ಇವನು ಇವತ್ತಲ್ಲ ನಾಳೆ ಆರಿ ಹೋಗೋ ಬೆಂಕಿಯಲ್ಲ. ಸದಾ ಒಳಗೇ ಬುಸುಗುಟ್ಟೋ ಬೂದಿ ಮುಚ್ಚಿದ ಕೆಂಡ. ಕಣ್ಣಿಗೆ ಕಾಣಿಸದಿದ್ರೂ ತನ್ನೊಳಗೆ ತಾನೇ ಉರೀತಾ ಇರ್ತಾನೆ. ಇಷ್ಟೆಲ್ಲಾ ಬಿಲ್ಡಪ್ ಯಾರಿಗೆ ಅಂತ ಯೋಚನೆ ಮಾಡ್ತಿದ್ದೀರಾ..? ಯೆಸ್.. ಹಳ್ಳಿ ಹುಡ್ಗನಾಗಿ ಅನೀಶ್ಫೈರ್ ಬ್ರಾಂಡ್ ಆಗಿ ಎಂಟ್ರಿ ಕೊಡ್ತಿದ್ದಾರೆ. ಸದ್ಯ, ಎಲ್ಲೆಲ್ಲೂ ಬೆಂಕಿ ಚಿತ್ರದ ಟ್ರೈಲರ್ ಬಗ್ಗೆಯೇ ಟಾಕು. ಹಾಗಿದ್ರೆ ಅನೀಶ್ ಟೆಂಪರೇಚರ್ ಹೇಗಿದೆ ಗೊತ್ತಾ..?
‘ಬೆಂಕಿ’ಯಲ್ಲಿ ಅರಳಿದ ಅನೀಶ್ ಅಣ್ಣ- ತಂಗಿ ರೋಚಕತೆ
ಹಳ್ಳಿ ಹುಡುಗನ ಬೆಂಕಿ ಗೆಟಪ್.. ಹಾರರ್ ಕಾಮಿಡಿ ಥ್ರಿಲ್ಲರ್
ಶಿವಣ್ಣ- ರಾಧಿಕಾ ಕಾಂಬೋನ ಬೀಟ್ ಮಾಡುತ್ತಾ ಬೆಂಕಿ..?
ಅಣ್ಣ – ತಂಗಿ ಸೆಂಟಿಮೆಂಟ್ ಜೊತೆಗೆ ಮಸ್ತ್ ಕಾಮಿಡಿ ಕಿಕ್ಕು
ಸಿನಿಲೋಕದಲ್ಲಿ ತವರಿಗೆ ಬಾ ತಂಗಿ, ಅಣ್ಣ ತಂಗಿ ಸಿನಿಮಾಗಳು ಹೊಸ ಟ್ರೆಂಡ್ ಸೆಟ್ ಮಾಡಿದ್ದು ಗೊತ್ತೇ ಇದೆ. ಹೊಸ ದಾಖಲೆ ಬರೆದ ಈ ಚಿತ್ರದಲ್ಲಿ ಅಣ್ಣ ತಂಗಿಯ ಸಂಬಂಧವನ್ನು ಕಣ್ಣಿಗೆ ಕಟ್ಟಿದಂತೆ ತೋರಿಸಲಾಗಿತ್ತು. ಅದೇ ರೀತಿ ಪಕ್ಕಾ ಹಳ್ಳಿಯ ಗೆಟಪ್ನಲ್ಲಿ ಬೆಂಕಿ ಅವತಾರದಲ್ಲಿ ನಟ ಅನೀಶ್ ಗ್ರ್ಯಾಂಡ್ ಎಂಟ್ರಿ ಕೊಡ್ತಿದ್ದಾರೆ.
ಹೊಸತನದ ಕಥೆ, ಹೊಸ ಬಗೆಯ ಸಬ್ಜೆಕ್ಟ್, ವಿಭಿನ್ನವಾದ ಹಳ್ಳಿ ಸೊಗಡಿನ ಲಾಂಗ್ವೇಜ್ ಇರೋ ಸಿನಿಮಾ ಇದು. ಚಿತ್ರದ ಟೈಟಲ್ ಬೆಂಕಿ ಸಖತ್ ಇಂಟರೆಸ್ಟಿಂಗ್ ಆಗಿದೆ. ಈಗಾಗ್ಲೇ ಬೆಂಕಿ ಚಿತ್ರದ ಟೀಸರ್ ನೋಡಿದವ್ರು ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ರು. ಅನೀಶ್ ಆ್ಯಕ್ಟಿಂಗ್ಗೆ, ಆ್ಯಕ್ಷನ್ಗೆ, ತಂಗಿಯ ಜೊತೆಗಿನ ಪ್ರೀತಿಯ ಬಾಂಧವ್ಯದ ಬಗ್ಗೆ ಇಂಪ್ರೆಸ್ ಆಗಿದ್ರು. ಇದೀಗ ಟ್ರೈಲರ್ ಕೂಡ ಬೆಂಕಿ ಬಿರುಗಾಳಿ ಎಬ್ಬಿಸಿದೆ. ಪಕ್ಕಾ ಪ್ರಾಮಿಸಿಂಗ್ ಸಿನಿಮಾ ಇದು ಅಂತ ಕಮೆಂಟ್ಸ್ ಮಾಡ್ತಿದ್ದಾರೆ.
ರಾಮಾರ್ಜುನ ಚಿತ್ರದಲ್ಲಿ ಮಿಂಚಿದ್ದ ಅನೀಶ್ ತೇಜೇಶ್ವರ್ ಒಂದೊಳ್ಳೆ ಕಥೆಗಾಗಿ ಕಾಯ್ತಾ ಇದ್ರು. ಹಳ್ಳಿಯ ಬ್ಯಾಕ್ ಡ್ರಾಪ್ ಕಥೆಯ ಜೊತೆ ಸಬ್ಜೆಕ್ಟ್ ಸಖತ್ ಥ್ರಿಲ್ಲಿಂಗ್ ಆಗಿರೋದ್ರಿಂದ ಥಟ್ ಅಂತಾ ಓಕೆ ಮಾಡಿದ್ದಾರೆ.. ಶಿವಣ್ಣ- ರಾಧಿಕಾ ಕಾಂಬಿನೇಷನ್ ಬ್ರೇಕಪ್ ಮಾಡೋದು ತುಂಬಾ ಕಷ್ಟ. ಆದ್ರೂ, ಕಥೆ ಕೇಳಿ ಸಖತ್ ತಯಾರಿ ಮಾಡ್ಕೊಂಡು ಸಿಲ್ವರ್ ಸ್ಕ್ರೀನ್ ಮೇಲೆ ಮಿಂಚೋಕೆ ಸಜ್ಜಾಗಿದ್ದಾರೆ.
ಸಾದಾ ಸೀದ ಹಳ್ಳಿ ಹೈದನಾಗಿ, ತಂಗಿಗೆ ತಕ್ಕ ಅಣ್ಣನಾಗಿ ಕಾಣಿಸಿರೋ ಅನೀಶ್ಗೆ ನಾಯಕಿಯಾಗಿ ರೈಡರ್ ಖ್ಯಾತಿಯ ಸಂಪದ ಅಭಿನಯಿಸಿದ್ದಾರೆ. ತಂಗಿಯಾಗಿ ಕಾಣಿಸಿರುವ ಶ್ರುತಿ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಟ್ರೈಲರ್ನಲ್ಲಿ ಅನೀಶ್ಗೆ ತಂಗಿ ಮೇಲಿರುವ ಪ್ರೀತಿ ಎದ್ದು ಕಾಣುತ್ತದೆ. ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸೋ ತಂಗಿಯನ್ನು ಕೆಣಕಿದ್ರೆ ಬೆಂಕಿಯಂತೆ ಕೆಂಡಾಮಂಡಲವಾಗೋ ಅನೀಶ್ ಅವತಾರ ನೋಡೋಕೆ ಜುಲೈ 15ರವರೆಗೂ ಕಾಯಬೇಕು.
ಇತ್ತೀಚೆಗೆ ಈ ರೀತಿಯ ಹೊಸ ಪ್ರಯತ್ನಗಳು ತುಂಬಾ ಕಡಿಮೆ. ಹಾಗಾಗಿ ಬೆಂಕಿ ಚಿತ್ರದ ಮೇಲೆ ನಿರೀಕ್ಷೆಗಳು ಡಬಲ್ ಆಗಿವೆ. ಹಿರಿಯ ನಿರ್ದೇಶಕ ಎರ್ ಬಾಬು ಅವ್ರ ಮಗ ಎಆರ್ ಶಾನ್ ನಿರ್ದೇಶನದಲ್ಲಿ ಮೂಡಿ ಬರ್ತಿರೋ ಬೆಂಕಿ ಚಿತ್ರಕ್ಕೆ ಕೆ.ವಿ ರವಿಕುಮಾರ್, ಶ್ರೀಕಾಂತ್ ಪಿ ಬಂಡವಾಳ ಹೂಡಿದ್ದಾರೆ. ಆನಂದ್ ರಾಜ್ ವಿಕ್ರಮ್ ಸಂಗೀತ ಕೇಳಲು ಇಂಪಾಗಿರಲಿದೆ.ವೀನಸ್ ನಾಗರಾಜ್ ಮೂರ್ತಿ ಕ್ಯಾಮೆರಾ ಕಣ್ಣಲ್ಲಿ ಹಳ್ಳಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಎನಿವೇ, ಪ್ರೇಕ್ಷಕರಿಗೆ ಬೆಂಕಿ ಸಿನಿಮಾದ ತಾಪ ತಟ್ಟಬೇಕು ಅಂದ್ರೆ, ಜುಲೈ 15ರವರೆಗೂ ಕಾಯಲೇಬೇಕು.
ರಾಕೇಶ್ ಆರುಂಡಿ, ಫಿಲ್ಮ್ ಬ್ಯುರೋ, ಪವರ್ ಟಿವಿ