Friday, November 8, 2024

ಶಿಕ್ಷಣ ಸಚಿವರನ್ನೇ ಹೊರಗಿಟ್ಟು ಅಶೋಕ್‌ ಪ್ರೆಸ್‌ಮೀಟ್‌

ಬೆಂಗಳೂರು : ಸದ್ಯಕ್ಕೆ ರಾಜ್ಯದಲ್ಲಿ ನಡೀತಿರೋ ಪಠ್ಯ ಪುಸ್ತಕ ಗೊಂದಲ ಮುಗಿಯುವ ಲಕ್ಷಣಗಳು ಕಾಣ್ತಿಲ್ಲ. ಇಷ್ಟು ದಿನ ಯಾವುದೇ ವಿಚಾರಕ್ಕೂ ದಿಢೀರ್‌ ಅಂತ ಪ್ರತ್ಯಕ್ಷರಾಗಿ ಪ್ರೆಸ್‌ ಮೀಟ್‌ ಮಾಡ್ತಿದ್ದ ಶಿಕ್ಷಣ ಸಚಿವರು ಅದ್ಯಾಕೆ ಮಿಸ್‌ ಆಗಿದ್ರು.. ಅವರ ಬದಲು ಅಶೋಕ್‌ ಪ್ರೆಸ್‌ ಮೀಟ್‌ ಮಾಡಿ ಪಠ್ಯ ಪುಸ್ತರ ಪರಿಷ್ಕರಣೆ ಸಮರ್ಥನೆಗಿಳಿದಿದ್ದಾರೆ.

ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ರೋಹಿತ್ ಚಕ್ರತೀರ್ಥ ಮಾಡಿಟ್ಟ ಯಡವಟ್ಟಿನಿಂದ ಕೈಕೈ ಹಿಸುಕಿಕೊಳ್ತಿದೆ. ಒಂದೊಂದೇ ಯಡವಟ್ಟುಗಳು ಹೊರಬೀಳ್ತಿರೋದ್ರಿಂದ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗ್ತಿದೆ.. ಪ್ರತಿಪಕ್ಷಗಳು ಪಠ್ಯ ವಿರೋಧಿಸಿ ಬೀದಿಗಿಳಿದಿವೆ.. ಸಾಹಿತಿ, ಲೇಖಕರು ಸರ್ಕಾರಕ್ಕೆ ಪತ್ರಗಳ ಮೇಲೆ ಪತ್ರ ಬರೆಯುತ್ತಿದ್ದಾರೆ. ಪಠ್ಯದಲ್ಲಿ ಒಂದೊಂದು ಸಮುದಾಯವನ್ನ ಪ್ರತಿನಿಧಿಸುವ ಮಹನಿಯರನ್ನೇ ಅಪಮಾನಿಸಿರೋದ್ರಿಂದ ಸಮುದಾಯಗಳ ಅವಕೃಪೆಗೂ ಒಳಗಾಗಬೇಕಿದೆ. ಹೀಗಾಗಿ ಪಠ್ಯವನ್ನು ಮತ್ತೊಮ್ಮೆ ಪರಿಷ್ಕರಣೆ ಮಾಡೋಣ ಅಂದ್ರೆ ಶಾಲೆಗಳು ಪ್ರಾರಂಭವಾಗಿವೆ. ಮಕ್ಕಳಿಗೆ ಪಾಠ ಕೇಳೋಕೆ ಟೆಕ್ಸ್ಟ್ ಬುಕ್ ಸಿಗ್ತಿಲ್ಲ..ಇತ್ತ ಹೊಸ ಪಠ್ಯ ವಾಪಸ್ ಪಡೆದು ಹಳೆಯದನ್ನು ಮುಂದುವರೆಸೋಣ ಅಂದ್ರೆ ಸಂಘ ಪರಿವಾರ ಬಿಲ್ ಕುಲ್ ಒಪ್ಪಲ್ಲ.. ಹೀಗಾಗಿ, ಸಿಎಂ ಬೊಮ್ಮಾಯಿ ಮನಸ್ಸಿಲ್ಲದಿದ್ರೂ ಸಮರ್ಥನೆ ಮಾಡಿಕೊಳ್ಳಬೇಕಿದೆ. ಹಾಗಾಗಿ ನಾಮಕಾವಸ್ತೆಗೆ ಸಭೆಯನ್ನು ನಡೆಸಿದ್ದಾರೆ.. ತಮ್ಮ ಸಚಿವ ಪಟಾಲಂ ಅನ್ನು ಮುಂದೆ ಬಿಟ್ಟು ತಾವು ಮಾಡಿದ್ದೇ ಸರಿ ಅಂತ ಸಮರ್ಥನೆ ಮಾಡಿಕೊಳ್ಳೋ ಪ್ರಯತ್ನ ನಡೆಸಿದ್ದಾರೆ. ಜೊತೆಗೆ ಹಿಂದಿನ ಸರ್ಕಾರದ ತಪ್ಪುಗಳನ್ನು ಒಂದೊಂದೇ ಬಿಚ್ಚಿಡುತ್ತಿದ್ದಾರೆ.

ಸರ್ಕಾರದ ಪರವಾಗಿ ಆರ್.ಅಶೋಕ್, ಭೈರತಿ ಬಸವರಾಜ್, ಸಿ.ಸಿ.ಪಾಟೀಲ್ ಹಾಗೂ ಅರೆಬೈಲು ಶಿವರಾಂ ಹೆಬ್ಬಾರ್ ಸುದ್ದಿಗೋಷ್ಠಿ ನಡೆಸಿದ್ರು.. ನಾವು ಹೊಸದಾಗಿ ಯಾರ ಪಾಠಗಳನ್ನೂ ಕೈಬಿಟ್ಟಿಲ್ಲ..ಹಿಂದಿನ ಸಿದ್ದರಾಮಯ್ಯ ಸರ್ಕಾರ ಮೊಘಲರನ್ನೇ ಹೈಲೈಟ್ ಮಾಡಿತ್ತು. ನಾವು ಅದನ್ನಷ್ಟೇ ಮೊಟಕು ಮಾಡಿದ್ದೇವೆ. ಮೈಸೂರು ಒಡೆಯರ್, ಕೆಂಪೇಗೌಡರ ಪಾಠಗಳನ್ನ ಸೇರಿಸಿದ್ದೇವೆ. ಪೆರಿಯಾರ್, ನಾರಾಯಣಗುರು ಪಾಠಗಳನ್ನ ಮುಂದುವರೆಸಿದ್ದೇವೆ. ಸುಮಾರು ೧೫೦ ತಪ್ಪುಗಳನ್ನ ಸರಿಪಡಿಸಿದ್ದೇವೆ. ಸಂವಿಧಾನ ಶಿಲ್ಪಿ ಎಂಬ ಪದವನ್ನ ಮರು ಸೇರ್ಪಡೆ ಮಾಡಿದ್ದೇವೆ. ಏಳೆಂಟು ತಪ್ಪುಗಳಾಗಿದೆ. ಅದನ್ನು ಸರಿಪಡಿಸುವ ಪ್ರಯತ್ನ ಮಾಡಿದ್ದೇವೆ. ನಾವು ಎಲ್ಲೂ ಯಾರನ್ನೂ ಕೈಬಿಟ್ಟಿಲ್ಲ ಅಂತ ಸಚಿವ ಅಶೋಕ್ ಸಮರ್ಥನೆ ಮಾಡಿಕೊಂಡ್ರು.

ಇನ್ನು ಸುದ್ದಿಗೋಷ್ಠಿಯಲ್ಲಿ ಅಶೋಕ್ ಸರ್ಕಾರವನ್ನ ಸಮರ್ಥನೆ ಮಾಡಿಕೊಳ್ಳೋದನ್ನು ಬಿಟ್ರೆ ತಪ್ಪುಗಳ ಬಗ್ಗೆ ಎಲ್ಲೂ ಹೇಳಲಿಲ್ಲ. ಸೂಲಿಬೆಲೆಯವರ ಪಾಠಗಳನ್ನ ಸೇರಿಸಿದ್ದು ಯಾವ ಆಧಾರದ ಮೇಲೆ ಅನ್ನೋ ಪ್ರಶ್ನೆಗೆ ಸಚಿವರಿಂದ ಉತ್ತರವಿಲ್ಲ. ರೋಹಿತ್ ಚಕ್ರತೀರ್ಥರನ್ನ ಯಾವ ಆಧಾರದ ಮೇಲೆ ಪರಿಷ್ಕರಣೆ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ರಿ ಅನ್ನೋ ಪ್ರಶ್ನೆಗೂ ನೋ ಆನ್ಸರ್.. ಮಾಜಿ ಪ್ರಧಾನಿ ದೇವೇಗೌಡರು, ಕುವೆಂಪು, ಬಸವಣ್ಣ, ಅಂಬೇಡ್ಕರ್‌ ಅಪಮಾನದ ಬಗ್ಗೆ ಬರೆದ ಪತ್ರದ ಬಗ್ಗೆ ಕೇಳಿದ್ರೂ ಉತ್ತರ ನೀಡದೆ ಸಿಎಂ ಹೇಳ್ತಾರೆ ಅಂತ ಬೆರಳು ತೋರಿಸಿದ್ರು ಸಚಿವ ಅಶೋಕ್. ಕೇವಲ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಾಡಿದ್ದಾರೆ ಅನ್ನೋ ತಪ್ಪುಗಳನ್ನ ತೋರಿಸಿದ್ದು ಬಿಟ್ರೆ, ನಾಲ್ವರು ಸಚಿವರು ಸರ್ಕಾರದ ತಪ್ಪುಗಳ ಬಗ್ಗೆಯೂ ಕಮಕ್ ಕಿಮಕ್ ಅನ್ನಲಿಲ್ಲ.

ಒಟ್ನಲ್ಲಿ ಪಠ್ಯ ಪುಸ್ತಕ ವಿಚಾರದಲ್ಲಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ಸಾಹಿತಿ, ಲೇಖಕರಿಂದ ಹಿಡಿದು ಪ್ರತಿಪಕ್ಷಗಳ ಕೆಂಗಣ್ಣಿಗೂ ಗುರಿಯಾಗಿದೆ. ದಿನಕ್ಕೊಂದು ಆರೋಪಗಳು ಹೊರಬೀಳ್ತಾನೇ ಇರೋದ್ರಿಂದ ಸಮುದಾಯಗಳ ಆಕ್ರೋಶಕ್ಕೆ ಗುರಿಯಾಗುವ ಸಾಧ್ಯತೆಯಿದೆ.. ಹಾಗಾಗಿ ಸರ್ಕಾರ ಮಾತ್ರ ಸಮರ್ಥಿಸಿಕೊಳ್ಳೋಕೆ ಪ್ರಯತ್ನ ಮಾಡ್ತಾನೇ ಇದೆ. ಹಾಗಾಗಿ ಇದು ಸದ್ಯಕ್ಕೆ ತಣ್ಣಗಾಗೋ ಲಕ್ಷಣಗಳು ಕಾಣ್ತಿಲ್ಲ.

ರಾಘವೇಂದ್ರ ವಿಎನ್ ಪೊಲಿಟಿಕಲ್ ಬ್ಯೂರೋ ಪವರ್ ಟಿವಿ

 

RELATED ARTICLES

Related Articles

TRENDING ARTICLES