Monday, November 25, 2024

ವಿಜಯಪುರ ಮಹಾನಗರದಲ್ಲಿ ಗ್ರಾಮೀಣ ಕ್ರೀಡೆ ಕಲರವ

ವಿಜಯಪುರ : ಕಾರ ಹುಣ್ಣಿಮೆ ಅಂದ್ರೆ ರೈತರ ಹಬ್ಬ, ಎತ್ತುಗಳಿಗೆ ಸಿಂಗರಿಸಿ, ರೈತರು ಖುಷಿ ಖುಷಿಯಾಗಿ ಕಾರ ಹುಣ್ಣಿಮೆಯ ಕರಿ ಹರಿಯುತ್ತಾರೆ. ಗುಮ್ಮಟ ನಗರಿ ವಿಜಯಪುರದಲ್ಲಿ ಕಾರ ಹುಣ್ಣಿಮೆ ಹಿಂದೂ ಮುಸ್ಲಿಮ್ ಭಾವೈಕ್ಯತೆ ಸಾಕ್ಷಿಯಾಗಿದೆ.

ನಗರದ ಜಿಲ್ಲಾ ಪಂಚಾಯತ್ ಕ್ರೀಡಾಂಗಣದಲ್ಲಿ ರೈತರು ಕಾರ ಹುಣ್ಣಿಮೆ ಹಿನ್ನೆಲೆಯಲ್ಲಿ ಜೋಡೆತ್ತಿನ ಬಂಡಿ, ಕುದುರೆ, ಎತ್ತು ಬಂಡಿ ಸ್ಪರ್ಧೆಯನ್ನು ಖುಷಿಗಾಗಿ ಏರ್ಪಡಿಸಿದ್ದರು. ಕಳೆದ ಮೂರು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ರೈತರು ಕಾರ ಹುಣ್ಣಿಮೆಗೆ ಎತ್ತಿನ ಬಂಡಿ ಓಟದ ಸ್ಪರ್ಧೆ ಆಯೋಜಿಸಿರಲಿಲ್ಲ. ವಿಜಯಪುರದಲ್ಲಿ ಕಾರ ಹುಣ್ಣಿಮೆ ಹಿನ್ನೆಲೆಯಲ್ಲಿ ಜೋಡೆತ್ತಿನ ಬಂಡಿ ಸ್ಪರ್ಧೆಯನ್ನು ಹಲವು ವರ್ಷಗಳಿಂದ ಹಿಂದೂ ಮುಸ್ಲಿಂ ಭಾವೈಕ್ಯತೆಯಿಂದ ಆಚರಿಸೋದು ವಿಶೇಷ. ವಿಜಯಪುರ ಮಹಾನಗರದಲ್ಲೂ ಗ್ರಾಮೀಣ ಕ್ರೀಡೆ ಕ್ರೇಜ್ ಕಡಿಮೆ ಆಗಿಲ್ಲ. ರೈತರು ಎತ್ತುಗಳಿಗೆ ವಿವಿಧ ಬಣ್ಣದಿಂದ ಸಿಂಗರಿಸಿದ್ದರು. ಇಲ್ಲಿ ಯಾವುದೇ ಬಹುಮಾನ ಇಲ್ಲ. ರೈತರು ವರ್ಷಕ್ಕೊಮ್ಮೆ ರೈತರ ಹಬ್ಬವೆಂದು ಖುಷಿಗಾಗಿ ಜೋಡೆತ್ತಿನ ಬಂಡಿ ಸ್ಪರ್ಧೆಯನ್ನು ಆಯೋಜಿಸ್ತಾರೆ. ಇನ್ನು ನೂರಾರು ಜನರು ಎತ್ತಿನ ಬಂಡಿ ಓಟದ ಸ್ಪರ್ಧೆ ಕಣ್ತುಂಬಿಕೊಂಡು ಖುಷಿಯಾಗಿ ಕೇಕೆ ಹಾಕಿದರು.

ಇನ್ನೂ ಎತ್ತಿನ ಬಂಡಿ ಓಟದಲ್ಲಿ ಕೆಲವರು ಬಿದ್ದೇದ್ದರು. ಕೆಲವು ಎತ್ತಿನ ಬಂಡಿ ಹಾಗೂ ಕುದುರೆ ಬಂಡಿಯ ಮದ್ಯೆ ಅಫಘಾತ ಸಂಭವಿಸಿ ಕುದುರೆಗಳು ನೆಲಕ್ಕುರುಳಿ ಬಿದ್ದಂತಹ ಘಟನೆ ಕೂಡಾ ನಡೆಯಿತು. ಇನ್ನೂ ಎತ್ತಿನ ಬಂಡಿ ಓಟದ ಸ್ಪರ್ಧೆ ನಡೆಯುವ ವೇಳೆ ಪೊಲೀಸರು ಆಗಮಿಸಿ, ಜನರನ್ನು ಚದುರಿಸೋಕೆ ಪ್ರಯತ್ನಿಸಿದರು. ಇದು ರೈತರ ಹಬ್ಬ ಕಳೆದ ಮೂರು ವರ್ಷಗಳಿಂದ ಆಚರಿಸಿಲ್ಲ. ಅನುಮತಿಗೆ ಕೋರಿದ್ವಿ ಅಂತ ಹೇಳಿದಾಗ ಪೊಲೀಸರು ಬಂಡಿ ಓಟದ ಸ್ಪರ್ಧೆಗೆ ಅವಕಾಶ ಕೊಟ್ಟರು. ಎತ್ತಿನ ಬಂಡಿ ಓಟದ ಸ್ಪರ್ಧೆಯಲ್ಲಿ ಸಂತಸದಿಂದ ಕುಣಿದು ಕುಪ್ಪಳಿಸಿದರು.

ರೈತರ ಹಬ್ಬ ಎಂತಲೇ ಕರೆಯಲ್ಪಡುವ ಕಾರ ಹುಣ್ಣಿಮೆಯನ್ನು ವಿಜಯಪುರ ನಗರದ ಹಿಂದು‌‌ ಮುಸ್ಲಿಂ ಬಾಂಧವರೆಲ್ಲರೂ ಸೇರಿ ಸಡಗರ ಸಂಭ್ರಮದಿಂದ ಆಚರಿಸಿದ್ದು ವಿಶೇಷವಾಗಿತ್ತು.

RELATED ARTICLES

Related Articles

TRENDING ARTICLES