Saturday, November 2, 2024

ವಿಜಯಪುರಕ್ಕೆ ಕಾಲಿಡದಂತೆ ಕೋಚಂಗೆ ರೈತರ ಆಗ್ರಹ

ವಿಜಯಪುರ: 20ರಂದು ರೈತರ ಬೃಹತ್​​ ಸಮಾವೇಶದ ಹಿನ್ನಲೆಯಲ್ಲಿ ವಿಜಯಪುರಕ್ಕೆ ಕಾಲಿಡದಂತೆ ಕೋಚಂಗೆ ರೈತರು ಆಗ್ರಹಿಸಿದ್ದಾರೆ.

ಚೂನಪ್ಪ ಪೂಜಾರಿ ರೈತ ಸಂಘ ಬಣದಿಂದ ಭಾರಿ ವಿರೋಧ ವ್ಯಕ್ತಪಡಿಸುತ್ತಿದ್ದು, ಭ್ರಷ್ಟಾಚಾರದ ಆರೋಪ ಹೊತ್ತಿರುವ ಕೋಡಿಹಳ್ಳಿ ಚಂದ್ರಶೇಖರ್​ ಭಾರತದ ರೈತ ಚಳವಳಿ ಇತಿಹಾಸದಲ್ಲಿ ಇದು ಕಪ್ಪು ಚುಕ್ಕೆ. ಕರ್ನಾಟಕದಲ್ಲಿ ರೈತಾಪಿ ಹೋರಾಟಗಳು ಉಚ್ಚ್ರಾಯ ಸ್ಥಿತಿ ತಲುಪಿವೆ. 42 ವರ್ಷಗಳಿಂದ ರೈತ ಹೋರಾಟಗಳು ದಾಖಲೆ ನಿರ್ಮಿಸಿವೆ. ಹಲವು ರೈತ ಚಳುವಳಿಯ ಹೋರಾಟಗಾರರು ಹುತಾತ್ಮರಾಗಿದ್ದಾರೆ.  ಪ್ರೋ.ನಂಜುಂಡಸ್ವಾಮಿ ಸೇರಿದಂತೆ 154 ಹೋರಾಟಗಾರರು ಹುತಾತ್ಮರಾಗಿದ್ದಾರೆ. ತ್ಯಾಗ ಬಲಿದಾದನದ ಚಳುವಳಿಯನ್ನು ಕೋಚಂ ಸ್ವಾರ್ಥಕ್ಕೆ ಬಳಸಿಕೊಂಡಿದ್ದಾರೆ ಎಂದರು.

ಅದಲ್ಲದೇ, ಈ ಮೂಲಕ ಕೋಚಂ ರೈತ ಚಳುವಳಿಯ ಹೋರಾಟಕ್ಕೆ ಕಳಂಕ ತಂದಿದ್ದಾರೆ. ಇದರಿಂದ ಕರ್ನಾಟಕ ರೈತ ಸಮೂಹ ಇಡೀ ದೇಶದ ಮುಂದೆ ತಲೆತಗ್ಗಿಸುವಂತಾಗಿದೆ. ಕೋಚಂ 32 ಕೋಟಿ ಮತ್ತು 2 ಸಾವಿರ ಕೋಟಿ ಡೀಲ್​​ ವೀಡಿಯೊ ಬಯಲಾಗಿದೆ. 4 ಸಾವಿರ ಕೆಎಸ್​​ಆರ್​ಟಿಸಿ ಕುಟುಂಬಗಳನ್ನು ಬೀದಿ ಪಾಲು ಮಾಡಿದ್ದಾರೆ. ಈ ಭ್ರಷ್ಟಾಚಾರಿ ಕೋಡಿಹಳ್ಳಿ ಚಂದ್ರಶೇಖರ್​ ರೈತ ಸಭೆಯಲ್ಲಿ ಭಾಗವಹಿಸಿಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು, ಜಿಲ್ಲೆಯ ರೈತರು ಅವರ ಹಸಿರು ಟವೆಲ್​ ಕಿತ್ತುಹಾಕಿ ಮುಖಕ್ಕೆ ಮಸಿ ಬಳಿಯುತ್ತೇವೆ. ಜೊತೆಗೆ ಕಪ್ಪು ಬಾವುಟ ಪ್ರದರ್ಶಿಸಿ ತ್ರೀವ್ರ ವಿರೋಧವನ್ನು ವ್ಯಕ್ತಪಡಿಸುತ್ತೇವೆ ಎಂದು ರೈತ ಸಂಘದ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಚೂನಪ್ಪ ಪೂಜಾರಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ ಕುಬಕಡ್ಡಿ ಕೋಚಂಗೆ ಎಚ್ಚರಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES