Thursday, December 26, 2024

ಬಿಜೆಪಿ ರಾಜಕೀಯ ಬಣ್ಣ ಬಳಿದು ಹೆಣ್ಣುಮಗಳನ್ನು ಅವಮಾನಿಸುತ್ತಿದೆ : ಸಿದ್ದರಾಮಯ್ಯ

ಮೈಸೂರಿನ ಟಿ.ನರಸೀಪುರದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ!
ಕುಂದುಕೊರತೆ ಅಹವಾಲು ಸಭೆಯಲ್ಲಿ ಜಮಲಾರ್ ಅನ್ನೋ ಮಹಿಳೆ, ಶಾಸಕ ಯತೀಂದ್ರ ಅವರು ಜನರ ಕೈಗೆ ಸಿಗಲ್ಲ ಎಂದು ದೂರಿದಾಗ ಸಿಟ್ಟಾದ ಸಿದ್ದರಾಮಯ್ಯ, ಮಹಿಳೆಯ ವೇಲ್ ಎಳೆದು ಮೈಕ್​ ಕಿತ್ತೆಸೆದು ಕೂಗಾಡಿದ್ದರು.ಮಹಿಳೆ ಕ್ಷಮೆ ಕೇಳಿದ್ರೂ ಸಿದ್ದರಾಮಯ್ಯ ತಣ್ಣಗಾಗಿರಲಿಲ್ಲ.
ಸಿದ್ದರಾಮಯ್ಯ ಅವರ ವರ್ತನೆ ತೀವ್ರ ಟೀಕೆಗೆ ಗುರಿಯಾಗಿದ್ದು, ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಟ್ವೀಟ್ ಮಾಡಿದ್ದಾರೆ! ”ವರುಣಾ ಕ್ಷೇತ್ರದಲ್ಲಿ ನಡೆದ ಘಟನೆ ಬಗ್ಗೆ ಪಕ್ಷದ ಕಾರ್ಯಕರ್ತೆ ಜಮಲಾರ್ ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿ ನಾಯಕರು ಘಟನೆಗೆ ರಾಜಕೀಯ ಬಣ್ಣ ಬಳಿಯುವ ಮೂಲಕ ಆ ಹೆಣ್ಣುಮಗಳನ್ನು ಅವಮಾನಿಸುತ್ತಿದ್ದಾರೆ. ಬಿಜೆಪಿ ನಾಯಕರಿಗೆ ಮಹಿಳೆಯರ ಮೇಲೆ ಇರುವ ಗೌರವ ಲೋಕಕ್ಕೆ ಗೊತ್ತು. ಇವರಿಂದ ನಾನು ಕಲಿಯುವುದೇನಿಲ್ಲ”ಎಂದು ಒಂದು ಟ್ವೀಟ್​ನಲ್ಲಿ ಹೇಳಿದ್ದರೆ, ಇನ್ನೊಂದು ಟ್ವೀಟ್​ನಲ್ಲಿ ”ಇಂದು ವರುಣ ಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಕಾರ್ಯಕರ್ತೆಯೊಬ್ಬರ‌ ದೀರ್ಘ ಭಾಷಣವನ್ನು ನಿಲ್ಲಿಸಲು ಪ್ರಯತ್ನಿಸುವಾಗ ನಡೆದ ಘಟನೆ‌ ಆಕಸ್ಮಿಕವಾದುದು, ಅದರಲ್ಲಿ ದುರುದ್ದೇಶ ಇರಲಿಲ್ಲ. 15 ವರ್ಷಗಳಿಂದ‌ ನಾನು ಬಲ್ಲ‌ ಆ‌‌ ಕಾರ್ಯಕರ್ತೆ ನನ್ನ‌ಸೋದರಿ ಸಮಾನ”ಎಂದು ಬರೆದುಕೊಂಡಿದ್ದಾರೆ!

RELATED ARTICLES

Related Articles

TRENDING ARTICLES