ಬೆಂಗಳೂರು : ನಮ್ಮ ನೀರಿನ ಅಡಿಯಲ್ಲಿ ನಮ್ಮ ರಾಜ್ಯದಲ್ಲಿ ನಾವು ಮೇಕೆದಾಟು ಮಾಡ್ತಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಮದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆ ಬಗ್ಗೆ ಕಾವೇರಿ ರಿವರ್ ಮಾನಿಟರಿಂಗ್ ಬೋರ್ಡ್‌ನಲ್ಲಿ ಡಿಪಿಆರ್ ಅಪ್ರೂವ್ ಮಾಡಬೇಕು ಅಂತ ನಾವು ಹೇಳಿದ್ದೇವೆ. ಈಗಾಗಲೇ ಅನೇಕ ಸಭೆಗಳು ಆಗಿದೆ. ಇಷ್ಟರಲ್ಲೇ ಅಂತಿಮ ಸಭೆ ಕೂಡ ಬರ್ತಿದೆ. ಈ ಮಧ್ಯೆ ತಮಿಳುನಾಡು ಕ್ಯಾತೆ ತೆಗೆಯುತ್ತಿದೆ. ತಮಿಳುನಾಡು ಸಿಎಂ ಪಿಎಂಗೆ ಪತ್ರ ಬರೆದಿದ್ದಾರೆ ಎಂಬ ವಿಚಾರ ಗೊತ್ತಾಗಿದೆ ಎಂದರು.
ಅದಲ್ಲದೇ, ಪತ್ರದ ಪ್ರತಿಯನ್ನು ತರೆಸಿಕೊಳ್ಳುತ್ತೇನೆ. ತಮಿಳುನಾಡಿನವರ ಬೇಡಿಕೆ ಕಾನೂನು ಬಾಹಿರ ಒಕ್ಕೂಟ ವ್ಯವಸ್ಥೆಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ನಮ್ಮ ನೀರಿಗೆ ಹುನ್ನಾರ ನಡೆಸುತ್ತಿದ್ದಾರೆ. ನಮ್ಮ ನೀರಿನ ಅಡಿಯಲ್ಲಿ,ನಮ್ಮ ರಾಜ್ಯದಲ್ಲಿ ನಾವು ಮೇಕೆದಾಟು ಮಾಡ್ತಿದ್ದೇವೆ. ಅದಕ್ಕೆ ಈಗಾಗಲೇ ಅನೇಕ ಪಕ್ರಿಯೆಗಳು ನಡೆದಿದೆ,15 ಸಭೆ ನಡೆದಿದೆ. ಆಗ ತಮಿಳುನಾಡು ಸಭೆಯಲ್ಲಿ ಭಾಗಿಯಾಗಿಲ್ಲ. ರಾಜಕೀಯಕ್ಕಾಗಿ ಇಷ್ಟೆಲ್ಲಾ ಮಾಡ್ತಿದ್ದಾರೆ. ಇದೆಲ್ಲ ರಾಜಕೀಯ ಸ್ಟಂಟ್ ಕಾನೂನು ಬಾಹಿರ ಪತ್ರವನ್ನು ಕೇಂದ್ರ ಪರಿಗಣಿಸಬಾರದು. ಜೂನ್ 16 ನೇ ತಾರೀಖು ಅಧಿಕಾರಿಗಳ ಸಭೆ ಇದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.