ಬೆಂಗಳೂರು: ಶಾಲಾ ಮಕ್ಕಳಿಗೆ ತಟ್ಟಿದ ಪಠ್ಯ ಪುಸ್ತಕ ಪರಿಷ್ಕರಣೆಯ ಎಫೆಕ್ಟ್ನಿಂದಾಗಿ ಮತ್ತೆ ಎರಡು ತಿಂಗಳ ಕಾಲ ಮಕ್ಕಳು ಪಠ್ಯ ಪುಸ್ತಕ ಬೊಧನೆಯಿಂದ ವಂಚಿತರಾಗಿದ್ದಾರೆ.
ಶಿಕ್ಷಣ ಇಲಾಖೆಯ ವಿರುದ್ಧ ಗರಂ ಆದ ಶಿಕ್ಷಣ ತಜ್ಞರು, ಪಠ್ಯ ಬೋಧನೆ ತಡವಾದ್ರೆ ಮಕ್ಕಳ ಕಲಿಕಾ ಹಿನ್ನಡೆ ಕಾರಣವಾಗುತ್ತೆ ಅಂತದ್ದಾರೆ. ಕಲಿಕಾ ಚೇತರಿಕಾ ಕಾರ್ಯಕ್ರಮವನ್ನೆ ಮತ್ತೆರಡು ತಿಂಗಳು ಕಾಲ ವಿಸ್ತರಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಪಠ್ಯ ಪುಸ್ತಕ ಪರಿಷ್ಕರಣೆಯ ಎಫೆಕ್ಟ್ ಎರಡು ತಿಂಗಳ ಕಾಲ ಕಲಿಕಾ ಚೇತರಿಕೆ ಮುಂದುವರಿಕೆಯಾಗಿದ್ದು, ಪಠ್ಯ ಬೋಧನೆಗೆ ಶಿಕ್ಷಣ ಇಲಾಖೆ ಮತ್ತೆ ಬ್ರೇಕ್ ಹಾಕಿದೆ.
ಅದಲ್ಲದೇ, ವರ್ಷವಿಡಿ ಕಲಿಕಾ ಚೇತರಿಕೆಯೊಂದಿಗೆ ಪಠ್ಯ ಬೋಧನೆ ಅಂತಾ ಆರಂಭದಲ್ಲಿ ಪ್ಲಾನ್ ಮಾಡಲಾಗಿತ್ತು. ಆದ್ರೆ ಪಠ್ಯ ಪರಿಷ್ಕರಣಾ ಜಟಾಪಟಿ ಮುಂದುವರೆದಿದ್ದು ಮಕ್ಕಳಿಗೆ ಇನ್ನು ಪಠ್ಯ ಕೈ ತಲುಪಿಲ್ಲ. ಇದರ ಜೊತೆಗೆ ಕೆಲವು ವಿರೋಧದ ಕಾರಣಕ್ಕೆ ಪರಿಷ್ಕೃತ ಪಠ್ಯದ ಲೋಪ ಸರಿಪಡಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಹೀಗಾಗಿ ಇನ್ನೇರಡು ತಿಂಗಳ ಕಾಲ ಕಲಿಕಾ ಚೇತರಿಕೆಯ ಕಾರ್ಯಕ್ರಮ ಮುಂದುವರೆಸಲು ಮುಂದಾಗಿದೆ.
ಇನ್ನು, ಪರಿಷ್ಕರಣೆಯ ವಿಚಾರ ಜನಾಭಿಪ್ರಾಯ ಮುಂದಾಗಿರೋ ಶಿಕ್ಷಣ ಇಲಾಖೆ. ಎರಡು ತಿಂಗಳು ಕಲಿಕಾ ಚೇತರಿಕೆ ಮುಂದುವರೆಸಿ ನಂತರ ಪರಿಷ್ಕೃತ ಪಠ್ಯ ನೀಡಲು ಮುಂದಾಗಿದೆ. ಎರಡು ತಿಂಗಳ ಒಳಗೆ ಪಠ್ಯದಲ್ಲಿನ ಎಲ್ಲ ತಪ್ಪು ಲೋಪ ಸರಿಪಡಿಸಿ ವಿದ್ಯಾರ್ಥಿಗಳಿಗೆ ಪಠ್ಯ ಬೋಧನೆಗೆ ಪ್ಲಾನ್ ಮಾಡಿದೆ. ಇನ್ನೇರಡು ತಿಂಗಳ ಕಾಲ ಕಲಿಕಾ ಚೇತರಿಕೆ ಕಾರ್ಯಕ್ರಮ ಮುಂದುವರೆದ್ರೆ , ಮಕ್ಕಳಿಗೆ ಪಠ್ಯ ಬೋಧನೆಗೆ ಮತ್ತೆ ಕಡಿಮೆ ಬೊಧನಾ ಅವಧಿ ಸಿಗುವ ಆತಂಕ ಎದುರಾಗಿದೆ. ಕಳೆದ ವರ್ಷವೂ ಕೊರೊನಾ ಕಾರಣಕ್ಕೆ ಪಠ್ಯ ಬೋಧನೆಗೆ ಹೆಚ್ಚು ದಿನಗಳ ಸಿಕಿರಲಿಲ್ಲ ಹೀಗಾಗಿ ಶಿಕ್ಷಣ ಇಲಾಖೆಯ ನಡೆಗೆ ಶಿಕ್ಷಣ ತಜ್ಞರು ಆಕ್ರೋಶ ವ್ಯಕ್ತಪಡಿಸಿದ್ದಾರೆ.