ಬೆಂಗಳೂರು : ಈ ಬಾರಿ ಈದ್ಗಾ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಲಿದೆ ಎಂದು ಶಾಸಕ ಜಮೀರ್ ಅಹ್ಮದ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಬಿಬಿಎಂಪಿ ಮುಖ್ಯ ಅಯುಕ್ತರೇ ಈ ಮೈದಾನ ನಮಗೆ ಸೇರಿಲ್ಲ ಅಂತ ಹೇಳಿದರು. ವಕ್ಫ್ ಬೋರ್ಡ್ ಗೆ ಮೈದಾನದ ಖಾತೆ ಮಾಡಿಕೊಡೋದಾಗಿ ಸೂಕ್ಷ್ಮವಾಗಿ ಹೇಳಿದ್ದ ಬಿಬಿಎಂಪಿ. ಇಷ್ಟೆಲ್ಲಾ ವಿವಾದಗಳ ನಡುವೆನೇ ಸ್ವಾತಂತ್ರ್ಯ ದಿನಾಚರಣೆಗೆ ಹಾರುತ್ತಾ ರಾಷ್ಟ್ರಧ್ವಜ..? ವಕ್ಫ್ ಬೋರ್ಡ್ ನಿಂದಲೇ ತ್ರಿವರ್ಣ ಧ್ವಜ ಹಾರಿಸಲು ತೀರ್ಮಾನಿಸಿದ್ದಾರೆ.
ಇನ್ನು, ಈ ಕುರಿತಂತೆ ಸ್ಥಳೀಯ ಶಾಸಕರ ಜತೆ ಒಂದು ಸುತ್ತಿನ ಮಾತುಕತೆ ನಡೆಸಿರೋ ವಕ್ಫ್ ಬೋರ್ಡ್ ಹಿಂದೂ ಸಂಘಟನೆಗಳಿಗೆ ಸೆಡ್ಡು ಹೊಡೆದು ತಾವೇ ಧ್ವಜಾರೋಹಣ ಮಾಡೋಕೆ ಸಕಲ ಸಿದ್ದತೆಯನ್ನು ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪ್ಲಾನ್ ರೂಪಿಸಿದ ಸ್ಥಳೀಯ ಶಾಸಕ ಜಮ್ಮಿರ್ ಅಹಮದ್…! ಹಾಗಿದ್ರೆ ವಕ್ಫ್ ಬೋರ್ಡ್ ಸ್ಥಳೀಯ ಶಾಸಕ ಮಾಡಿರೋ ಪ್ಲಾನ್ ಗೆ ಹಿಂದೂ ಸಂಘಟನೆಗಳ ಬಾಯಿ ಬಂದ್ ಮಾಡಿದ್ದಾರೆ.
ಅದಲ್ಲದೇ, ವಕ್ಪ್ ಬೋರ್ಡ್, ಸ್ಥಳೀಯ ಶಾಸಕರ ಕಾಮನ್ ಮ್ಯಾನ್ ಪ್ಲಾನ್ ಗೆ ಹಿಂದೂ ಸಂಘಟನೆಗಳು ಗಪ್ ಚುಪ್ ಆಗಿದ್ದು, ಅಷ್ಟಕ್ಕೂ ಆಗಸ್ಟ್ 15 ರಂದು ಧ್ವಜ ಹಾರಿಸೋದು ಯಾರು ಅಂತ ಕೇಳಿದ್ರೆ ಶಾಕ್ ಗ್ಯಾರಂಟಿ..! ಹಾಗಿದ್ರೆ ವಿವಾದಿತ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸೋದು ಬೇರ್ಯಾರೂ ಅಲ್ಲ ನಾಡಿನ ದೊರೆ ಸಿಎಂ..! ಈಗಾಗಲೇ ಸಿಎಂ ಬೊಮ್ಮಯಿ ಜೊತೆ ಒಂದು ಸುತ್ತಿನ ಮಾತುಕಥೆ ನಡೆಸಿರೋ ಜಮೀರ್..! ಅಗಸ್ಟ್ ೧೫ ರಂದು ಬೆಳಿಗ್ಗೆ ೮ ಗಂಟೆಗೆ ಸಿಎಂರಿಂದಲೇ ಧ್ವಜಾರೋಹಣಕ್ಕೆ ಆಹ್ವಾನ ನೀಡಿದ್ದಾರೆ.
ಇನ್ನು, ಸಿಎಂ ಬೊಮ್ಮಯಿ ಕೂಡ ಜಮ್ಮಿರ್ ಮನವಿಗೆ ಕೊಟ್ಟಿದ್ದಾರಂತೆ ಗ್ರೀನ್ ಸಿಗ್ನಲ್ ನೀಡಿದ್ದು, ಈದ್ಗ ಮೈದಾನದಲ್ಲಿ ಇಷ್ಟು ವರ್ಷ ರಾಷ್ಟ್ರಧ್ವಜ ಹಾರಾಡಿಲ್ಲ. ಆದರೆ 75 ಅಮೃತ ಮಹೋತ್ಸವವನ್ನ ಇನ್ನಷ್ಟು ಗ್ರ್ಯಾಂಡ್ ಆಗಿ ಆಚರಿಸಲು ಪ್ಲಾನ್ ಮಾಡಲಾಗಿದ್ದು, ಈ ಬಾರಿ ೭೫ ನೇ ವರ್ಷದ ಸ್ವತಂತ್ರ ದಿನಾಚರಣೆ ವಿಜೃಂಭಣೆಯಿಂದ ಆಚರಿಸಲು ಸರ್ಕಾರ ಸಿದ್ಧತೆ ಮಾಡಿದ್ದಾರೆ. ಹಲವು ಸಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ೭೫ ನೇ ವರ್ಷದ ಸ್ವತಂತ್ರ ದಿನಾಚರಣೆ ಅಚರಿಸಲು ತೀರ್ಮಾನಿಸಿದ್ದು, ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯೋ ಪ್ಲಾನ್ ಮಾಡಿದ್ದಾರೆ.
ಸಿಎಂ ನೇತೃತ್ವದಲ್ಲಿ ಈ ಬಾರಿ ತ್ರಿವರ್ಣ ಧ್ವಜಾರೋಹಣಕ್ಕೆ ವೇದಿಕೆ ಸಿದ್ದತೆ ಮಾಡಲಾಗಿದ್ದು, ಸಿಎಂರಿಂದ ಧ್ವಜಾರೋಹಣ ಮಾಡಿಸಿದ್ರೆ ಯಾರೂ ವಿರೋಧಿಸಲ್ಲ ಅನ್ನೋ ಪ್ಲಾನ್ ಮಾಡಲಾಗಿದೆ. ಸಿಎಂ ಧ್ವಜಾರೋಹಣ ಮಾಡೋದನ್ನ ಯಾವುದೇ ಸಂಘಟನೆಗಳು ವಿರೋಧಿಸಲ್ಲ. ಈ ರೀತಿ ಮೆಗಾ ಪ್ಲಾನ್ ರೂಪಿಸಿದ್ದಾರೆ.