ಬೆಂಗಳೂರು : ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು ವಿಧಾನಸೌಧದಲ್ಲಿರುವ ತಮ್ಮ ಕಚೇರಿಯನ್ನ 70 ಲಕ್ಷ ರೂಪಾಯಿ ವೆಚ್ಚ ಮಾಡಿ ನವೀಕರಣ ಮಾಡಿಸಿಕೊಂಡಿದ್ದಾರೆ. ಅದೂ ಯಾವುದೇ ಟೆಂಡರ್ ಕರೆಯದೇ!
ತುರ್ತು ಪರಿಸ್ಥಿತಿಯ 4ಜಿ ವಿನಾಯಿತಿ ಅಡಿಯಲ್ಲಿ ಲೋಕೋಪಯೋಗಿ ಇಲಾಖೆ ಕೆಲಸ ಮಾಡಿ ಮುಗಿಸಿದೆ. ಸೂಪರ್ ಸಿಎಂ ಎಚ್.ಡಿ. ರೇವಣ್ಣ ಅವರಿಗೆ ಡಿಸಿಎಂ ಪರಮೇಶ್ವರ್ ಮೇಲೆ ತುಂಬಾ ಪ್ರೀತಿ ಅನಿಸುತ್ತೇ? ಅದಕ್ಕಾಗಿ ಲೋಕೋಪಯೋಗಿ ಇಲಾಖೆಯಿಂದಲೇ ಅದೂ ಯಾವುದೇ ಟೆಂಡರ್ ಕರೆಯದೇ 4 ಜಿ ವಿನಾಯಿತಿಯಲ್ಲಿ, ಅಂದ್ರೆ ಅತಿವೃಷ್ಠಿ, ಅನಾವೃಷ್ಠಿ ಸಮಯದಲ್ಲಿ ಮಾಡುವ ಕಾಮಗಾರಿಗೆ ಬಳಸಬೇಕಾದ ಹಣವನ್ನು ಪರಂ ಕಚೇರಿಗಾಗಿ ವ್ಯಯ ಮಾಡಿದ್ದಾರೆ!
ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಪರಮೇಶ್ವರ್ ಕಚೇರಿ 327 ಹಾಗೂ 328 ಎ ಕಚೇರಿ ನವೀಕರಣಕ್ಕೆ 70 ಲಕ್ಷ ಹಣ ಬೇಕಾ? ಒಳಗೆ ಹೋಗಿ ನೋಡಿದ್ರೆ ಅಂಥಾ ಹೈಟೆಕ್ ಕಾಮಗಾರಿಗಳೇನೋ ಕಾಣ್ತಾನೇ ಇಲ್ಲಾ..! ಹೊಸದಾಗಿ ಸುಣ್ಣ, ಬಣ್ಣ ಬಳಿಯಲಾಗಿದೆ. ಕರ್ಟನ್ ಹಾಕಲಾಗಿದೆ. ಮೂರು ಫ್ಯಾನೂ, ಹೊಸ ಸೋಫಾ ಸೆಟ್ ಬಿಟ್ರೆ ಮತ್ತಿನ್ನೇನೂ ಕಚೇರಿಯಲ್ಲಿ ಇಲ್ಲ! ಇಷ್ಟಕ್ಕೇ 70 ಲಕ್ಷ ರೂಪಾಯಿನಾ ಅನ್ನೋ ಅನುಮಾನ ಮೂಡ್ತಾ ಇದೆ. ರೈತರ ಸಾಲಮನ್ನಾಕ್ಕೆ ದುಡ್ಡಿಲ್ಲ ಅಂತಾರೆ.. ಕಚೇರಿ ನವೀಕರಣಕ್ಕೆ ಬೇಕಾದಷ್ಟು ದುಡ್ಡನ್ನು ಬೇಕಾಬಿಟ್ಟಿ ಖರ್ಚು ಮಾಡೋಕೆ ದುಡ್ಡಿದೆ ಅನ್ನೋದು ಆರ್ಟಿಐನಿಂದ ಬಹಿರಂಗಗೊಂಡಿದೆ.
ರೈತರ ಸಾಲಮನ್ನಾಕ್ಕೆ ದುಡ್ಡಿಲ್ಲ – ಡಿಸಿಎಂ ಕಚೇರಿ ನವೀಕರಣಕ್ಕೆ ಬೇಕಾದಷ್ಟು ದುಡ್ಡಿದೆ..!
TRENDING ARTICLES