ಬಾಗಲಕೋಟೆ : ದೈಹಿಕ ಶಿಕ್ಷಕಿ ಆಗಬೇಕು ಅಂತ ಅಂದುಕೊಂಡಿದ್ದ ವಿಜಯಾ ಇವತ್ತು ಸಿಆರ್ಪಿಎಫ್ ಯೋಧೆಯಾಗಿದ್ದಾರೆ.
ಮೂಲತಃ ಬಾಗಲಕೋಟೆ ಜಿಲ್ಲೆಯ ಯಡಹಳ್ಳಿ ಗ್ರಾಮದ ವಿಜಯಾ ಹದ್ಲಿ. ಮೊದಲ ಪ್ರಯತ್ನದಲ್ಲಿ ಭಾರತಾಂಬೆ ಸೇವೆ ಮಾಡುವ ಅವಕಾಶವನ್ನ ಪಡೆದಿದ್ದಾರೆ. ದೈಹಿಕ ಶಿಕ್ಷಕಿ ಆಗಬೇಕು ಅಂತ ಅಂದುಕೊಂಡಿದ್ದ ವಿಜಯಾ ಇವತ್ತು ಸಿಆರ್ಪಿಎಫ್ ಯೋಧೆ. 2021 ರಲ್ಲಿ ಬೆಂಗಳೂರನ ಯಲಹಂಕದಲ್ಲಿ ನಡೆದ ಸಿಆರ್ಪಿಎಫ್ ಆಯ್ಕೆಯಾಗಿದ್ದಾರೆ.
ಇನ್ನು, ಗ್ರಾಮದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಗದ್ದನಕೇರಿ ಹಾಗೂ ಬಾಗಲಕೋಟೆಯಲ್ಲಿ ಕಾಲೇಜು ಶಿಕ್ಷಣ ಮುಗಿಸಿದ ವಿಜಯಾ ಕಲ್ಲಪ್ಪ & ರೇಣುಕಾ ದಂಪತಿಗಳ ಒಟ್ಟು ನಾಲ್ಕು ಜನ ಹೆಣ್ಣುಮಕ್ಕಳಲ್ಲಿ ವಿಜಯಾ ಎರಡನೇ ಮಗಳಾದ ಇವರು, ಅತಿ ಕಡು ಬಡತನದಲ್ಲಿಯೇ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಇದು ಭಾರತಾಂಬೆಯ ಸೇವೆ ಮಾಡಲು ತಂದೆ ತಾಯಿಗಳು ಕಳಿಸಿದ್ದಾರೆ. 9 ತಿಂಗಳ ಟ್ರೈನಿಂಗ್ ಬಳಿಕ ಇದೀಗ ದೇಶಸೇವೆಗೆ ಹೊರಟ ವಿಜಯಾ. ಭಾರತೀಯ ಸೇನೆ ಸೇವೆಗೆ ತೆರಳುತ್ತಿರುವುಕ್ಕೆ ಗ್ರಾಮಸ್ಥರಲ್ಲಿ ಸಂತಸ ತಂದಿದೆ.