Tuesday, October 22, 2024

ಮೋದಿ ರಾಜ್ಯ ಪ್ರವಾಸದ ಬಳಿಕ ಲೀಡರ್‌ಶಿಪ್‌ ಚೇಂಜ್‌ ಸಾಧ್ಯತೆ

ಬೆಂಗಳೂರು: ಪದೇ ಪದೇ ನಾಯಕತ್ವ ಬದಲಾವಣೆ ಚರ್ಚೆಗೆ ಬರುತ್ತಲೇ ಇದೆ. ಆದ್ರೆ, ಇನ್ನೂ ಕ್ಲೈಮ್ಯಾಕ್ಸ್‌ ಯಾವಾಗ ಅನ್ನೋದು ಗೊತ್ತಿಲ್ಲ.. ಈ ಮಧ್ಯೆ, ಮೋದಿ ರಾಜ್ಯಕ್ಕೆ ಬರುತ್ತಿದ್ದು, ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಹಾಗಾದ್ರೆ, ಸಿಎಂ ಚೇಂಜ್‌ ಆಗ್ತಾರಾ.? ಒಂದು ವೇಳೆ ಬದಲಾದ್ರೆ ಯಾರು ಮುಂದಿನ ಸಿಎಂ..?

ಸದ್ಯ ರಾಜ್ಯ ರಾಜಕಾರಣದಲ್ಲಿ ತಿಂಗಳಿಗೊಮ್ಮೆ ನಾಯಕತ್ವ ಬದಲಾವಣೆಯ ಗುಮ್ಮ ಅವರಿಸುತ್ತೆ.. ಸದ್ಯಕ್ಕೆ ತಣ್ಣಗಿದ್ದ ನಾಯಕತ್ವ ಬದಲಾವಣೆಯ ವಿಷಯ ಇದೀಗ ಮತ್ತೆ ಚಾಲ್ತಿಗೆ ಬಂದಿದೆ.. ಇದೇ ತಿಂಗಳಲ್ಲಿ ಸಿಎಂ ಬೊಮ್ಮಾಯಿ ಕುರ್ಚಿ ಬಿಟ್ಟು ಕೊಡಲಿದ್ದಾರೆ ಎಂದು ರಾಜಕೀಯ ಪಡಶಾಲೆಯಲ್ಲಿ ಗುಸುಗುಸು ಜೋರಾಗಿದೆ..

ಸದ್ಯ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಇದೇ 20 ರಂದು ಆಗಮಿಸುತ್ತಿದ್ದಾರೆ. ಎರಡು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೋದಿ ಕೆಲ ಕಡೆ ರೋಡ್ ಶೋ ಸಹ ನಡೆಸಲಿದ್ದಾರೆ. ಈಗಾಗಲೇ ಬಿಜೆಪಿ ಇದಕ್ಕೆ ಭರ್ಜರಿ ತಯಾರಿ ಸಹ ಮಾಡಿಕೊಳ್ತಿದೆ. ಇದಾದ ಬಳಿಕ ಸಿಎಂ‌ ಬೊಮ್ಮಾಯಿಯವರಿಗೆ ಸಂಕಷ್ಟದ ಕಾಲ ಎದುರಾಗಲಿದೆ ಎನ್ನಲಾಗಿದೆ. ಮೋದಿ ವಾಪಸ್‌ ಆದ ಬೆನ್ನಲೇ ಕಾಮನ್ ಸಿಎಂ ಕೂಲ್ ಆಗಿ ವಿದೇಶಕ್ಕೆ ಹಾರಲಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಅವರು ಕಾಲು ನೋವಿನ ಟ್ರಿಟ್ಮೆಂಟ್ ನೆಪದಲ್ಲಿ ವಿದೇಶಕ್ಕೆ ಹೋಗಲಿದ್ದು, ಈ ವೇಳೆ ನಾಯಕತ್ವ ಬದಲಾವಣೆ ಕಾರ್ಯ ಸಹ ನಡೆಯಲಿದೆ ಎನ್ನಲಾಗಿದೆ..

ದೆಹಲಿ ದೊರೆಗಳು ನಾಯಕತ್ವ ಬದಲಾವಣೆ ಮಾಡಿದ್ರೆ, ಮುಂದಿನ ನಾಯಕತ್ವ ಯಾರ ಹೆಗಲಿಗೆ ಅನ್ನೋ ಕುತೂಹಲ ಇದೀಗ ಎಡೆಮಾಡಿದೆ.. ಸದ್ಯಕ್ಕೆ ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ಎದುರಿಸೋದಕ್ಕೆ  ಪ್ಲಾನ್ ಮಾಡಿರೋ ವರಿಷ್ಠರು ಅವರು ಸೂಚಿಸಿದ ನಾಯಕನಿಗೆ ಪಟ್ಟಾಭಿಷೇಕ ಮಾಡೋ ಪ್ಲಾನ್‌ನಲ್ಲಿದೆ.. ಅದರಂತೆ ಆದರೆ ಬಿಎಸ್‌ವೈ ಜಗದೀಶ್ ಶೆಟ್ಟರ್ ಅವರನ್ನು ಸಿಎಂ ಸ್ಥಾನಕ್ಕೆ ಸೂಚಿಸೊ ಸಾಧ್ಯತೆ ಇದೆ ಎನ್ನಲಾಗಿದೆ.

ಒಟ್ಟಿನಲ್ಲಿ ಅನೇಕ ದಿನಗಳಿಂದ ಕೇಳಿ ಬರ್ತಿರೋ ನಾಯಕತ್ವ ಮತ್ತು ಸಂಪುಟ ರಚನೆ ಕೂಗಿಗೆ ಜೂನ್ ಕ್ಲೈಮ್ಯಾಕ್ಸ್ ‌ಅಗಲಿದೆ ಅನ್ನೋದು ಬಿಜೆಪಿ ವಲಯದಲ್ಲಿ ಕೇಳಿ ಬರ್ತಿರುವ ಮಾತು.

RELATED ARTICLES

Related Articles

TRENDING ARTICLES