Monday, December 23, 2024

ಗಾಂಜಾ ಮಾರುತ್ತಿದ್ದ ಮಹಿಳೆ ಅಂದರ್​

ಚಾಮರಾಜನಗರ : ಮನೆಯಲ್ಲೇ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ಚಾಮರಾಜ ನಗರ ಜಿಲ್ಲೆ ಹನೂರು ತಾಲೂಕಿನ‌ ಗುಂಡಿ‌ಮಾಳ ಗ್ರಾಮದಲ್ಲಿ ನಡೆದಿದೆ.

ಶಶಿಕಲಾ ಎಂಬಾಕೆ ಬಂಧಿತ ಆರೋಪಿ‌. ಅಕ್ರಮವಾಗಿ ಈಕೆ ಮನೆಯಲ್ಲಿ ಒಣ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸಿಇಎನ್ ಹಾಗೂ ಹನೂರು ಪೊಲೀಸರು ದಾಳಿ ನಡೆಸಿ ಮಾಲು ಸಮೇತ ಮಹಿಳೆಯನ್ನು ಬಂಧಿಸಿದ್ದಾರೆ.

ಇನ್ನು ಆರೋಪಿಯಿಂದ ಒಣ ಗಾಂಜಾ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸದ್ಯ ಈ ಪ್ರಕರಣ ಚಾಮರಾಜನಗರ ಜಿಲ್ಲೆ ಹನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

RELATED ARTICLES

Related Articles

TRENDING ARTICLES