ಬೆಂಗಳೂರು: ಮುಖಮಂತ್ರಿ ಅಂದ್ರೆ ಸಿ.ಎಂ. ಸಿಎಂ ಅಂದ್ರೆ ಕಾಮನ್ ಮ್ಯಾನ್. ನಾನೂ ಕೂಡಾ ಹಾಗೇನೆ. ಕಾಮನ್ ಮ್ಯಾನ್. ಎಲ್ಲರಂತೆ ಸಾಮಾನ್ಯ ಮನುಷ್ಯ ಅಂತ ಬಸವರಾಜ ಬೊಮ್ಮಾಯಿ ಪದೇ ಪದೇ ರಿಪೀಟ್ ಮಾಡ್ತಿರ್ತಾರೆ. ಆದ್ರೆ ಸಾಮಾನ್ಯ ಜನರ ಸಮಸ್ಯೆಗಳಿಗೇಕೆ ಸ್ಪಂದಿಸುತ್ತಿಲ್ಲ ಅನ್ನೋದು ಯಕ್ಷ ಪ್ರಶ್ನೆ.
ನಮ್ಮ ನಾಡ ದೊರೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಮ್ಮನ್ನ ತಾವೇ ಕಾಮನ್ ಮ್ಯಾನ್ ಎಂದು ಸ್ವಯಂ ಘೋಷಿಸಿಕೊಂಡಿದ್ದಾರೆ. ಹಾಗಾದ್ರೆ ಕಾಮನ್ ಮ್ಯಾನ್ ಸಿಎಂಗೆ ಸಾಮಾನ್ಯ ಪ್ರಜೆಗಳ ಆಗ್ರಹ, ಸಂಕಷ್ಟ, ಯಾಕೆ ಅರ್ಥ ಆಗ್ತಿಲ್ಲ. ಮುಖ್ಯಮಂತ್ರಿಯಾಗಿದ್ದುಕೊಂಡು ರಾಜಧಾನಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಇರಲಿ. ಕನಿಷ್ಟ ಮುನ್ಬೆಚ್ಚರಿಕೆ ಕೂಡಾ ವಹಿಸುತ್ತಿಲ್ಲ. ಹೀಗಾದ್ರೆ ಹೇಗೆ ಅಂತ ಪ್ರಶ್ನೆ ಕೇಳುವ ಸಮಯ ಬಂದಿದೆ.
ಕಳೆದ ತಿಂಗಳು ನಗರದಲ್ಲಿ ಸುರಿದ ಅಕಾಲಿಕ ಮಳೆಗೆ ಸುಮಾರು 1ಸಾವಿರಕ್ಕೂ ಹೆಚ್ಚು ಮನೆಗಳು ನೀರು ಪಾಲಾಯ್ತು. ಹೊರಮಾವು ಸೇರಿದಂತೆ ಹಲವು ಪ್ರದೇಶಗಳು ಅಕ್ಷರಶಃ ದ್ವೀಪವಾಗಿದ್ವು. ಲಕ್ಷಾಂತರ ಮಂದಿಯ ಜೀವನ ನೀರಲ್ಲಿ ಕೊಚ್ಚಿ ಹೊಯ್ತು. ಆಗಲೂ ಸಿಎಂ ಕಾಟಾಚಾರದ ಸಿಟಿ ರೌಂಡ್ಸ್ ಮಾಡಿದ್ರು. ಈಗಲೂ ಅದೇ ಕಥೆ.
ಬೆಂಗಳೂರಿನಲ್ಲಿ ಎಷ್ಟೇ ಅನಾಹುತಗಳಾದ್ರೂ ಪಾಲಿಕೆ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಳ್ಳೋದಿಲ್ಲ. ಇನ್ನೂ ಹವಾಮಾನ ಇಲಾಖೆ ಮೊದಲೇ ಮುನ್ಸೂಚನೆ ಕೊಟ್ರು ಯಾವೊಬ್ಬ ಅಧಿಕಾರಿಗಳು ಮೈ ಕೊಡವಿ ಕೆಲಸ ಮಾಡೋದಿಲ್ಲ. ಇನ್ನೂ ಶಾಸಕರಂತೂ ಎ.ಸಿ ರೂಮ್ ಗಳನ್ನ ಬಿಟ್ಟು ಬೀದಿಗೆ ಬರೋದೆ ಇಲ್ಲ. ಇದೇ ಕಾರಣಕ್ಕೆ. ಮೇ ತಿಂಗಳಲ್ಲಿ ಹೊರಮಾವಿನಲ್ಲಿ, ಆರ್. ಆರ್. ನಗರ, ಪದ್ಮನಾಭ ನಗರ, ತ್ಯಾಗರಾಜನಗರ, ವಿಜಯನಗರ, ಡಾಲಸ್೯ ಕಾಲೋನಿ, ಮಲ್ಲೇಶ್ವರ, ಕೆ.ಆರ್.ಪುರ, ಶಾಂತಿನಗರ, ನಾಯಂಡಹಳ್ಳಿ, ಉತ್ತರಹಳ್ಳಿ ಸೇರಿದಂತೆ ಬಹುತೇಕ ಕಡೆ ಮಳೆ ನೀರು ಮನೆಗಳಿಗೆ ನುಗ್ಗಿ ಜನ ಜೀವನ ಬೀದಿಪಾಲಾಗಿತ್ತು. ಈಗಲಾದ್ರೂ ಮುಂದೆ ಆಗುವ ಅನಾಹುತವನ್ನ ತಡೆಯೋಕೆ ಸರಾಗವಾಗಿ ಮಳೆ ನೀರು ಹರಿದು ಹೋಗುವ ಹಾಗೆ ರಾಜಕಾಲುವೆ ಗಳನ್ನ ನಿರ್ಮಾಣ ಮಾಡಬೇಕಿದೆ.
ಇದ್ರಿಂದ ಶೋಕಿಗಾಗಿ ಸುತ್ತಾಟ ಮಾಡೋದು ಬಿಟ್ಟು. ಸಾಮಾನ್ಯ ಪ್ರಜೆಗಳ ಕಷ್ಟಗಳನ್ನ ಅರ್ಥ ಮಾಡಿಕೊಂಡು ನಗರದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಹುಡುಕುವ ಕಡೆ ಗಮನಹರಿಸಿ ಅನ್ನೋದು, ಕಾಮನ್ ಮ್ಯಾನ್‌ಗೆ ಪವರ್ ಟಿವಿ ಆಗ್ರಹ.
ಮಲ್ಲಾಂಡಹಳ್ಳಿ ಶಶಿಧರ್, ಪವರ್ ಟಿವಿ ಬೆಂಗಳೂರು.