ಚಾಮರಾಜನಗರ: ಅರಣ್ಯ ಅಧಿಕಾರಿಗಳು ನಿರ್ಲಕ್ಷ ಮಾಡುತ್ತಿದ್ದಾರೆಂದು ಅರಣ್ಯಾಧಿಕಾರಿಗಳ ಜೀಪ್ ಅನ್ನು ರೈತರು ಪಂಚರ್ ಮಾಡಿದ್ದಾರೆ.
ನಿರಂತರ ಆನೆ ದಾಳಿಯಿಂದ ಬೇಸತ್ತಿದ್ದ ರೈತರಿಂದ ಅರಣ್ಯಾಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆ ಮಾಡಲಾಗುತ್ತಿದ್ದು, ಕಳೆದ ಹತ್ತಾರು ದಿನಗಳಿಂದ ಹುಂಡಿಪುರ, ಕೆಬ್ಬೇಪುರ ಭಾಗದಲ್ಲಿ ನಿರಂತರ ಆನೆ ದಾಳಿ ಮಾಡಲಾಗಿದೆ. ಫಸಲು ನಾಶ ಮಾಡುತ್ತಿರುವ ಕಾಡಾನೆಗಳು. ರವಿ ಹಾಗೂ ಕುಮಾರ್ ಎಂಬವರ ಜಮೀನಿಗೆ ಲಗ್ಗೆ ಇಟ್ಟ ಗಜಪಡೆ ಲಕ್ಷಾಂತರ ರೂ. ನಷ್ಟ ಮಾಡಿ ಪರಾರಿಯಾಗಿದ್ದಾರೆ.
ಅದಲ್ಲದೇ, ತೆಂಗಿನ ಸಸಿ, ಸೋಲಾರ್ ಬೇಲಿ, ಗೇಟ್, ಬಾಳೆ ಫಸಲು ಸೇರಿದಂತೆ 3-4 ಲಕ್ಷ ರೂ. ಹಾನಿ ಮಾಡಿದ್ದ ಕಾಡಾನೆಗಳು. ನಿರಂತರವಾಗಿ ಆನೆಗಳು ಬೆಳೆ ನಾಶ ಮಾಡುತ್ತಿದೆ ಅಂತ ದೂರಿದರೂ ಕ್ರಮಕೈಗೊಳ್ಳದ ಅರಣ್ಯಧಿಕಾರಿಗಳು. ನಿರ್ಲಕ್ಷ್ಯ ಮಾಡುತ್ತಿದ್ದರೆಂಬ ಆರೋಪ ಹಿನ್ನೇಲೆಯಲ್ಲಿ ಘಟನಾ ಸ್ಥಳಕ್ಕೆ ಬಂದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕರೆ ಆರ್ ಎಫ್ಒ ಶ್ರೀನಿವಾಸ್ ಹಾಗೂ ಗೋಪಾಲಸ್ವಾಮಿ ಬೆಟ್ಟ ಆರ್ ಎಫ್ ನವೀನ್ ಕುಮಾರ್ ಅವರಿಗೆ ರೈತರು ತರಾಟೆಗೆ ತೆಗೆದುಕೊಂಡಿದ್ದಾರೆ.
ಇನ್ನು, ಎಸಿಎಫ್ ಹಾಗೂ ಸಿಎಫ್ಒ ಸ್ಥಳಕ್ಕೆ ಬಂದು ಆನೆ ದಾಳಿ ನಿಯಂತ್ರಿಸಬೇಕೆಂದು ರೈತರು ಪಟ್ಟು ಹಿಡಿದಿದ್ದು, ಅರಣ್ಯಾಧಿಕಾರಿಗಳ ಎತ್ತ ತೆರಳದಂತೆ ಜೀಪಿನ ಗಾಳಿ ತೆಗೆದು ಪಂಚರ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಈ ಹಿಂದೆ ನರಹಂತಕ ಹುಲಿ ದಾಳಿಗೆ ಬೇಸತ್ತಿದ್ದ ಈ ಭಾಗದ ರೈತರು ಈಗ ನಿರಂತರ ಆನೆ ದಾಳಿಗೆ ಕಂಗಲಾಗಿದೆ.