ಬಿಹಾರ: ‘ಅಗ್ನಿಪಥ್’ ಎಫೆಕ್ಟ್; ಬಿಹಾರದಲ್ಲಿ ರೈಲಿಗೆ ಬೆಂಕಿಹೊಸ ಸೇನಾ ನೇಮಕಾತಿ ನೀತಿ ʻಅಗ್ನಿಪಥ್ʼ ವಿರುದ್ಧ ಪ್ರತಿಭಟನೆಯ ನಡುವೆ ಇಂದು ಬೆಳಗ್ಗೆ ಬಿಹಾರದಲ್ಲಿ ಜನಸಮೂಹವೊಂದು ಪ್ಯಾಸೆಂಜರ್ ರೈಲಿನ ಎರಡು ಬೋಗಿಗಳಿಗೆ ಬೆಂಕಿ ಹಚ್ಚಿದೆ.
ಜಮ್ಮು ತಾವಿ ಎಕ್ಸ್‌ಪ್ರೆಸ್ ರೈಲಿನ ಕೋಚ್‌ಗಳಿಗೆ ಹಾಜಿಪುರ್-ಬರೌನಿ ರೈಲು ಮಾರ್ಗದ ಮೊಹಿಯುದ್ದಿನಗರ ನಿಲ್ದಾಣದಲ್ಲಿ ಬೆಂಕಿ ಹಚ್ಚಲಾಗಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಹಾರ ಮತ್ತು ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ಹೊಸ ಸೇನಾ ನೇಮಕಾತಿ ನೀತಿಯ ವಿರುದ್ಧ ಪ್ರತಿಭಟನೆಗಳು ನಡೆದಿವೆ. ಪ್ರತಿಭಟನೆಯು ಹರಿಯಾಣ ಮತ್ತು ಉತ್ತರಪ್ರದೇಶಕ್ಕೂ ವ್ಯಾಪಿಸಿದ್ದು, ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ರೈಲು ನಿಲ್ದಾಣಕ್ಕೆ ನುಗ್ಗಿದ ಗುಂಪೊಂದು ರೈಲನ್ನು ಧ್ವಂಸಗೊಳಿಸಿದೆ. ಪ್ರತಿಭಟನೆಯ ನಂತರ ಸರ್ಕಾರವು ಅಗ್ನಿಪಥ್ ನೇಮಕಾತಿಯ ವಯೋಮಿತಿಯನ್ನು 21 ರಿಂದ 23 ಕ್ಕೆ ಏರಿಸಿದೆ.