್ಲೂ ಬಿಜೆಪಿ ಸರ್ಕಾರಗಳನ್ನು ರಚನೆ ಮಾಡಲು ಹೊರಟಿದೆ. ಕುತಂತ್ರದ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಮಾರಕವಾಗಿದೆ. ಈ ಬೆಳವಣಿಗೆಳನ್ನು ನೋಡಿದ್ರೆ ಮುಂದಿನ ದಿನಗಳಲ್ಲಿ ಬಿಜೆಪಿ ಅವರಿಗೆ ಭೂಮ್ ರಂಗ್ ಆಗುತ್ತದೆ ಎಂದು ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್ ಡಿಕೆ ಕಿಡಿಕಾಡಿದ್ದಾರೆ.