ವಿವೇಕ್ ಅಗ್ನಿಹೋತ್ರಿ ಅವರು ಕಾಶ್ಮೀರದಲ್ಲಿ ನಡೆದಿದ್ದ ಕಾಶ್ಮೀರ ಪಂಡಿತರ ಹತ್ಯೆಯನ್ನು ದಿ ಕಾಶ್ಮೀರ್ ಫೈಲ್ಸ್ ಹೆಸರಿನಲ್ಲಿ ಸಿನಿಮಾವಾಗಿಸಿದ್ದರು. ಈ ಸಿನಿಮಾದ ದಿ ಕಾಶ್ಮೀರ್ ಸಾಂಗ್ ಕನ್ನಡದಲ್ಲಿ ರಿಲೀಸ್ ಆಗ್ತಿದೆ.
ಈ ಚಿತ್ರ ಮಾನವ ಕ್ರೌರ್ಯದ ಪರಮಾವಧಿ, ಭೀಭತ್ಸ ಹಾಗೂ ಅಸಹ್ಯವನ್ನು ಬಿಚ್ಚಿಟ್ಟಿದ ಸಿನಿಮಾವಾಗಿತ್ತು. ಅಂದಿನ ಘನಘೋರ ಪರಿಸ್ಥಿತಿಯನ್ನು ಮನಮುಟ್ಟುವಂತೆ ಮಾತ್ರವಲ್ಲ, ಮನಸು ಘಾಸಿಗೊಳ್ಳುವಂತೆ ಸಿನಿಮಾದಲ್ಲಿ ಕಟ್ಟಿಕೊಡಲಾಗಿತ್ತು. ಇದೀಗ ಅದೇ ಕಾಶ್ಮೀರದ ಕರಾಳತೆ ಬಿಚ್ಚಿಡುವ ದಿ ಕಾಶ್ಮೀರ ಸಾಂಗ್ ಕನ್ನಡದಲ್ಲಿ ಬಿಡುಗಡೆಗೆ ಸಜ್ಜಾಗಿದೆ.
ಇನ್ನು, ಇದೇ ಶನಿವಾರ ಹಾಡು ಸಂಗೀತ ಪ್ರಿಯರ ಮಡಿಲು ಸೇರಲಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡ ನಟ ಕೋವಿದ್ ಮಿತ್ತಲ್, ಪ್ರತಿಯೊಬ್ಬರಿಗೂ ಈ ಹಾಡು ಇಷ್ಟವಾಗುತ್ತದೆ. ಕಾಶ್ಮೀರ ಹಿಂದೂಗಳಿಗೆ ಸಮರ್ಪಣೆ ಸಲ್ಲಿಸುವ ಹಾಡು ಎಂದರು. ನಿರ್ದೇಶಕ ಕ್ರಿಷ್ ಜೋಷಿ, ಶೇಖರ್ ಅಸ್ತಿತ್ವ ಎರಡು ದಿನದಲ್ಲಿ ಸಾಹಿತ್ಯ ಬರೆದುಕೊಟ್ಟಿದ್ದಾರೆ.