ವಿಜಯಪುರ : ಇನ್ನೇನು ರಾಜ್ಯ ವಿಧಾನಸಭಾ ಚುನಾವಣೆಗೆ ಒಂದು 10 ತಿಂಗಳು ಬಾಕಿ ಇರುವಾಗಲೇ ವಿಜಯಪುರ ಜಿಲ್ಲೆಯ ರಾಜಕಾರಣಗಳಲ್ಲಿ ವಾಕ್ ಸಮರ ಶುರುವಾಗಿದೆ. ಮಾಜಿ ಸಚಿವ, ಹಾಲಿ ಶಾಸಕ ಶಿವಾನಂದ ಪಾಟೀಲ್ ಶಾಸಕ ಯತ್ನಾಳ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ. ಅಷ್ಟೇ ಅಲ್ಲದೇ ನಾನು ಮೂರು ಪಕ್ಷದಲ್ಲಿ ಚುನಾವಣೆಗೆ ನಿಂತು ಗೆದ್ದು ಬಂದಿರುವೆ, ಈ ಬಾರಿ ನಾನು ಎಲ್ಲಿ ಬೇಕಾದರೂ ಚುನಾವಣೆ ನಿಲ್ಲಲು ಸಿದ್ದ. ನಾನು ಪಕ್ಷೇತರನಾಗಿ ಚುನಾವಣೆಗೆ ನಿಲ್ಲುವೆ ಹಾಗೆ ಯತ್ನಾಳ ಕೂಡಾ ನನ್ನ ವಿರುದ್ದ ಪಕ್ಷೇತರರಾಗಿ ಸ್ಪರ್ದಿಸಲಿ ಆವಾಗ ಜನವೇ ತೀರ್ಮಾನ ಮಾಡುತ್ತಾರೆ ಎಂದು ಶಾಸಕ ಶಿವಾನಂದ ಪಾಟೀಲ್ ಸವಾಲು ಹಾಕಿದ್ದಾರೆ.
ಇನ್ನೇನು ರಾಜ್ಯ ವಿಧಾನಸಭಾ ಚುನಾವಣೆಗೆ ಒಂದು 10 ತಿಂಗಳು ಬಾಕಿ ಉಳಿದಿದೆ, ಈಗಾಗಲೇ ವಿಜಯಪುರ ಜಿಲ್ಲೆಯಲ್ಲಿ ಆರಂಭವಾಗಿದೆ ಶಾಸಕರುಗಳ ಮದ್ಯದ ವಾಕ್ ಸಮರ. ಮಾಜಿ ಸಚಿವ ಹಾಗೂ ಹಾಲಿ ಶಾಸಕ ಶಿವಾನಂದ ಪಾಟೀಲ್ ಹಾಗೂ ಹಿಂದೂ ಪೈರ್ ಬ್ರ್ಯಾಂಡ್ ಅಂತಲೇ ಗುರುತಿಸಿಕೊಂಡಿರುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮದ್ಯೆ ವಾಕ್ ಸಮರ ಶುರುವಾಗಿದೆ. ಇತ್ತೀಚೆಗೆ ವಿಜಯಪುರ ನಗರದ ದರಬಾರ್ ಹೈಸ್ಕೂಲ್ ಮೈದಾನದಲ್ಲಿ ನಡೆದ ಕನಕದಾಸ ಮೂರ್ತಿ ಅನಾವರಣ ಕಾರ್ಯಕ್ರಮದ ವೇಳೆ ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡಿದ್ದ ಶಾಸಕ ಯತ್ನಾಳ ಅಣ್ಣ ಒಂದು ಪಕ್ಷದಲ್ಲಿ ತಮ್ಮ ಒಂದು ಪಕ್ಷದಲ್ಲಿ ಇದ್ದಾರೆ ಎಂದು ಅಪರೋಕ್ಷವಾಗಿ ಶಿವಾನಂದ ಪಾಟೀಲ್ ಹಾಗೂ ವಿಜುಗೌಡ ಪಾಟೀಲ್ ವಿರುದ್ದ ಶಾಸಕ ಯತ್ನಾಳ ಆಕ್ರೋಶ ಹೊರಹಾಕಿದ್ದರು. ಇದರ ಬೆನ್ನಲ್ಲೇ ಈ ಕುರಿತು ಪ್ರತಿಕ್ರಿಯೆ ನೀಡಿದ ಬಸವನ ಬಾಗೇವಾಡಿ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್ ಬಹಿರಂಗ ಸವಾಲನ್ನು ಶಾಸಕ ಯತ್ನಾಳ ಅವರಿಗೆ ಹಾಕಿದ್ದಾರೆ. ಜನ ಯಾವ ಕ್ಷೇತ್ರದಲ್ಲಿ ನನ್ನ ಚುನಾವಣೆಗೆ ನಿಲ್ಲಲು ಹೇಳುತ್ತಾರೆ ಅಲ್ಲಿ ಹೊಗೋಕೆ ನಾನು ರೆಡಿ ಇದ್ದೇನೆ, ಇದೇ ಕ್ಷೇತ್ರದಲ್ಲೇ ನನಗೆ ಟಿಕೆಟ್ ಬೇಕು ಎಂದು ಸೀಮಿತ ನಾನಿಲ್ಲ, ಇನ್ನೂ ಕಾಂಗ್ರೆಸ್ ಪಕ್ಷದಿಂದ ನನಗೆ ವಿಜಯಪುರ ನಗರ ಕ್ಷೇತ್ರಕ್ಕೆ ಕೊಟ್ಟರೂ, ಬಬಲೇಶ್ವರ ಮತಕ್ಷೇತ್ರದಲ್ಲಿ ಕೊಟ್ಟರೂ ಹೊಗೋಕೆ ನಾನು ಸಿದ್ದ, ಇಲ್ಲ ಬಸವನ ಬಾಗೇವಾಡಿ ಅಲ್ಲಿಯೇ ಚುನಾವಣೆಗೆ ನಿಲ್ಲು ಎಂದರೆ ಅಲ್ಲೇ ಮುಂದು ವರೆಯುವೆ ಎಂದರು.
ಗಂಡಸ್ಥನದ ಸವಾಲು ಹಾಕಿದ ಶಾಸಕ ಶಿವಾನಂದ ಪಾಟೀಲ್ :
ಇನ್ನೂ ಅಣ್ಣ ಒಂದು ಪಕ್ಷ ತಮ್ಮ ಒಂದು ಪಕ್ಷದಲ್ಲಿದ್ದಾರೆ ಎಂದು ಶಾಸಕ ಯತ್ನಾಳ ಹೇಳಿಕೆಗೆ ಶಿವಾನಂದ ಪಾಟೀಲ್ ಆಕ್ರೋಶ ಹೊರ ಹಾಕಿದರು. ಗಂಡಸ್ಥನ ಇದ್ದರೆ ಆ ಅಣ್ಣ ತಮ್ಮ ಯಾರು ಎಂದು ಹೆಸರು ಬಹಿರಂಗಪಡಿಸಲಿ. ಅವರ ಅಣ್ಣನೂ ಇಲೆಕ್ಷನ್ ಗೆ ಸ್ಪರ್ದಿಸಿರಲಿಲ್ಲ ನಾನು ಅವರ ಹೆಸರು ತೆಗೆದು ಕೊಂಡಿದ್ದೀನಾ, ಇವರ ಸಲುವಾಗಿ ಅವರ ಅಣ್ಣ ಬಂದು ನನ್ನ ಮುಂದೆ ಏನೆಲ್ಲ ಹೇಳಿದರು ಅಂತಾ ನಾನು ಹೇಳಲಾ..? ಅವೆಲ್ಲಾ ಬೇಡಾ ನಾನು ಚಿಲ್ಲರೆ ರಾಜಕಾರಣ ಮಾಡಲ್ಲ ಎಂದು ಶಿವಾನಂದ ಪಾಟೀಲ್ ಹೇಳಿದರು…
ನಾನು ಒಂದೇ ಪಕ್ಷಕ್ಕೆ ಸೀಮಿತನಲ್ಲ :
ಇನ್ನೂ ನಾನು ಯಾವುದೇ ಒಂದು ಪಕ್ಷಕ್ಕೆ ಸೀಮಿತನಾಗಿಲ್ಲ ಎಂದು ಶಾಸಕ ಶಿವಾನಂದ ಪಾಟೀಲ್ ಹೇಳಿದರು. ಹಿಂದೆ ಬಿಜೆಪಿ ಇಂದ, ಜೆಡಿಎಸ್ ನಿಂದ ಗೆದ್ದಿದ್ದೆ, ಈಗ ಕಾಂಗ್ರೆಸ್ ನಿಂದಲೂ ಶಾಸಕನಾಗಿದ್ದೇನೆ. ನಾನು ಯಾವುದೇ ಒಂದು ಪಕ್ಷಕ್ಕೆ ಅಂಟಿಕೊಂಡು ರಾಜಕಾರಣ ಮಾಡಿದವನು ನಾನಲ್ಲ, ಯಾವುದಾದರೂ ನಮ್ಮ ಜಿಲ್ಲೆಗೆ, ರಾಜ್ಯಕ್ಕೆ ಒಳ್ಳೆಯದು ಆಗತ್ತೆ ಅಂತಹ ಕೆಲಸವನ್ನು ಮಾಡಬೇಕು ವಿನಃ ದುರುದ್ದೇಶದಿಂದ ಮೇಲಿಂದ ಮೇಲೆ ಮಾತನಾಡೋದು ಸರಿಯಲ್ಲ ಎಂದರು.
ಯತ್ನಾಳ್ಗೆ ಪ್ರವೋಕ್ ಮಾಡುತ್ತಿದ್ದಾರೆ :
ಶಾಸಕ ಯತ್ನಾಳ ನನ್ನ ಬಗ್ಗೆ ಸ್ವ ಪ್ರೇರಣೆಯಿಂದ ಮಾತನಾಡುತ್ತಿಲ್ಲ, ಯಾರೋ ಅವರಿಗೆ ಪ್ರವೋಕ್ ಮಾಡುತ್ತಿದ್ದಾರೆ. ನಾನು ಬರೋದು ಹೊಗೋದ್ರಿಂದ ಯತ್ನಾಳ ಗೆ ಬಾಧಕ ಆಗತ್ತೆ ಎಂದ್ರೆ ಯತ್ನಾಳ ವಿರುದ್ದ ಸ್ಪರ್ದಿಸಲು ನಾನು ಪಕ್ಷೇತರನಾಗಿ ರಡಿ ಅವರು ಪಕ್ಷೇತರನಾಗಿ ನನ್ನ ವಿರುದ್ದ ಸ್ಪರ್ದಿಸಲಿ, ಬೇಕಾದ್ರೆ ವಿಜಯಪುರ ನಗರ ಮತಕ್ಷೇತ್ರದಿಂದಲೇ ಸ್ಪರ್ದಿಸೋಣ ಎಂದು ಪಂಥಾವ್ಹಾನ ನೀಡಿದ್ದಾರೆ. ಇನ್ನೂ ಈ ವರೆಗೂ ನಾನು ಅವರ ಉಸಾಬರಿ ಮಾಡಿಲ್ಲ, ಅವರು ಎನೆಲ್ಲ ಮಾತನಾಡಿದ್ರು ನಾನು ಪ್ರತಿಕ್ರಿಯೆ ನೀಡಿಲ್ಲ, ಪದೇ ಪದೇ ಅವರು ಈ ರೀತಿ ಮಾತನಾಡುವದು ಅವರ ಘನತೆಗೆ ತಕ್ಕದಲ್ಲ, ನನ್ನ ಮೇಲೆ ಅಷ್ಟೋಂದು ಆಕ್ರೋಶ ಇದ್ದರೆ ನನ್ನ ವಿರುದ್ದವೇ ಚುನಾವಣೆಗೆ ನಿಲ್ಲಲಿ, ಜನ ಯಾರನ್ನು ಮುಚ್ಚುತ್ತಾರೆ ಅಂತಾ ಗೊತ್ತಾಗಲಿ ಎಂದು ಪಂತಾವ್ಹಾನ ನೀಡಿದ್ದಾರೆ…
ಶಿವಾನಂದ ಪಾಟೀಲ್ ಪಂತಾವ್ಹಾನಕ್ಕೆ ಯತ್ನಾಳ ಪ್ರತಿಕ್ರಿಯೆ
ನಾನು ವಿಜಯಪುರದಿಂದಲೇ ಸ್ಪರ್ದೆ ಮಾಡುವೆ ಅದು ಬಿಜೆಪಿ ಪಕ್ಷದಿಂದಲೇ ಸ್ಪರ್ದಿಸುವೆ. ಆ ಎಂ ಬಿ ಪಾಟೀಲ್ ಗೆ ಬ್ಲ್ಯಾಕ್‌ಮೇಲ ಮಾಡಿದಂಗೆ ನನಗೆ ಮಾಡೋಕೆ ಆಗಲ್ಲ ಎಂದು ಶಾಸಕ ಯತ್ನಾಳ ಪ್ರತಿಕ್ರಿಯೆ ನೀಡಿದ್ದಾರೆ.
ಈ ಇಬ್ಬರು ಶಾಸಕರುಗಳ ಮದ್ಯೆ ಶುರುವಾದ ವಾಕ್ ಸಮರ ಮುಂದೆ ಯಾವ ಹಂತಕ್ಕೆ ಬಂದು ತಲುಪತ್ತೊ ಕಾದು ನೋಡಬೇಕಿದೆ…
ಸುನೀಲ್ ಭಾಸ್ಕರ ಪವರ ಟಿವಿ ವಿಜಯಪುರ