ಬೆಂಗಳೂರು : ‘ನಮ್ಮ ಹಾಲು ನಮ್ಮ ಹಕ್ಕು’ ಎಂದು ಅನ್ನದಾತರು ಹಾಲಿನ ಚಳವಳಿ ಆರಂಭಿಸಿದ್ದಾರೆ..ಒಂದು ಲೀಟರ್ ಹಾಲಿಗೆ ಕನಿಷ್ಠ 50 ರೂ. ಏರಿಸಲು ಒತ್ತಾಯಿಸಿ ಫ್ರೀಡಂ ಪಾರ್ಕ್ನಲ್ಲಿ ಹಸುಗಳ ಜೊತೆ ಮೆರವಣಿಗೆ ಬಂದು ರೈತರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಸದ್ಯ ಹಾಲು ಉತ್ಪಾದಕರಿಗೆ ಕೇವಲ 26 ರೂಪಾಯಿ ಸಿಗುತ್ತಿದೆ. ಒಂದು ಲೀಟರ್ ಹಾಲು ಪಡೆಯಲು ಒಂದು ಹಸುವಿಗೆ 40ರಿಂದ 45 ರೂಪಾಯಿ ವೆಚ್ಚ ಬರುತ್ತೆ ಜೊತೆಗೆ ಹಸುಗಳಿಗೆ ನೀಡುವ ಆಹಾರ ಪದಾರ್ಥಗಳ ಬೆಲೆಯೂ ಹೆಚ್ಚಳವಾಗಿದೆ. ಇದ್ರಿಂದ ರೈತರು ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹಾಲು ಒಕ್ಕೂಟ ಹಾಗೂ ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲ, ಹಾಲು ಉತ್ಪಾದಕರಿಂದ ಒಕ್ಕೂಟ ಹಾಗೂ ಸರ್ಕಾರಕ್ಕೆ ಲಾಭದಾಯಕವಾಗಿದೆ. ಆದ್ರೆ, ಹಾಲು ಉತ್ಪಾದನೆ ಮಾಡುವ ರೈತರು ಬೀದಿಗೆ ಬಂದಿದ್ದಾರೆ ಎಂದು ಹಾಲು ಉತ್ಪಾದಕರು ಆಕ್ರೋಶ ಹೊರಹಾಕಿದ್ರು..