ಬೆಂಗಳೂರು: ಮೇಕೆದಾಟು ನಮ್ಮ ಯೋಜನೆ, ನಮ್ಮ ನೀರು ನಮ್ಮ ಹಕ್ಕು ಎಂದು ಕೇಂದ್ರ ಸರ್ಕಾರದ ವಿರುದ್ಧ ಡಿ.ಕೆ ಶಿವಕುಮಾರ್ ವಾಗ್ದಾಳಿ ಮಾಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇನು ಎಮರ್ಜೆನ್ಸಿನಾ, ಪ್ರಜಾಪ್ರಭುತ್ವ ಸರ್ಕಾರನಾ? ಅವರ ನೋವು, ಅವರ ದುಃಖವನ್ನ ಪ್ರತಿಭಟನೆ ಮೂಲಕ ವ್ಯಕ್ತಪಡಿಸ್ತಾರೆ. ಬಿ.ವಿ ಶ್ರೀವಿವಾಸ್ ಅವ್ರನ್ನ ಬೆಳಿಗ್ಗೆಯೇ ಅರೆಸ್ಟ್ ಮಾಡುವಂತದ್ದೇನು? ಪ್ರತಿಭಟನೆಗೆ ಹೋಗಬಾರದಾ? ಏನ್ ಮಾಡಬಾರದನ್ನ ಮಾಡಿದ್ದಾರೆ? ಇಂಥ ನೀಚ ರಾಜಕಾರಣ ಎಲ್ಲೂ ನೋಡಿಲ್ಲ ಎಂದರು.
ಅದಲ್ಲದೇ, ರಾಹುಲ್ ಗಾಂಧಿ, ಸೋನಿಯಾಗಾಂಧಿ ಯಾವುದಕ್ಕೂ ಜಗ್ಗಲ್ಲ. ಅದು ರಾಷ್ಟ್ರದ ಆಸ್ತಿ,ಸ್ವಂತದ್ದಲ್ಲ. ಅವ್ರನ್ನ ಏನಾದ್ರೂ ಮಾಡಿ ಮನೆಗೆ ಸೇರಿಸಬೇಕು ಎಂದುಕೊಂಡಿದ್ದಾರೆ. ಎಲೆಕ್ಷನ್ ಅಫಿಡವಿಟ್ ನಲ್ಲಿ ಎಲ್ಲವನ್ನೂ ಕೊಟ್ಟಿಲ್ವಾ. 10 ಗಂಟೆ ವಿಚಾರಣೆ ಮಾಡಬೇಕಾ. ನನ್ನ 10 ದಿನ ವಿಚಾರಣೆ ಮಾಡುವಂತದ್ದೇನಿತ್ತು. ಮೋಸ್ಟ್ ಕರಪ್ಟೆಡ್ ಮಿನಿಸ್ಟರ್ ಆಫ್ ಕಂಟ್ರಿ ಎಂದು ಅಶ್ವಥ್ ನಾರಾಯಣ್ ವಿರುದ್ಧ ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು, ವಿಸಿ ಸೆಲೆಕ್ಷನ್ ಮಾಡಲು ಎರಡೆರಡು ಲಕ್ಷ ಕಲೆಕ್ಷನ್ ಮಾಡ್ತಾ ಇದ್ರು, PSI ಹಗರಣ ಹೊರಗಡೆ ಬಂತಲ್ಲಾ, ಸುಮ್ನಾಗಿದ್ದಾರೆ. ಆ ಗಂಡಿಗೆ ಮುಂದೆ ಮಾತಾಡ್ತೇನೆ. ಮೇಕೆದಾಟು ಯೋಜನೆ ವಿರೋಧಿಸಿ ತ.ನಾಡು ಸಿಎಂ ಪತ್ರ ವಿಚಾರವಾಗಿ ಮಾತನಾಡಿದ ಅವರು, ತಮಿಳುನಾಡು ಏನಾದ್ರೂ ಪತ್ರ ಬರೆದುಕೊಳ್ಳಲಿ. ನಿಮಗೆ ಧೈರ್ಯ ಇಲ್ಲಾ ಅಂದ್ರೆ ನಮ್ಮನ್ನ ಕರೆದುಕೊಂಡು ನಡೀರಿ. ಸರ್ವಪಕ್ಷ ನಿಯೋಗ ಕರೆದುಕೊಂಡು ನಡೀರಿ. ನಾವು ಕೇಂದ್ರ ಸಚಿವರ ಜೊತೆ ಮಾತಾಡ್ತೇವೆ. ಮೇಕೆದಾಟು ನಮ್ಮ ಯೋಜನೆ, ನಮ್ಮ ನೀರು ನಮ್ಮ ಹಕ್ಕು ಎಂದು ಡಿ.ಕೆ ಶಿವಕುಮಾರ್ ಹೇಳಿದರು.