ಹಾಸನ : ಆ ಜಿಲ್ಲೆಯ ಜನರು ಎಂದಿನಂತೆ ಮುಂಜಾನೆ ಎದ್ದು ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿದ್ರು..ಅದ್ರೆ ಇದ್ದಕ್ಕಿದ್ದ ಹಾಗೇ ನಡುಗಿದ ಭೂಮಿಗೆ ಆ ಜಿಲ್ಲೆಯ ಜನರು ದಿಕ್ಕಾಪಾಲಗಿದೆ ಓಡಿದ್ರು. ಮೊದ್ಲೆ ಅಫ್ಘಾನಿಸ್ತಾನದ ಭಯಾನಕ ಭೂಕಂಪ ನೋಡಿ ಭಯದಲ್ಲಿದ್ದ ಬಡಪಾಯಿಗಳು ದಿನವಿಡೀ ಆತಂಕದಲ್ಲೇ ಕಾಲಳೆದ್ರು. ಹಾಗಾದ್ರೆ ಭೂಮಿ ನಡುಗಿದ್ದು ಎಲ್ಲಿ ಗೊತ್ತಾ ಇಲ್ಲಿದೆ ನೋಡಿ.
ಎಂದಿನಂತೆ ಹಾಸನ ಜಿಲ್ಲೆಯ ಜನರು ಮುಂಜಾನೆಯೇ ಎದ್ದು ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಲು ರೆಡಿಯಾಗ್ತಿದ್ರು. ಆದ್ರೆ ಬೆಳಗಿನ ಜಾವ 4.30ರ ಸುಮಾರಿಗೆ ಹಾಸನದಲ್ಲಿ ಭೂ ಕಂಪನಕ್ಕೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ರು. ಮುಂಜಾನೆ ಸುಖ ನಿದ್ರೆಯಲ್ಲಿದ್ದ ಮಕ್ಕಳೊಂದಿಗೆ ಎದ್ನೋ ಬಿದ್ನೋ ಅಂತ ಮನೆಯಿಂದ ಓಡಿ ಬಂದಿದ್ದರು. ಅರಕಲಗೂಡು, ಹೊಳೆನರಸೀಪುರ ಮತ್ತು ಹಾಸನ ತಾಲೂಕಿನಲ್ಲಿ ಭೂಕಂಪನವಾಗಿದೆ. ಹೊಳೆನರಸೀಪುರ ತಾಲ್ಲೂಕಿನ ಬೆಟ್ಟದಸಾತೇನಹಳ್ಳಿ, ಹಳ್ಳಿಮೈಸೂರು, ದೊಡ್ಡಕಾಡನೂರು, ಮಾಕವಳ್ಳಿ, ತೇಜೂರು, ಗೋಹಳ್ಳಿ, ಕುರಿ ಕಾವಲು, ಓಡನಹಳ್ಳಿ, ನಿಡುವಣಿ, ಗ್ರಾಮಗಳಲ್ಲಿ ಭೂಮಿ ಕಂಪಿಸಿದೆ. ಜೊತೆಗೆ ಅರಕಲಗೂಡು ತಾಲೂಕಿನ ಹೆಗ್ಗಡಿಹಳ್ಳಿ, ಹುಲಿಕಲ್, ದೊಡ್ಡಬೆಮ್ಮತ್ತಿ, ಬಿದರೂರು, ಕೊಣನೂರು ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಭೂಮಿ ನಡುಗಿದೆ…
ಇನ್ನು ಮಲುಗನಹಳ್ಳಿಯಲ್ಲಿ ಭೂಕಂಪನದ ಪಾಯಿಂಟ್ ಗುರುತಿಸಲಾಗಿದ್ದು, ರಿಕ್ಟರ್ ಮಾಪಕದಲ್ಲಿ ಸುಮಾರು 5.4ರಷ್ಟು ಭೂಕಂಪನದ ತೀವ್ರತೆ ದಾಖಲಾಗಿದೆ. ಭೂಮಿಯ ಪದರಿನ 5 ಕಿ.ಮಿ ಸುಮಾರಿನಲ್ಲಿ ಕಂಪನ ಅಲೆಗಳು ಕಾಣಿಸಿಕೊಂಡಿವೆ ಇದು ಭೂ ಕಂಪನ ಎಂದು ಭೂವಿಜ್ಞಾನ ಅಧಿಕಾರಿಗಳು ದೃಢಪಡಿಸಿದ್ದಾರೆ. ದೊಡ್ಡಕಾಡನೂರು ಗ್ರಾಮದಲ್ಲಿ ಚಂದ್ರಣ್ಣ ಎಂಬುವವರ ಬಿರುಕು ಬಿಟ್ಟಿದ್ದ ಮನೆ ಕುಸಿದು ಬಿದ್ದಿದ್ದರೆ, ಹಲವೆಡೆ ಗೋಡೆ ಬಿರುಕು ಬಿಟ್ಟಿದೆ. ಇದ್ರಿಂದ ಸಹಜವಾಗೇ ಗ್ರಾಮಸ್ಥರು ಹೆದರಿದ್ದಾರೆ. ಹಾಸನ ತಾಲೂಕಿನ ಗೊರೂರು, ಕಟ್ಟಾಯ, ಚನ್ನಂಗಿಹಳ್ಳಿಯಲ್ಲೂ ಭೂಮಿ ಕಂಪಿಸಿದೆ.
ಒಟ್ಟಾರೆ ಬೆಳಗಿನ ಜಾವ ಸಂಭವಿಸಿದ ಭೂ ಕಂಪನದಿಂದ ಅರೆ ಮಲೆನಾಡು ಹಾಸನ ಜಿಲ್ಲೆಯ ಜನರು ಬೆಚ್ಚಿ ಬಿದ್ದಿದ್ದಾರೆ. ಮೊದ್ಲೆ ಅಫ್ಘಾನಿಸ್ತಾನ್‌ನಲ್ಲಿ ಆಗಿರೋ ಭೂಕಂಪ ನೋಡಿ ಬೆಚ್ಚಿಬಿದ್ದಿದ್ರು. ಇದೀಗ ನಮ್ಮ ಜಿಲ್ಲೆಯಲ್ಲಿ ಏನಾಗುತ್ತೋ ಎಂಬ ಆತಂಕದಲ್ಲಿ ಜನರಿದ್ದಾರೆ.
ಸಚಿನ್ ಶೆಟ್ಟಿ ಪವರ್ ಟಿವಿ ಹಾಸನ