Monday, December 23, 2024

ವಾಹನ ಸವಾರರೇ ಇಂದು ರಸ್ತೆಗಿಳಿಯೋ ಮುನ್ನ ಎಚ್ಚರ ಎಚ್ಚರ

ಬೆಂಗಳೂರು : ಇಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮನ ಹಲವೆಡೆ ರಸ್ತೆ ಸಂಚಾರ ಬಂದ್ ಮಾಡಲಾಗಿದೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧ್ಯಾಹ್ನ 12-30 ರಿಂದ 3 ಗಂಟೆಯವರಿಗೆ ಹಲವು ರಸ್ತೆಗಳಲ್ಲಿ ಸಂಚಾರ ಕಂಪ್ಲೀಟ್ ಬಂದ್ ಆಗಲಿದೆ.ವಾಹನ ಸವಾರರಿಗೇ ಇಂದು ಪರ್ಯಾಯ ಮಾರ್ಗ ಕಂಡುಕೊಳ್ಳಿ ಭಾರಿ ವಾಹನಗಳ ಓಡಾಡೋ ರಸ್ತೆಗಳಲ್ಲೂ ಬದಲಾವಣೆಯನ್ನು ಮಾಡಲಾಗಿದೆ.

ಇನ್ನು, ಬೆಳಗ್ಗೆ 11 ರಿಂದ 1 ಗಂಟೆವರೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಮತ್ತು ಬರುವರು ಕಾವೇರಿ ವೃತ್ತ, ಮೇಖ್ರಿವೃತ್ತ ಮತ್ತು ಹೆಬ್ಬಾಳ ಫ್ಲೈಓವರನ್ನು ಬಳಸಬೇಡಿ. ಮಧ್ಯಾಹ್ನ 12.30ರಿಂದ 2.30ರವರೆಗೆ ಮೈಸೂರು ರಸ್ತೆ ಮತ್ತು ನೈಸ್ ಬ್ರಿಡ್ಜ್ ಕಡೆಯಿಂದ ಕೆಂಗೇರಿ, ಬೆಂಗಳೂರು ಕಡೆಗೆ ಹಾಗೂ ಉತ್ತರಹಳ್ಳಿ ರಸ್ತೆ ಕಡೆಯಿಂದ ಕೆಂಗೇರಿ, ಮೈಸೂರು ಕಡೆಗೆ ಸಂಚಾರವನ್ನು ನಿರ್ಬಂಧಿಸಲಾಗಿದೆ. ಬೆಳಗ್ಗೆ 9ರಿಂದ ಸಂಜೆ 6 ಗಂಟೆವರೆಗೆ ಮೈಸೂರು-ಬೆಂಗಳೂರು ರಸ್ತೆ ಮತ್ತು ವಿಮಾನ ನಿಲ್ದಾಣ ರಸ್ತೆಯಲ್ಲಿ ಭಾರಿ ವಾಹನ ಸಂಚಾರ ನಿಷೇಧಿಸಲಾಗಿದೆ.ಮಧ್ಯಾಹ್ನ 1 ರಿಂದ 3.30ವರೆಗೆ ಕೊಮ್ಮಘಟ್ಟ ಮತ್ತು ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಪ್ರಧಾನಿ ಕಾರ್ಯಕ್ರಮ ಇರುವ ಕಾರಣ ಭದ್ರತೆ, ಸುಗಮ ಸಂಚಾರ ಸಲುವಾಗಿ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ.

ನಿಷೇಧಿಸಲಾದ ರಸ್ತೆಗೆ ಪರ್ಯಾಯ ಮಾರ್ಗ
-ಮಾಗಡಿ ಮುಖ್ಯರಸ್ತೆ ಮೂಲಕ ನೈಸ್‌ ರಸ್ತೆ (ಕ್ರ.ಸಂ 1 ರಿಂದ 4) ನೈಸ್ ರಸ್ತೆಯ ಮುಖಾಂತರ
-ಉತ್ತರಹಳ್ಳಿ ಮುಖ್ಯ ರಸ್ತೆ ಕಡೆಗೆ, ಬೆಂಗಳೂರು ನಗರದ ಕಡೆಗೆ ಅವಕಾಶ.
-ಹೊಸಕೋಟೆ ಟೋಲ್‌ ಗೇಟ್ ನಿಂದ ಬೂದಿಗೆರೆ ಕ್ರಾಸ್ ಮೂಲಕ ಅವಕಾಶ
-ನೈಸ್ ರಸ್ತೆಯ ಮೂಲಕ ತುಮಕೂರು ರಸ್ತೆ ಹಾಗೂ ಮೈಸೂರು ರಸ್ತೆ ಕಡೆಗೆ ಅವಕಾಶವನ್ನು ನೀಡಲಾಗಿದೆ.

RELATED ARTICLES

Related Articles

TRENDING ARTICLES