ಬೆಂಗಳೂರು : ಶಾಲೆ ಆರಂಭವಾಗಿ ಒಂದು ತಿಂಗಳು ಆದ್ರೂ ಮಕ್ಕಳ ಕೈ ಸೇರದ ಪಠ್ಯ ಇನ್ನೂ ಎರಡು ತಿಂಗಳು ಪಠ್ಯ ಮಕ್ಕಳ ಕೈಸೇರೋದು ಅನಮಾನ ಉಂಟಾಗಿದೆ.
ಶಾಲೆ ಶುರುವಾಗಿ ತಿಂಗಳು ಕಳೆದರೂ ಮಕ್ಕಳಿಗೆ ಇನ್ನೂ ಪೂರೈಕೆ ಆಗಿಲ್ಲ ಪಠ್ಯಪುಸ್ತಕ ಪಠ್ಯಪುಸ್ತಕ ಪ್ರಿಂಟ್ ಆಗಿದೆ ಎನ್ನುತ್ತೆ ಸರ್ಕಾರ. ಆದರೆ ಶಾಲೆಯಲ್ಲಿ ಬುಕ್ಸ್ ಇನ್ನೂ ಬಂದಿಲ್ಲ. ಪ್ರತಿ ವರ್ಷ ಶಾಲೆ ಆರಂಭವಾದ ಮೊದಲ ವಾರವೇ ಪಠ್ಯ ಪೂರೈಕೆ ಆಗ್ತಿತ್ತು. ಆದರೆ ಈ ವರ್ಷ ಶಾಲೆ ಶುರುವಾಗಿ ಒಂದು ತಿಂಗಳು ಆದ್ರೂ ಶುರುವಾದ್ರೂ ನೋ ಬುಕ್ಸ್ ಇದುವರೆಗೆ ಸರ್ಕಾರಿ ಶಾಲೆಯ ಶೇ.15ರಷ್ಟು ಮಾತ್ರ ಪೂರೈಕೆಯಾಗಿದೆ. ಖಾಸಗಿ, ಅನುದಾನಿತ ಶಾಲೆಯಲ್ಲಿ ಇನ್ನೂ ಪಠ್ಯ ಪೂರೈಕೆಯಾಗಿಲ್ಲ.
ಅದಲ್ಲದೇ, ಖಾಸಗಿ, ಅನುದಾನ ರಹಿತ ಶಾಲಾ ಮಕ್ಕಳಿಗೆ ಇದುವರೆಗೆ ಒಂದೇ ಪಠ್ಯವೂ ಸರಬರಾಜಾಗಿಲ್ಲ. ರಾಜ್ಯದಲ್ಲಿ 70 ಸಾವಿರ ಸರ್ಕಾರಿ, ಅನುದಾನ, ಖಾಸಗಿ ಶಾಲೆಗಳಿವೆ. 97 ಲಕ್ಷ ವಿದ್ಯಾರ್ಥಿಗಳು 1-10ನೇ ತರಗತಿ ನೋಂದಣಿ ಆಗಿದ್ದಾರೆ. ಈ ವರ್ಷ 64 ಲಕ್ಷ ಪಠ್ಯಪುಸ್ತಕ ಪ್ರಿಂಟ್ ಮಾಡುತ್ತಿದ್ದು. ಇದರಲ್ಲಿ ಶೇ.75ರಷ್ಟು ಮುದ್ರಣಗೊಂಡಿದೆ. ಪೂರೈಕೆ ಶೇ.15ರಷ್ಟು ಸರ್ಕಾರಿ ಶಾಲೆಗಳಿಗೆ ಮಾತ್ರ ಪೂರೈಕೆಯಾಗಿದೆ. ಇಂಡೆಂಟ್ ಹಾಕಿ ದುಡ್ಡು ಕೊಟ್ಟರೂ ಪಠ್ಯಪುಸ್ತಕ ಪೂರೈಸಿಲ್ಲ.
ಇನ್ನು, ದಿನಕ್ಕೊಂದು ಆರೋಪ ಹೊಸ ಗೊಂದಲ ಮುಂದುವರಿಕೆಗೊಂಡಿದ್ದು, ಶಾಲೆ ಆರಂಭವಾದ ದಿನದಿಂದಲೂ ಪರಿಷ್ಕರಣೆ ಪಠ್ಯ ಬಿಟ್ಟಿಲ್ಲ. ಶಿಕ್ಷಣ ಇಲಾಖೆ ವಿವಾದಗಳಿಗೆ ಅದೆಷ್ಟೇ ತೆರೆ ಎಳೆಯೋ ಕೆಲಸ ಮಾಡಿದ್ರೂ ನೋ ಯೂಸ್! ಯಾವ ಪಾಠ ಓದಬೇಕು? ಯಾವ ಪಠ್ಯ ಓದಬಾರದು? ಯಾವುದು ನಿಜವಾದ ಪರಿಷ್ಕೃತ ಪಠ್ಯ? ಯಾವುದು ಸರಿ? ಯಾವುದು ತಪ್ಪು? ಮಕ್ಕಳು, ಪೋಷಕರ ಮನದಲ್ಲಿ ಗೊಂದಲ ಮುಂದುವರೆದಿದೆ.