Friday, November 22, 2024

ಕಾರು, ಬೈಕ್‌ ನಂಬರ್‌ ಪ್ಲೇಟ್‌ ಮೇಲೆ ಹೆಸರು ಹಾಕೊ ಮುನ್ನ ಹುಷಾರ್

ನಿಮ್ಮ ವಾಹನಗಳ ನಂಬರ್ ಪ್ಲೇಟ್ ಮೇಲೆ ನಿಮ್ಮ ಡೆಸಿಗ್ನೇಷನ್ ಅಥವಾ ಬೇರೆ ಯಾವುದಾದ್ರು ಲಾಂಚನ ಇಲ್ಲ ಸಿಂಬಲ್​ಗಳನ್ನ ಬಳಸಿದ್ರೆ. ಕೂಡಲೇ ದಂಡ ಕಟ್ಟೋಕೆ ರೆಡಿಯಾಗಿ. ಕಾರಿನ ನಂಬರ್ ಪ್ಲೇಟ್ ಮೇಲೆ ಅಧ್ಯಕ್ಷ, ಕಾರ್ಯದರ್ಶಿ, ಸಂಘಟನೆ ಹೆಸರು, ಸ್ಟಾರ್ ನಟರ ಹೆಸರು ಹಾಕೊಂಡು ಶೋಕಿ ಮಾಡಿದ್ರೆ ಫೈನ್ ಕಟ್ಟೋದು ಪಕ್ಕಾ.

ಖಾಸಗಿ ವಾಹನಗಳ‌ ಮೇಲೆ ಸರ್ಕಾರದ ಹೆಸರು, ಸರ್ಕಾರದ ಲಾಂಛನ, ಸಂಘಟನೆ ಹೆಸರು, ಸಂಘ ಸಂಸ್ಥೆ, ಇಲಾಖೆ, ನಿಗಮ, ಕಾರ್ಯದರ್ಶಿ ಅಂತೆಲ್ಲಾ ಹೆಸರು, ಡೆಸಿಗ್ನೇಷನ್ ಬೋರ್ಡ್ ಹಾಕಿಕೊಂಡು ಓಡಾಡಿದ್ರೆ ದಂಡ ಕಟ್ಟಬೇಕಾಗುತ್ತದೆ.‌ ಕೇಂದ್ರ ಸರ್ಕಾರದ ಎಂಬ್ಲಮ್ಸ್ ಅಂಡ್ ನೇಮ್ ಆಕ್ಟ್ ಅಡಿಯಲ್ಲಿ ಅವಕಾಶವಿರುವವರು ಮಾತ್ರ ತನ್ನ ವೆಹಿಕಲ್​​ನಲ್ಲಿ ಹೆಸರು, ಹುದ್ದೆ ಹಾಕಿಕೊಳ್ಳಲು ಅವಕಾಶವಿದ್ದು, ಅವಕಾಶವಿಲ್ಲದವರು ಅನಧಿಕೃತವಾಗಿ ನೇಮ್ ಬೋರ್ಡ್ ಹಾಕಿದ್ರೆ 500 ರೂಪಾಯಿ ಫೈನ್​ ಬೀಳಲಿದೆ.

ಈ ಸಂಬಂಧ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಆದೇಶ ಹೊರಡಿಸಿದ್ದು, ಈ ಹಿನ್ನಲೆ ಸಾರಿಗೆ ಇಲಾಖೆ ಕಾರ್ಯಾಚರಣೆ ನಡೆಸುತ್ತಿದ್ದು ವಾಹನಗಳ ಮೇಲೆ ಅನಧಿಕೃತವಾಗಿ ಹಾಕಲಾಗಿರುವ ನೇಮ್ ಬೋರ್ಡ್​ಗಳನ್ನು ತೆರವುಗೊಳಿಸುತ್ತಿದೆ.

ಬೆಂಗಳೂರು ಒಂದರಲ್ಲೇ 1 ವರ್ಷದಲ್ಲಿ 20 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಿಸುವುದರ ಜೊತೆ 30 ಲಕ್ಷಕ್ಕೂ ಹೆಚ್ಚು ದಂಡ ವಸೂಲಿ ಮಾಡಲಾಗಿದೆಯಂತೆ.

ಈ ರೀತಿ ವಾಹನಗಳ‌ ಮೇಲೆ ಹಾಕಲಾಗಿರುವ ಅನಧಿಕೃತ ನೇಮ್ ಬೋರ್ಡ್ ತೆರವಿಗೆ 2 ವರ್ಷಗಳ ಹಿಂದೆಯೇ ಹೈಕೋರ್ಟ್ ಆದೇಶ ನೀಡಿದೆ.‌ ಅಂದಿನಿಂದ ಇಂದಿನವರೆಗೂ ಸಾರಿಗೆ ಇಲಾಖೆ ಅನಧಿಕೃತ ಹೆಸರು, ಸರ್ಕಾರದ ಲಾಂಛನ ಹಾಕಿಕೊಳ್ಳುವುದಕ್ಕೆ ಅವಕಾಶ ನೀಡದೆ ತೆರವು ಕಾರ್ಯಾಚರಣೆ ಮುಂದುವರೆಸಿದೆ. ಈ ಸಂಬಂದ 2019 ಡಿಸೆಂಬರ್​ನಿಂದ ಸಾರಿಗೆ ಇಲಾಖೆ ಅನಧಿಕೃತ ಬೋರ್ಡ್ ತೆರವಿಗೆ ಮುಂದಾಗಿದ್ದು, ಪ್ರತಿ ತಿಂಗಳು ಕೊರ್ಟ್​​ಗೆ ಅನುಪಾಲನಾ ವರದಿ ನೀಡುತ್ತಿದೆ.‌ ಆದ್ರೆ ನಗರದಲ್ಲಿ ಮಾಜಿ ಶಾಸಕರು ಮಾಜಿ ಪಾಲಿಕೆ ಸದಸ್ಯರು ಯಾವುದೇ ಬೋರ್ಡ್​ಗಳನ್ನ ತೆರವು ಮಾಡಿಲ್ಲ. ಇದ್ರಿಂದ ಇತ್ತಕಡೆಯೂ ಗಮನ ಹರಿಸಿ ಸಂತ ನಾಗರೀಕರು ಸಾರಿಗೆ ಇಲಾಖೆಗೆ ಮನವಿ ನೀಡಿದ್ದಾರೆ.

ಒಟ್ಟಿನಲ್ಲಿ ಸರ್ಕಾರದ ರೂಲ್ಸ್ ಇದ್ರೂ ಅದನ್ನ ಗಾಳಿಗೆ ತೂರಿ ಖಾಸಗಿ ವಾಹನದ ಮೇಲೆ ಹೆಸರು, ಬೋರ್ಡ್, ಹಾಕಿ ದರ್ಬಾರ್ ನಡೆಸುತ್ತಿದ್ದ ನಾಯಕರ ಪ್ರಾಚಾರಕ್ಕೆ ಬ್ರೇಕ್ ಬಿದ್ದಿದ್ದು, ಈ ಸಂಬಂಧ ಸರ್ಕಾರ ಹಾಗೂ ಸಾರಿಗೆ ಇಲಾಖೆ ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ವಹಿಸಬೇಕಿದ್ದು. ಏಕರೂಪ ನೇಮ್ ಪ್ಲೇಟ್​​ಗಳು ಅಳವಡಿಕೆಯಾಗಬೇಕಿದೆ.

ಕ್ಯಾಮರಾ ಮ್ಯಾನ್ ರವಿಕುಮಾರ್ ಜೊತೆ ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು.

RELATED ARTICLES

Related Articles

TRENDING ARTICLES