Friday, November 22, 2024

ಹೈಜಾಕ್ ಮಾಡಿಲ್ಲ ಅದರ ಅವಶ್ಯಕತೆನೂ ನಮಗಿಲ್ಲ : ಡಿಕೆಶಿ

ಬೆಂಗಳೂರು: ನಾವು ಯಾರನ್ನೂ ಹೈಜಾಕ್ ಮಾಡಿಲ್ಲ, ಅದರ ಅವಶ್ಯಕತೆಯು ನಮಗಿಲ್ಲ. ಕಾಂಗ್ರೆಸ್‌ನ ಎಲ್ಲ 69 ಮಂದಿ ಪಕ್ಷಕ್ಕೇ ಮತ ನೀಡಿದ್ದಾರೆ. ಅದು ಸಮಾಧಾನದ ವಿಷಯ. ಬೇರೆ ಪಕ್ಷದ ವಿಚಾರ ನನಗೆ ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ರಾಜ್ಯಸಭೆ ಚುನಾವಣೆ ಮತದಾನ ಮುಗಿದ ನಂತರ ಸುದ್ದಿಗಾರರೋಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಶಾಸಕರನ್ನು ಕಾಂಗ್ರೆಸ್‌ವರು ಹೈಜಾಕ್ ಮಾಡಿದ್ದಾರೆ ಎಂದು ಜೆಡಿಎಸ್‌ ಪಕ್ಷದ ಕುಮಾರಸ್ವಾಮಿ ಆರೋಪಿಸಿದ್ದರು. ಈ ಹೇಳಿಕೆಗೆ ಅವರು ಪ್ರತಿಕ್ರಿಯಿಸಿ, ನಾವು ಹೈಜಾಕ್ ಮಾಡಬೇಕು ಅಂತಿದ್ದರೆ ಅರ್ಧಡಜನ್ ಶಾಸಕರು ಇದ್ದರು. ಆದರೆ ನಮಗೆ ಅದರ ಅವಶ್ಯಕತೆ ಇಲ್ಲ ಎಂದರು.

ಇನ್ನು ಬೇರೆಯವರಿಗೆ ಮುಜುಗರ ಮಾಡುವುದು ನಮಗೆ ಬೇಕಿಲ್ಲ. ಅವರಿಗೆ ನಾವೇನು ಅಡ್ವೈಸ್ ಮಾಡಿದ್ದೇವೆ ಅಂತ ಬೇಕಿದ್ದರೆ ಅವರನ್ನೇ ಕೇಳಿ. ನಮ್ಮ ಪಕ್ಷದ 69 ಮಂದಿಗೆ ವಿಪ್ ನೀಡಿದ್ದೆವು. ಅವರೆಲ್ಲರೂ ನಮಗೆ ಮತಹಾಕಿದ್ದಾರೆ. ಅದನ್ನು ನಾನು ಕಣ್ಣಲ್ಲಿ ನೋಡಿದ್ದೇನೆ. ನನಗೆ ಅಷ್ಟು ಸಾಕು. ಬೇರೆಯವರ ವಿಚಾರ ನಾನು ಮಾತಾಡುವುದಿಲ್ಲ ಎಂದು ಉತ್ತರಿಸಿದರು.

ಜೆಡಿಎಸ್ ಮುಖಂಡ ರೇವಣ್ಣ ನಿಮಗೆ ಮತಪತ್ರ ತೋರಿಸಿದರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಒಂದು ಪಕ್ಷದ ಮತಗಟ್ಟೆ ಎಜೆಂಟ್ ಆಗಿ ಗೌಪ್ಯ ಮತದಾನ ಪ್ರಕ್ರಿಯೆ ಬಗ್ಗೆ ಮಾತಾಡಲು ಹಕ್ಕಿಲ್ಲ. ಅದು ಸರಿಯೂ ಅಲ್ಲ. ನಾನು ಕಣ್ಣಲ್ಲಿ ಕಂಡಿದ್ದು ಮಾತ್ರ ಹೇಳಬಹುದು. ಬೇರೆ ಪಕ್ಷದ ಯಾರೂ ನನಗೆ ಮತಪತ್ರ ತೋರಿಸಿಲ್ಲ. ರೇವಣ್ಣನವರ ವಿಚಾರಕ್ಕೆ ಎರಡೂ ಪಕ್ಷದವರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಗೌಪ್ಯ ಮತದಾನದ ಬಗ್ಗೆ ನಾನು ಮಾತಾಡುವುದಿಲ್ಲ, ಅದಕ್ಕೆ ನನಗೆ ಹಕ್ಕೂ ಇಲ್ಲ ಎಂದರು.

RELATED ARTICLES

Related Articles

TRENDING ARTICLES