Friday, November 22, 2024

RSS ಕಾರ್ಯಕರ್ತರು ಆಗಿದ್ರೆ ಸೈನ್ಯದಲ್ಲಿ ಸೇರೋದ್ರಲ್ಲಿ ತಪ್ಪೇನಿದೆ : ಡಾ ಕೆ.ಸುಧಾಕರ್

ಚಿಕ್ಕಬಳ್ಳಾಪುರ : ಅಗ್ನಿಪಥ್​ನಿಂದ ಆಗುವಂತಹ ಲಾಭ ಏನು ಅಂತ ಏನಾದಾರೂ ಅರ್ಥ ಮಾಡಿಕೊಂಡಿದ್ದೀರಾ ಎಂದು ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ ಕೆ.ಸುಧಾಕರ್ ಹೇಳಿದ್ದಾರೆ.

ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಮಾತನಾಡಿದ ಅವರು, ಆರ್ ಎಸ್ ಎಸ್ ಕಾರ್ಯಕರ್ತರೇ ಆಗಿದ್ರೆ ಸೈನ್ಯದಲ್ಲಿ ಸೇರೋದ್ರಲ್ಲಿ ತಪ್ಪೇನಿದೆ. ಈ ದೇಶಕ್ಕೆ ಎಲ್ಲ ರೀತಿಯಲ್ಲಿ ಸರ್ವತ್ಯಾಗವನ್ನೂ ಮಾಡ್ತೇನೆ ಅಂತ ಬರುವವರು ಆರ್ ಎಸ್ ಎಸ್ ಆದ್ರೆ ಏನು ಬೇರೆ ಸಂಘಟನೆ ಆದರೆ ಏನು ? ಎಂದರು.

ಅಗ್ನಿಪಥ್ ಯೋಜನೆಗೆ ಕಾಂಗ್ರೆಸ್ ವಿರೋಧ ವಿಚಾರವಾಗಿ ಮಾತನಾಡಿದ ಅವರು, ಅಗ್ನಿಪಥ್ ಅಂದ್ರೆ ಏನು ಅಂತ ಅವರಿಗೆ ಅರ್ಥ ಆಗಿದ್ಯಾ..? ಸುಮ್ನೆ ಬಾಯಿ ಬಡಕೊಳೋಂತದಲ್ಲ. ಅಗ್ನಿಪಥ್ ನಿಂದ ಆಗುವಂತಹ ಲಾಭ ಏನು ಅಂತ ಏನಾದಾರೂ ಅರ್ಥ ಮಾಡಿಕೊಂಡಿದ್ದೀರಾ. 4 ವರ್ಷ ಇಂತಹ ಸೈನ್ಯದಲ್ಲಿ ಸೇರಿದರೆ ಯುವಕರು ಹೊರಬಂದ ಮೇಲೆ ಅವರು ಈ ದೇಶದ ಬಗ್ಗೆ ಇಟ್ಟುಕೊಳ್ಳುವಂತಹ ಅಭಿಮಾನ ಹೆಚ್ಚಾಗ್ತದೆ ಎಂದರು.

ಅದಲ್ಲದೇ, ಅಭಿಮಾನ ಇಟ್ಟುಕೊಂಡಿರುವವರು ಯಾವುದೇ ಉದ್ಯೋಗ ಪಡೆದ ಮೇಲೆ ಬದಲಾವಣೆ ಬರುತ್ತೆ. ಯಾವ ರೀತಿ ಬದಲಾವಣೆ ಬರುವಂತಹ ಇಂಗಿತ ಜ್ಞಾನ ಇಲ್ಲದೆ ಇರುವಂತದ್ದು ವಿರೋಧ ಪಕ್ಷಗಳಿಗೆ ನಿಜವಾಗಿಯೂ ಕೂಡ ನನಗೆ ಖೇದ ಅನಿಸ್ತಾ ಇದೆ ಎಂದು ಚಿಕ್ಕಬಳ್ಳಾಪುರ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಸಚಿವ ಸುಧಾಕರ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES