ಬೆಂಗಳೂರು : ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ತಾನು ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಅಂತ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ನೀಡುವ ವಿಚಾರವನ್ನು ಪ್ರಸ್ತಾಪಿಸಿದ್ರು. ಕಾಂಗ್ರೆಸ್ ಶಾಸಕರ ಹೇಳಿಕೆಗಳಿಂದ ತಾಳ್ಮೆ ಕಳೆದುಕೊಂಡಿರುವ ಸಿಎಂ ಕಾಂಗ್ರೆಸ್ ವಿರುದ್ಧ ಬಹಿರಂಗವಾಗಿ ಕೆಂಡಕಾರಿದ್ದಾರೆ. ”ಕಾಂಗ್ರೆಸ್ ನಾಯಕರು ಮೈತ್ರಿ ಧರ್ಮ ಮೀರಿ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಶಾಸಕರ ಹೇಳಿಕೆಗಳಿಗೆ ನಾಯಕರು ಕಡಿವಾಣ ಹಾಕಲಿ. ಇದು ಯಾವುದೂ ನನಗೆ ಯಾವುದೇ ರೀತಿಯ ಪರಿಣಾಮ ಬೀರಲ್ಲ. ಶಾಸಕರ ವರ್ತನೆ ಇದೇ ರೀತಿ ಮುಂದುವರೆದ್ರೆ ನಾನು ಕೆಳಗಿಳಿಯುತ್ತೇನೆ. ಇಂಥಾ ಹೇಳಿಕೆಗಳಿಂದ ಕಾಂಗ್ರೆಸ್ ಪಕ್ಷಕ್ಕೇ ನಷ್ಟ” ಎಂದಿದ್ದಾರೆ ಸಿಎಂ.
ಸಿದ್ದರಾಮಯ್ಯನವರೇ ತಮ್ಮ ಸಿಎಂ ಅಂತ ಶಾಸಕ ಎಸ್.ಟಿ ಸೋಮಶೇಖರ್ ಹೇಳಿದ್ದರು. ಸಚಿವ ಎಂಟಿಬಿ ನಾಗರಾಜ್ ಅವರೂ ಕೂಡ ಸಿದ್ದರಾಮಯ್ಯ ಅವರ ಪರ ನೇರ ಬ್ಯಾಟಿಂಗ್ ಮಾಡಿದ್ದರು. ಶಾಸಕ ಸುಧಾಕರ್ ಅವರು ಸಿಎಂ ವಿರುದ್ಧ ಕಿಡಿಕಾರಿದ್ದರು. ಈ ಎಲ್ಲಾ ಹೇಳಿಕೆಗಳಿಗೆ ಬೇಸತ್ತು ರಾಜೀನಾಮೆ ಬಗ್ಗೆ ಸಿಎಂ ಮಾತಾಡಿದ್ದಾರೆ.
ರಾಜೀನಾಮೆ ನೀಡಲು ಸಿದ್ಧರಿದ್ದಾರಂತೆ ಸಿಎಂ ಕುಮಾರಸ್ವಾಮಿ!
TRENDING ARTICLES