ಬೆಂಗಳೂರು : ಎರಡ್ಮೂರು ದಿನಗಳಿಂದ ತಣ್ಣಗಿದ್ದ ಪಠ್ಯ ಪುಸ್ತಕ ವಿವಾದ ಮತ್ತೆ ಎಡೆಬಿಚ್ಚಿದೆ.. ಮಾಜಿ ಪ್ರಧಾನಿ ಎಂಟ್ರಿಯಿಂದ ಕಿಚ್ಚು ಮತ್ತಷ್ಟು ಹೆಚ್ಚಿದೆ. ಸಾಹಿತಿಗಳು,ಪ್ರಗತಿಪರರು, ವಿವಿಧ ಸಂಘಟನೆಗಳ ಬೆಂಬಲವೂ ಸಿಕ್ಕಿದೆ.. ನಾಳಿನ ಪ್ರತಿಭಟನೆಗೆ ಕಾಂಗ್ರೆಸ್ ಸಹಕಾರವೂ ದಕ್ಕಿದೆ.. ಹೀಗಾಗಿ ನಾಳೆ ನಡೆಯುವ ಕುವೆಂಪು ಹೋರಾಟ ಸಮಿತಿಯ ಪ್ರತಿಭಟನೆ ಸರ್ಕಾರಕ್ಕೆ ಮುಳುವಾಗಲಿದೆ.
ಕಳೆದ ಐದಾರು ದಿನಗಳಿಂದ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿತ್ತು.. ರಾಹುಲ್ ಗಾಂಧಿಯವರ ಇಡಿ ವಿಚಾರಣೆಯಿಂದ ತಣ್ಣಗಾಗಿತ್ತು.. ಆದ್ರೆ, ಇದೀಗ ಹೋರಾಟಕ್ಕೆಮತ್ತೆ ಜೀವ ಬಂದಿದೆ.. ನಾಳೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಗೆ ಕುವೆಂಪು ಹೋರಾಟ ಸಮಿತಿ ಕರೆ ಕೊಟ್ಟಿದೆ.. ಫ್ರೀಡಂಪಾರ್ಕ್‌ನಲ್ಲಿ ನಡೆಯಲಿರುವ ಪ್ರತಿಭಟನೆ ಕನ್ನಡಪರ ಸಂಘಟನೆಗಳು, ಪ್ರಗತಿಪರರು, ಸಾಹಿತಿ, ಲೇಖಕರು ಬೆಂಬಲಿಸಿದ್ದಾರೆ.. ರಾಜ್ಯದ ನಾನಾ ಕಡೆಗಳಿಂದ ಪ್ರತಿಭಟನೆಗೆ ಜನಸಾಗರವೇ ಹರಿದು ಬರಲಿದೆ..
ಹೋರಾಟಕ್ಕೆ ಎಂಟ್ರಿ ಕೊಟ್ಟಿದ್ದಾರೆ ರಾಜಕೀಯ ಭೀಷ್ಮ :
ಇನ್ನು ಪಠ್ಯ ಪುಸ್ತಕದಲ್ಲಿ ರಾಷ್ಟ್ರಕವಿ ಕುವೆಂಪು ಅವರನ್ನೂ ಅಪಮಾನಿಸಲಾಗಿದೆ ಎಂಬ ಆರೋಪ ಎದುರಾಗಿತ್ತು.. ಅಲ್ಲದೆ ಪಠ್ಯ ಪರಿಷ್ಕರಣ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಕುವೆಂಪು ಅವರನ್ನ ಅವಮಾನ ಮಾಡಿದ್ದಾರೆಂಬ ಕೋಪವೂ ಇದೆ.. ಈಗಾಗಲೇ ಆದಿಚುಂಚನಗಿರಿ ಶ್ರೀಗಳು ಕ್ರಮಕ್ಕೆ ಆಗ್ರಹಿಸಿ ಸಿಎಂಗೆ ಪತ್ರ ಬರೆದಿದ್ದರು.. ಆದ್ರೂ ಸರ್ಕಾರ ಕಣ್ಣೆತ್ತಿ ನೋಡಲಿಲ್ಲ.. ಹೀಗಾಗಿ ನಾಳಿನ ಪ್ರತಿಭಟನೆಗೆ ಸ್ವತಃ ಮಾಜಿ ಪ್ರಧಾನಿ ದೇವೇಗೌಡರು ಅಖಾಡಕ್ಕಿಳಿದಿದ್ದಾರೆ.. ಹೋರಾಟಕ್ಕೆ ಬೇಷರತ್ ಬೆಂಬಲ ನೀಡಿದ್ದಾರೆ.. ಧರಣಿಯಲ್ಲೂ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ.. ಹೀಗಾಗಿ ನಾಳಿನ ಪ್ರತಿಭಟನೆಗೆ ಆನೆಯ ಬಲ ಬಂದಂತಾಗಿದೆ.
ಇನ್ನು ದೇವೇಗೌಡರಂತೆ ನಾಳಿನ ಕುವೆಂಪು ಹೋರಾಟ ಸಮಿತಿ ಪ್ರತಿಭಟನೆಗೆ ಕಾಂಗ್ರೆಸ್ ಪಕ್ಷವೂ ಬೆಂಬಲ ನೀಡಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ನಾಡು,ನುಡಿ ವಿಚಾರದಲ್ಲಿ ನಾವು ಯಾವಾಗಲೂ ಧ್ವನಿ ಎತ್ತುತ್ತೇವೆ..ಪಠ್ಯ ಪುಸ್ತಕ ವಿವಾದ ವಿಚಾರದಲ್ಲಿ ಪ್ರತಿಭಟಿಸಿದ್ದೇವೆ..ಆದ್ರೂ ಸರ್ಕಾರ ಕ್ರಮ ತೆಗೆದುಕೊಳ್ಳಲಿಲ್ಲ..ಈಗ ನಾಳೆ ವಿವಿಧ ಸಂಘಟನೆಗಳು ಕರೆದಿರುವ ಪ್ರತಿಭಟನೆಗೆ ನಮ್ಮ ಬೆಂಬಲವಿದೆ ಅನ್ನೋದನ್ನ ಸ್ಪಷ್ಟಪಡಿಸಿದ್ದಾರೆ..
ಒಟ್ನಲ್ಲಿ ಇಲ್ಲಿಯವರೆಗೆ ತಣ್ಣಗಾಗಿದ್ದ ಪಠ್ಯ ಪುಸ್ತಕ ವಿರುದ್ಧದ ಹೋರಾಟ ಮತ್ತೆ ಮುನ್ನೆಲೆಗೆ ಬಂದಿದೆ.. ನಾಳೆ ಕುವೆಂಪು ಹೋರಾಟ ಸಮಿತಿ ಕರೆದಿರುವ ಪ್ರತಿಭಟನೆಗೆ ಹಲವರ ಸಾಥ್ ಸಿಕ್ಕಿದೆ. ರಾಜಕೀಯ ಪಕ್ಷಗಳ ಬೆಂಬಲವೂ ದಕ್ಕಿದೆ. ಅದ್ರಲ್ಕೂ ದೇವೇಗೌಡರ ಎಂಟ್ರಿಯಿಂದ ಹೋರಾಟಕ್ಕೆ ಆನೆಯ ಬಲ ಬಂದಂತಾಗಿದೆ.. ಇಲ್ಲಿಯವರೆಗೆ ಎಲ್ಲವನ್ನೂ ನಿಬಾಯಿಸಿದ್ದ ಸರ್ಕಾರಕ್ಕೆ ನಾಳಿನ ಪ್ರತಿಭಟನೆ ಮಾತ್ರ ಸಾಕಷ್ಟು ತಲೆ ಬಿಸಿತಂದಿದೆ..
ರಾಘವೇಂದ್ರ ವಿಎನ್ ಪೊಲಿಟಿಕಲ್ ಬ್ಯೂರೋ ಪವರ್ ಟಿವಿ ಬೆಂಗಳೂರು