Saturday, November 23, 2024

ಬೆಂಗಳೂರಿನಲ್ಲಿ ಇನ್ಮುಂದೆ ಬಿಡಿಎ ನಿವೇಶನಗಳ ದರ ಹೆಚ್ಚಳ ಸಂಭವ

ಬೆಂಗಳೂರು: ನೀವು ರಾಜಧಾನಿಯಲ್ಲಿ ಬಿಡಿಎ ಸೈಟ್ ತೆಗೆದುಕೊಳ್ಳಬೇಕು ಅಂತ ಯೋಚನೆ ಮಾಡ್ತಿದ್ದೀರಾ..? ಹಾಗಾದರೆ ನಿಮಗೆ ಕೈಗೆಟುಕುವ ದರದಲ್ಲಿ ಬಿಡಿಎ ಸೈಟ್ ಸಿಗೋದು ಡೌಟ್.

ನಗರದಲ್ಲಿ ಸೈಟ್ ಖರೀದಿಸು ಕನಸು ಹೊತ್ತ ಬಡ ಹಾಗೂ ಮಧ್ಯಮ ವರ್ಗದ ಮಂದಿಗೆ ಬಿಡಿಎ ಬಿಗ್​ ಶಾಕ್​ ನೀಡಿದೆ. ಇನ್ಮುಂದೆ ಬಿಡಿಎ ನಿವೇಶನಗಳ ದರ ಸಂಭವ ಹೆಚ್ಚಳವಾಗಿದ್ದು, ಶಿವರಾಮ ಕಾರಂತ ಬಡಾವಣೆಯಲ್ಲಿ ಸೈಟ್ ಖರೀದಿಸುವ ಕನಸು ಹೊತ್ತು ಬಡವರಿಗೆ ಭಾರಿ ನಿರಾಸೆ ಸಾಧ್ಯತೆ ಇದೆ. ಭೂಮಾಲೀಕರಿಗೆ ಹೆಚ್ಚಿನ ಭೂ ಪರಿಹಾರ ಹಾಗೂ ನಿರ್ಮಾಣ ವೆಚ್ಚ ಏರಿಕೆ ಪರಿಣಾಮ ಬಿಡಿಎ ಸೈಟ್ ದುಬಾರಿ ಆಗಲಿದೆ.

ಅದಲ್ಲದೇ, ಬಿಡಿಎ ಸೈಟ್ ಗಳಿಗೆ ಬೀದರ್ ನಿಂದ ಹಿಡಿದು ಚಾಮರಾಜನಗರ ವರೆಗೆ ಬೇಡಿಕೆ ಇದ್ದು, ಬಿಡಿಎ ನಿರ್ಧಾರದಿಂದ ನಿವೇಶನ ಖರೀದಿ ಖದರ್ ಡಲ್ ಆಗೋ ಸಾಧ್ಯತೆ ಇದೆ. ಕೆ ಶಿವರಾಮ ಕಾರಂತ ಬಡಾವಣೆಯಲ್ಲಿ 18,975 ಸೈಟ್ ಹಂಚಿಕೆಗೆ ಮುಂದಾಗಿರೋ ಬಿಡಿಎ ಈಗಾಗಲೇ ಬಡಾವಣೆಯ 17 ,ಗ್ರಾಮಗಳಲ್ಲಿ ,3546 ಎಕರೆಯ ಜಾಗ ಸ್ವಾಧೀನ ಮಾಡಲಾಗಿದೆ.

ಇನ್ನು, ಸದ್ಯದಲ್ಲಿ ಸೈಟ್ ಹಂಚಿಕೆಗೆ ಸಿದ್ದತೆ ಮಾಡಿಕೊಳ್ಳುತ್ತಿರೋ ಪ್ರಾಧಿಕಾರ ಅರ್ಕಾವತಿ,ಕೆಂಪೇಗೌಡ ಬಡಾವಣೆಕ್ಕಿಂತ ಶಿವರಾಮ ಕಾರಂತ ಬಡಾವಣೆಯಲ್ಲಿ ಸೈಟ್ ಬಲು ದುಬಾರಿಯಾಗಿದೆ. ಹೊಸ ಬಡಾವಣೆಯಲ್ಲಿ ಸೈಟ್ ದರ ಹೆಚ್ಚಳಕ್ಕೆ ಬಿಡಿಎ ಅಧಿಕಾರಿಗಳಿಂದ ಚರ್ಚೆ ಮಾಡಲಾಗಿದೆ.

ಹಿಂದಿನ ದರ

20/30 ಅಡಿ ವಿಸ್ತೀರ್ಣದ ಪ್ರತಿ ಸೈಟ್ ಬೆಲೆ 5.23 ಲಕ್ಷ ರೂ. ನಿಗದಿ,
ಇಷ್ಟೇ ವಿಸ್ತೀರ್ಣದ ಸೈಟ್ ಸಾಮಾನ್ಯ ವರ್ಗಕ್ಕೆ 10.46 ಲಕ್ಷ ರೂ. ನಿಗದಿ..
-30/40 ಸೈಟ್‌ಗೆ 23.45 ಲಕ್ಷ ರೂ.,
-40/60 ಸೈಟ್‌ಗೆ 52.31 ಲಕ್ಷ ರೂ.
50/80 ಸೈಟ್‌ಗೆ 96.57 ಲಕ್ಷ ರೂ. ಬೆಲೆ ನಿಗದಿ
ಬಿಡಿಎ ಸಂಭಾವ್ಯ ಸೈಟ್ ದರ ಪಟ್ಟಿ
20/30 -( 1200 ಅಡಿ)- 7ಲಕ್ಷದ 20 ಸಾವಿರ.

ಸಾಮಾನ್ಯ ವರ್ಗ

20/30-2100 = 12 ಲಕ್ಷದ 60 ಸಾವಿರ
30/40 -2400 = 28 ಲಕ್ಷದ 80 ಸಾವಿರ
60/40 – 2500 = 57 ಲಕ್ಷದ 60 ಸಾವಿರ
50/80 – 2800 = 1 ಕೋಟಿ 12 ಲಕ್ಷ

RELATED ARTICLES

Related Articles

TRENDING ARTICLES