ಬೆಂಗಳೂರು: ಹಿಜಾಬ್ ಆಯಿತು, ಆಜಾನ್ ಆಯ್ತು, ಇದೀಗ ಪ್ರಾರ್ಥನೆ ವಿಚಾರದಲ್ಲಿ ವಿವಾದ ಶುರುವಾಗಿದೆ.
ಹಿಂದೂಗಳಿಗೊಂದು ನ್ಯಾಯ? ಅನ್ಯ ಕೋಮಿಗೆ ಮತ್ತೊಂದು ನ್ಯಾಯವೇ? ಹಿಂದೂಪರ ಸಂಘಟನೆಗಳಿಂದ ಸರ್ಕಾರಕ್ಕೆ ಪ್ರಶ್ನೆಯಾಗಿದ್ದು, ಕಳೆದ ರಂಜಾಬ್ ಹಬ್ಬ ದಿನ ರಸ್ತೆಗಳಲ್ಲಿಯೇ ಅನುಮತಿ ಪಡೆಯದೇ ಪ್ರಾರ್ಥನೆ ಅವಕಾಶ ಮಾಡಿದ್ದು, ಆದರೆ ಹಿಂದೂ ಹಬ್ಬ, ಕಾರ್ಯಕ್ರಮಗಳಿಗೆ ಪರ್ಮಿಶನ್ ಕಡ್ಡಾಯವೆಂದು, RTI ಮಾಹಿತಿ ಆಧಾರದ ಮೇಲೆ ಹಿಂದೂಪರ ಸಂಘಟನೆಗಳು ಪ್ರಶ್ನಿಸಿದ್ದಾರೆ.
ಅದಲ್ಲದೇ, ಹಿಂದೂಗಳಿಗೊಂದು ರೂಲ್ಸ್, ಬೇರೆ ಕೋಮಿಗೆ ರೂಲ್ಸ್ ಪಾಲನೆಯಾಗಲ್ವೇ? RTI ಮಾಹಿತಿ ಆಧಾರದ ಮೇಲೆ ಹಿಂದೂಪರ ಸಂಘಟನೆಗಳು ಪ್ರಶ್ನಿಸಿದ್ದು, 3.5.2022 ರಂದು ರಾಜ್ಯದ ಎಲ್ಲೆಡೆ ರಂಜಾನ್ ಹಬ್ಬ ಆಚರಣೆಯನ್ನು ಮಾಡಲಾಗಿದ್ದು, ಅಂದು ಬೆಂಗಳೂರಿನಲ್ಲಿ ರಸ್ತೆಯಲ್ಲಿ ಪ್ರಾರ್ಥನೆ, ಕಾರ್ಯಕ್ರಮ ಆಚರಣೆಗೆ ಯಾವುದೇ ಅನುಮತಿ ಪಡೆದಿಲ್ಲ ಎಂದು ಬೆಂಗಳೂರು ಜಂಟಿ ಪೊಲೀಸ್ ಆಯುಕ್ತರ ಕಚೇರಿ ಸ್ಪಷ್ಟನೆ ನೀಡಿದೆ.
ಇನ್ನು, ಸಾರ್ವಜನಿಕರಿಗೆ, ಸಂಚಾರಕ್ಕೆ ತೊಂದರೆ ನೀಡಿ ರಸ್ತೆಯಲ್ಲಿ ಪ್ರಾರ್ಥನೆ, ಕಾರ್ಯಕ್ರಮ ಮಾಡಿದ್ದು, ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತೊಂದರೆ ಮಾಡಿದವರ ವಿರುದ್ಧ ಯಾವುದೇ ಯಾಕೆ ಕ್ರಮಕೈಗೊಂಡಿಲ್ಲ..? ಎಂದು ಹಿಂದೂ ಜನಜಾಗೃತಿ ಸಮಿತಿ ಮುಖಂಡ ಮೋಹನ್ಗೌಡ ಪ್ರಶ್ನಿಸಿದ್ದಾರೆ. ಅದೇ ಹಿಂದೂಗಳು ಹಬ್ಬ ಆಚರಣೆ ಮಾಡಲು ನಗರ ಪಾಲಿಕೆ, ಬೆಸ್ಕಾಂ, ಪೋಲಿಸ್, ಸಂಚಾರ ಹೀಗೆ ಹಲವು ಕಡೆ ಅನುಮತಿ ಪಡೆಯಬೇಕು ಇದು ಅನ್ಯಾಯ ಅಲ್ಲವೇ ಹಿಂದೂಗಳಿಗೆ ಒಂದು ಕಾಯಿದೆ ಮುಸಲ್ಮಾನರಿಗೆ ಬೇರೆ ಕಾಯಿದೆಯೇ? ಗಣೇಶ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯವೆಂದು ಹಿಂದೂ ಪರ ಸಂಘಟನೆಗಳು ಪ್ರಶ್ನಿಸಿದ್ದಾರೆ.