Tuesday, November 26, 2024

ದೇಶದ ಪ್ರಮುಖ ನಾಯಕರಿಗೆ ED ಶಾಕ್ ಇದರ ಬಗ್ಗೆ ನಿಮಗೆಷ್ಟು ಗೊತ್ತು..? : ಇಲ್ಲಿದೆ ಮಾಹಿತಿ

1956ರ ಮೇ 1ರಂದು ಕೇಂದ್ರ ಸರ್ಕಾರ ವಿದೇಶಿ ವಿನಿಮಯ ನಿಯಂತ್ರಣ ಕಾನೂನುಗಳ ಪಾಲನೆಗೆ ‘ಜಾರಿ ಘಟಕ’ ವನ್ನು ಸ್ಥಾಪಿಸಿತು. ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ – 1947ರ ಸಂಪೂರ್ಣ ಪಾಲನೆಯೇ ಇಲಾಖೆಗೆ ಮುಖ್ಯ ಕರ್ತವ್ಯವಾಗಿತ್ತು. ಮುಂದೆ 1957ರಲ್ಲಿ ಇದೇ ಘಟಕವನ್ನು ‘ಜಾರಿ ನಿರ್ದೇಶನಾಲಯ’ ಎಂದು ಮರು ನಾಮಕರಣ ಮಾಡಲಾದ ಜಾರಿ ನಿರ್ದೇಶನಾಲಯ, ಭಾರತ ಸರ್ಕಾರದ ಅವಿಭಾಜ್ಯ ಸಂಸ್ಥೆ. ಆರ್ಥಿಕ ಕಾನೂನುಗಳನ್ನು ಶಿಸ್ತು ಬದ್ಧವಾಗಿ ಜಾರಿಮಾಡುವ, ಹಾಗು ಅವು ಪಾಲನೆಯಲ್ಲಿರುವಂತೆ ನಿಗಾವಹಿಸುತ್ತದೆ. ದೇಶದೊಳಗೆ ನಡೆಯುವ ಆರ್ಥಿಕ ಅಪರಾಧಗಳ ಮೇಲೂ ಕಣ್ಗಾವಲಿಡುವ ಅಧಿಕಾರ ಜಾರಿ ನಿರ್ದೇಶನಾಲಯಕ್ಕಿದ್ದು, ಇದು ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಆದಾಯ ವಿಭಾಗದ ಒಂದು ಪ್ರಮುಖ ಭಾಗ. ಭಾರತೀಯ ಆಡಳಿತಾತ್ಮಕ ಸೇವಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗು ಆದಾಯ ತೆರಿಗೆ ಅಧಿಕಾರಿಗಳನ್ನು ಈ ಸಂಸ್ಥೆ  ಒಳಗೊಂಡಿದೆ.

ಆರ್ಥಿಕ ಕಾನೂನಿನ ಎರಡು ಮುಖ್ಯ ಕಾಯಿದೆಗಳಾದ ‘ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ – 1999 ಹಾಗು ‘ಕಪ್ಪು ಹಣ ಬದಲು ತಡೆ ಕಾಯಿದೆ 2002(ಮನಿ ಲಾಂಡರಿಂಗ್ ತಡೆ ಕಾಯಿದೆ) ಗಳನ್ನು ದೇಶದೊಳಗೆ ಸಮರ್ಥವಾಗಿ ಜಾರಿ ಮಾಡುವುದು ಹಾಗು ಅವು ಎಲ್ಲಿಯೂ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ಜಾರಿ ನಿರ್ದೇಶನಾಲಯದ ಆದ್ಯ ಕರ್ತವ್ಯ. ಕಪ್ಪು ಹಣವನ್ನು ಅಕ್ರಮವಾಗಿ ಅಥವಾ ವಾಮ ಮಾರ್ಗದ ಮುಖಾಂತರ ಬಿಳಿಯನ್ನಾಗಿಸುವುದು ಅಪರಾಧವಾಗಿದ್ದು ಇಂತಹ ಅಪರಾಧಗಳು ನೇರವಾಗಿ ಜಾರಿ ನಿರ್ದೇಶನಾಲಯದ ವ್ಯಾಪ್ತಿಗೆ ಬರಲಿವೆ.

ಜಾರಿ ನಿರ್ದೇಶನಾಲಯದ ಕೇಂದ್ರ ಕಛೇರಿ ನವದೆಹಲಿಯಲ್ಲಿದ್ದು ಜಾರಿ ನಿರ್ದೇಶಕರು ಇದರ ಮುಖ್ಯಸ್ಥರು. ಕೇಂದ್ರ ಕಛೇರಿ ಹೊರತು ಪಡಿಸಿ ಇತರ ಐದು ಪ್ರಾದೇಶಿಕ ಕಛೇರಿಗಳು ದೇಶದ ಪ್ರಮುಖ ನಗರಗಳಾದ ಮುಂಬಯಿ, ಚೆನ್ನೈ, ಚಂಡೀಗಢ, ಕೋಲ್ಕತ್ತಾ ಹಾಗೂ ದೆಹಲಿಯಲ್ಲಿದೆ.. ಪ್ರಾದೇಶಿಕ ಕಛೇರಿಗಳಲ್ಲಿ ವಿಶೇಷ ಜಾರಿ ನಿರ್ದೇಶಕರು ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಲಿದ್ದು,. ಮೂರನೇ ಹಂತದ ಕಛೇರಿಗಳಾಗಿ ವಲಯ ಕಛೇರಿಗಳು ಅಹಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ಕೊಚ್ಚಿ, ದೆಹಲಿ, ಪಣಜಿ, ಗುವಾಹಟಿ, ಹೈದರಾಬಾದ್, ಜೈಪುರ , ಜಲಂಧರ್, ಕೊಲ್ಕತ್ತಾ, ಲಕ್ನೋ, ಮುಂಬಯಿ, ಪಾಟ್ನಾ, ಹಾಗು ಶ್ರೀನಗರ ಗಳಲ್ಲಿವೆ. ಜಂಟಿ ಜಾರಿ ನಿರ್ದೇಶಕರು ಇವುಗಳ ಮುಖ್ಯಸ್ಥರಾಗಿರುತ್ತಾರೆ.

ಸಿಂಧೂರ ಗಂಗಾಧರ್​​, ಪವರ್​ ಟಿವಿ

RELATED ARTICLES

Related Articles

TRENDING ARTICLES