Friday, November 22, 2024

ಮಾಡಿಲ್ಲ ಅಂದ್ರೆ ತಪ್ಪು ಮಾಡಿದ್ದಾರೆ ಎಂದು ಅರ್ಥ : ಮಾಜಿ ಸಿಎಂ ಜಗದೀಶ್ ಶೆಟ್ಟರ್​

ದಾವಣಗೆರೆ : ಸುಪ್ರೀಂಕೋರ್ಟ್​ನಲ್ಲಿ ಚಾಲೆಂಜ್ ಮಾಡಬಹುದಿತ್ತು. ಕಾನೂನು ವ್ಯಾಪ್ತಿ ನ್ಯಾಯ ಕೇಳಬೇಕಿತ್ತು. ಮಾಡಿಲ್ಲ ಅಂದ್ರೆ ತಪ್ಪು ಮಾಡಿದ್ದಾರೆ ಎಂದು ಅರ್ಥ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ರಾಜಭವನ ಚಲೋ‌ ಹಿನ್ನೆಲೆಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಎರಡು ಸಾವಿರ ಪ್ರಾಪರ್ಟಿ ತಮ್ಮ ವ್ಯಾಪ್ತಿಗೆ ತೆಗೆದುಕೊಂಡಿದ್ದಾರೆ ಎಂಬ ಆರೋಪ ಇದೆ. ಕಾಂಗ್ರೆಸ್​ನವರಿಗೆ ತಪ್ಪಿದೆ ಎಂಬ ಭಯ ಇದೆ. ಹೀಗಾಗಿ ಹೋರಾಟ ಮಾಡಿ ಜನರ ಗಮನ ಬೇರೆಡೆ ಸೆಳೆಯುವ ನಾಟಕ ಮಾಡುತ್ತಿದ್ದಾರೆ.

ಇನ್ನು ಎಲ್ಲರಿಗೂ ಕೋರ್ಟ್​​ನಲ್ಲಿ ಚಾಲೆಂಜ್ ಮಾಡುವ ಹಕ್ಕು ಇದೆ. ದುರ್ಬಲತೆ ಇರುವುದರಿಂದ ಚಾಲೆಂಜ್ ಮಾಡುತ್ತಿಲ್ಲ. ಕಾಂಗ್ರೆಸ್​ನವರು ಅಧಿಕಾರ ಕಳೆದುಕೊಂಡು ಹತಾಶೆರಾಗಿದ್ದಾರೆ. ಹೀಗಾಗಿ ಈ ಹೋರಾಟ ಮಾಡುತ್ತಿದ್ದಾರೆ. 2023ರಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ‌ ಬರಲಿದೆ. ನಾನು ಸಾಮಾನ್ಯ ಕಾರ್ಯಕರ್ತ. ಸಿಎಂ ಸೇರಿದಂತೆ ಯಾವುದೇ ಹುದ್ದೆ ಖಾಲಿ ಇಲ್ಲ. ಇನ್ನೂ ಚುನಾವಣೆ ಬಂದಿಲ್ಲ, ಮುಂದೇ ಏನೇನಾಗುತ್ತೋ ನೋಡೋಣ ಎಂದು ಜಗದೀಶ್​ ಶೆಟ್ಟರ್​ ಮಾತನಾಡಿದರು.

RELATED ARTICLES

Related Articles

TRENDING ARTICLES