ಬೆಂಗಳೂರು : ರಾಜ್ಯದ ಪ್ರಭಾವಿ ರಾಜಕಾರಣಿಗೆ ‘ಪವರ್’ ಸ್ಟಿಂಗ್ ಆಪರೇಶನ್ ಭಾರೀ ಹೊಡೆತ ಕೊಟ್ಟಿದೆ. ಕರ್ನಾಟಕದಲ್ಲಿ ಅತಿದೊಡ್ಡ ಸಂಚಲನ ಮೂಡಿಸಿರುವ ಸುದ್ದಿ, ದೆಹಲಿ ಮಟ್ಟದಲ್ಲೂ ಸದ್ದು ಮಾಡ್ತಿದೆ. ಅದ್ರ ಎಫೆಕ್ಟ್ ಇದೀಗ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಂಬಂಧಿಗೆ ಬಿಗ್ ಶಾಕ್ ಕೊಟ್ಟಿದೆ.. ಜಾರಿ ನಿರ್ದೇಶನಾಲಯ ನೋಟಿಸ್ ಕೊಟ್ಟಿದ್ದು, ಪವರ್ ಟಿವಿಯ ಮೆಗಾ ಇಂಪ್ಯಾಕ್ಟ್ ಆಗಿದೆ.
ಸ್ಟಿಂಗ್ ಆಪರೇಷನ್‌ಗಳ ಕಿಂಗ್ ಪವರ್ ಟಿವಿ. ಭ್ರಷ್ಟರ ವಿರುದ್ಧ ನಿರ್ಭೀತ ಹೋರಾಟ ಮಾಡುತ್ತಲೇ ಬಂದಿದೆ ಪವರ್ ಟಿವಿ.. ಸಮಾಜದ, ರಾಜಕಾರಣದ ಭ್ರಷ್ಟಾಚಾರಗಳ ಬಗ್ಗೆ ನಿರಂತರ ವರದಿ ಮಾಡುತ್ತಲೇ ಬಂದಿದೆ.. ಸ್ಟಿಂಗ್ ಆಪರೇಶನ್‌ಗಳ ಮೂಲಕ ಭ್ರಷ್ಟರ ಮುಖವಾಡ ಬಯಲು ಮಾಡುವ ಮೂಲಕ ಜನಸಾಮಾನ್ಯರನ್ನ ಎಚ್ಚರಿಸುವ ಕೆಲಸ ಮಾಡುತ್ತಿದೆ. ಅಷ್ಟೇ ಅಲ್ಲ, ಯಾವ ರಾಜಕಾರಣಿಗಳ ಬೆದರಿಕೆಗೂ ಜಗ್ಗದೆ ದಿಟ್ಟತನದ ವರದಿ ಮಾಡ್ತಿರೋದು ಪವರ್ ಟಿವಿಯ ಹೆಗ್ಗಳಿಕೆ. ಹೌದು, ಹೀಗೆ ಪವರ್ ಟಿವಿಯಲ್ಲಿ ದಾಖಲೆ ಸಮೇತ ಸುದ್ದಿ ಮಾಡಿದ ಪವರ್ ಟಿವಿಗೆ ದೊಡ್ಡ ಗೆಲುವು ಸಿಕ್ಕಿದೆ. ಈ ಮೂಲಕ ಪವರ್ ಟಿವಿ ಸ್ಟಿಂಗ್ ಆಪರೇಷನ್‌ನ ಬೃಹತ್ ಇಂಪ್ಯಾಕ್ಟ್ ಆಗಿದ್ದು, ಪ್ರಾದೇಶಿಕ ನ್ಯೂಸ್ ಚಾನೆಲ್‌ಗೆ ಅತಿದೊಡ್ಡ ಜಯವಾಗಿದೆ.
ರಾಜ್ಯದ ಪ್ರಭಾವಿ ರಾಜಕಾರಣಿಗೆ ‘ಪವರ್’ ಸ್ಟಿಂಗ್ ಆಪರೇಶನ್ ಭಾರೀ ಹೊಡೆತ ಕೊಟ್ಟಿದೆ. ಕರ್ನಾಟಕದಲ್ಲಿ ಅತಿದೊಡ್ಡ ಸಂಚಲನ ಮೂಡಿಸಿರುವ ಸುದ್ದಿ ಕೂಡ ಹೌದು. ಜೊತೆಗೆ, ದೆಹಲಿ ಮಟ್ಟದಲ್ಲೂ ಸದ್ದು ಮಾಡ್ತಿದೆ ಈ ಸುದ್ದಿ. ಹೌದು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಂಬಂಧಿಗೆ ED ಶಾಕ್ ಕೊಟ್ಟಿದ್ದು, ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದೆ. ಈಗ ಮಾಜಿ ಮುಖ್ಯಮಂತ್ರಿ ಬಿಎಸ್ವೈ ಸಂಬಂಧಿ ಮರಿಸ್ವಾಮಿ ಯಾವುದೇ ಕ್ಷಣದಲ್ಲಿ ಬಂಧನವಾಗುವ ಸಾಧ್ಯತೆ ದಟ್ಟವಾಗಿದೆ.. ಜೊತೆಗೆ, ಮರಿಸ್ವಾಮಿಯ ಎಲ್ಲಾ ಆರ್ಥಿಕ ಚಟುವಟಿಕೆಗಳ ಬಗ್ಗೆ ED ನಿಗಾ ವಹಿಸಿದ್ದು, ಮರಿಸ್ವಾಮಿ ಪತ್ನಿ ವೀಣಾ ಮರಿಸ್ವಾಮಿ, ಪುತ್ರ ದೀಪಕ್‌ಗೂ ED ಸಮನ್ಸ್ ನೀಡಿದೆ. ಮರಿಸ್ವಾಮಿ ಕುಟುಂಬದ ಎಲ್ಲಾ ಹಣಕಾಸು ವ್ಯವಹಾರಗಳ ತನಿಖೆಗೆ ಆದೇಶ ನೀಡಿದ್ದು, ಉದ್ಯಮಗಳು, ಆರ್ಥಿಕ ಚಟುವಟಿಕೆಗಳ ಸಮಗ್ರ ತನಿಖೆಗೆ ಆದೇಶಿಸಲಾಗಿದೆ.
ಮರಿಸ್ವಾಮಿ ಆಸ್ತಿ ವಿವರ, ಬ್ಯಾಂಕ್ ಲೇವಾದೇವಿ, ರಾಜಕೀಯ ಒಡನಾಟದ ವಿವರ. ಮರಿಸ್ವಾಮಿಯ ಎಲ್ಲಾ ಅಕ್ರಮ ಹಣಕಾಸು ಅವ್ಯವಹಾರಗಳ ಬಗ್ಗೆ ಮಾಹಿತಿ ಜೊತೆಗೆ,ಕ್ರಿಪ್ಟೋ ಕರೆನ್ಸಿ, ಹವಾಲಾ ವ್ಯವಹಾರ, ಭ್ರಷ್ಟಾಚಾರ, ಮನಿ ಲಾಂಡರಿಂಗ್ , ಬಿಜಿನೆಸ್, ಕಂಪನಿಗಳ ವ್ಯವಹಾರ, ವುಡ್ ಬಿಜಿನೆಸ್, ಸಾ ಮಿಲ್ ಬಿಜಿನೆಸ್ ವಿವರ ಹಾಗು ರಾಜಕೀಯ ಚಟುವಟಿಕೆ, ರಾಜಕಾರಣಿಗಳೊಂದಿಗೆ ನಡೆಸಿದ ಆರ್ಥಿಕ ವ್ಯವಹಾರಗಳ ಮಾಹಿತಿ ಕಲೆಹಾಕಲಾಗ್ತಿದೆ. ಕಾನೂನು & ಸುವ್ಯವಸ್ಥೆ ಬಳಸಿಕೊಂಡು ಭ್ರಷ್ಟಚಾರ ನಡೆಸಿದ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಲಾಗ್ತಿದೆ. )
ಮರಿಸ್ವಾಮಿ ಭ್ರಷ್ಟಾಚಾರದ ಕುರಿತು ಪವರ್ ಟಿವಿಯಿಂದ ಸ್ಟಿಂಗ್ ಆಪರೇಷನ್ ನಡೆದಿತ್ತು. ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಸುಧೀಂದ್ರ ರಾವ್ ಸ್ಟಿಂಗ್ ಆಪರೇಶನ್ ನಲ್ಲಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ರು. ಅಧ್ಯಕ್ಷ ಹುದ್ದೆಗೆ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ 16 ಕೋಟಿ ರೂಪಾಯಿ ಲಂಚ ಕೇಳಿದ್ದ.
16 ಕೋಟಿ ರೂಪಾಯಿ ಪೈಕಿ 9 ಕೋಟಿ 75 ಲಕ್ಷ ರೂಪಾಯಿ ಮರಿಸ್ವಾಮಿ ಮೂಲಕ ಸಂದಾಯ ಮಾಡಲಾಗಿತ್ತು. ವಿಜಯೇಂದ್ರ ಪರವಾಗಿ 9.75 ಕೋಟಿ ರೂಪಾಯಿ ಪಡೆದಿದ್ದರೆಂದು ಹೇಳಿದ್ರು ಸುಧೀಂದ್ರ ರಾವ್. ಸ್ಟಿಂಗ್ ಆಪರೇಶನ್‌ನಲ್ಲಿ ಮರಿಸ್ವಾಮಿ ಅಕ್ರಮಗಳ ಕುರಿತು ಸಂಪೂರ್ಣ ಮಾಹಿತಿ ಜಗತ್ತಿಗೆ ಪರಿಚಯವಾಗಿತ್ತು. ಮರಿಸ್ವಾಮಿ ಸುಮಾರು 900 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಮಾಡಿರುವ ಮಾಹಿತಿ ಕೂಡ ಸಿಕ್ಕಿತ್ತು.
ಸದ್ಯ ಪವರ್ ಟಿವಿ ಸ್ಟಿಂಗ್ ಆಪರೇಶನ್ ಆಧಾರ ಹಾಗು ಸುಧೀಂದ್ರ ರಾವ್ ನೀಡಿದ ಮಾಹಿತಿ ಅನ್ವಯ ಜಾರಿ ನಿರ್ದೇಶನಾಲಯದಿಂದ ತನಿಖೆ ನಡೆಯುತ್ತಿದೆ. ಈ ಕುರಿತು ಕೇಂದ್ರ ಸರ್ಕಾರದ ಇಂಟೆಲಿಜೆನ್ಸ್ ಇಲಾಖೆಯಿಂದ ರಹಸ್ಯ ತನಿಖೆ ನಡೆದಿದೆ. ತನಿಖೆ ವೇಳೆ ಮರಿಸ್ವಾಮಿಯ ಎಲ್ಲಾ ವ್ಯವಹಾರಗಳು ಬಹಿರಂಗವಾಗಲಿದೆ. ಆಗ ಯಡಿಯೂರಪ್ಪ, ಪುತ್ರ ವಿಜಯೇಂದ್ರಗೂ ಸಂಕಷ್ಟ ಎದುರಾಗೋದ್ರಲ್ಲಿ ಅನುಮಾನವೇ ಇಲ್ಲ.
ಬ್ಯೂರೋ ರಿಪೋರ್ಟ್ ಪವರ್ ಟಿವಿ