ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ವಿವಾದಾತ್ಮಕ ಹೇಳಿಕೆ ಕೊಟ್ಟು ಹಲವು ದಿನಗಳೇ ಆಗಿವೆ. ಆದ್ರೆ, ದಿಢೀರ್ ಅಂತ ದೇಶಾದ್ಯಂತ ಕಿಚ್ಚು ಹೊತ್ತಲು ಕಾರಣ ಏನು..? ಈ ವಿಚಾರವಾಗಿ ಸದ್ಯ ತನಿಖೆ ಚುರುಕುಗೊಳ್ತಿದೆ.. ಆದ್ರೆ, ದೇಶಾದ್ಯಂತ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ರಾಜ್ಯಗಳು ದೊಂಬಿ ಹತ್ತಿಕ್ಕಲು ತಯಾರಿ ನಡೆಸಿವೆ. ಈ ಮಧ್ಯೆ.. ಅಲ್ಲೇ ಡ್ರಾ ಅಲ್ಲೇ ಬಹುಮಾನ ಅನ್ನೋ ಮಾತು ಸಾಬೀತು ಮಾಡಿದ್ದಾರೆ ಯುಪಿ ಸಿಎಂ ಯೋಗಿ ಆದಿತ್ಯನಾಥ್.
ಉತ್ತರ ಪ್ರದೇಶದಲ್ಲಿ ಸರ್ಕಾರ ಮತ್ತೆ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಂಡಿದೆ. ಪ್ರವಾದಿ ಮಹಮ್ಮದ್ ಪೈಗಂಬರ್ ಬಗೆಗೆ ನೀಡಿದ ಹೇಳಿಕೆ ವಿರೋಧಿಸಿ, ಉತ್ತರ ಪ್ರದೇಶದಲ್ಲಿ ನಡೆದ ಹಿಂಸಾಚಾರವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗಂಭೀರವಾಗಿ ಪರಿಗಣಿಸಿದ್ದಾರೆ. ಅಷ್ಟಕ್ಕೆ ಸುಮ್ಮನಾಗಿಲ್ಲ ಬುಲ್ಡೋಜರ್ ಅಸ್ತ್ರ ಪ್ರಯೋಗಿಸಿದ್ದಾರೆ. ಕಾನ್ಪುರ್, ಪ್ರಯಾಗ್ ರಾಜ್, ಲಕ್ನೋ, ಮೊರಾದಬಾದ್, ಸಹರಾನ್ಪುರ್, ಫಿರೋಜಾಬಾದ್ನಲ್ಲಿ ಪ್ರತಿಭಟನೆ ಜೋರಾಗಿ ನಡೆದಿದೆ. ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚುವ ಪ್ರಯತ್ನದಿಂದಾಗಿ 40ಕ್ಕೂ ಅಧಿಕ ಮಂದಿಗೆ ಗಾಯಗಳಾಗಿದೆ. ಘಟನೆಗೆ ಸಂಬಂಧಿಸಿದಂತೆ 227 ಮಂದಿಯನ್ನು ಸದ್ಯ ಬಂಧಿಸಲಾಗಿದೆ.
ಇದೀಗ ಕಲ್ಲು ತೂರಾಟ ನಡೆದ ಅಟಲ್ ಚೌಕ್ ಸುತ್ತಮುತ್ತಲಿನ ಪ್ರದೇಶಗಳಿಗೆ ಬುಲ್ಡೋಜರ್ಗಳು ಬಂದಿವೆ.
ದುಷ್ಕರ್ಮಿಗಳನ್ನು ಪತ್ತೆಹಚ್ಚಿದ ಬಳಿಕ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಲು ಸಿದ್ಧತೆ ನಡೆಸಲಾಗುತ್ತಿದೆ. ಜೂನ್ 3 ರಂದು ಕಾನ್ಪುರದಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿಂತೆ ಸರ್ಕಾರ ಕ್ರಮವನ್ನು ತೆಗೆದುಕೊಂಡಿದೆ. ಹಿಂಸಾಚಾರದ ಮಾಸ್ಟರ್ ಮೈಂಡ್ ಜಾಫರ್ ಹಯಾತ್ ಹಶ್ಮಿ ಅವರ ಆಪ್ತ ಸಹಾಯಕನ ಮನೆಯ ಮೇಲೆ ಬುಲ್ಡೋಜರ್ ನುಗ್ಗಿದೆ. ಅಕ್ರಮ ಕಟ್ಟಡಡಗಳನ್ನು ನೆಲಸಮಗೊಳಿಸುವ ಪ್ರಕ್ರಿಯೆ ನಡೆದಿದೆ.
8 ರಾಜ್ಯಗಳಲ್ಲಿ ಪ್ರತಿಭಟನೆ ನಡೆದಿದೆ.. ಉತ್ತರ ಪ್ರದೇಶದಲ್ಲೇ ಅತಿ ಹೆಚ್ಚು ಜಿಲ್ಲೆಗಳಲ್ಲಿ ಪ್ರತಿಭಟನೆಯ ಕಿಚ್ಚು ಜೋರಾಗಿತ್ತು..ಇತ್ತ, ಪಶ್ಚಿಮ ಬಂಗಾಳದಲ್ಲೂ ಕಿಚ್ಚು ಹೊತ್ತಿದೆ.. ಈ ಮಧ್ಯೆ, ಎಲ್ಲಾ ರಾಜ್ಯಗಳಿಗೂ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿ ಎಂದು ಸೂಚಿಸಿದೆ.