ನವದೆಹಲಿ : ಕುತುಬ್ ಮಿನಾರ್ ವಿವಾದಕ್ಕೆ ಸಂಬಂಧಿಸಿದಂತೆ ಇಂದು ದೆಹಲಿ ಕೋರ್ಟ್ ತೀರ್ಪು ನೀಡಲಿದೆ. ಕುತುಬ್ ಮಿನಾರ್ ಸ್ಮಾರಕದಲ್ಲಿರುವ ಹಿಂದೂ ವಿಗ್ರಹಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಕೋರಿ ಹಿಂದೂ ಪರ ಸಂಘಟನೆಗಳು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ದೆಹಲಿಯ ಸಾಕೇತ್ ಕೋರ್ಟ್ ತೀರ್ಪು ನೀಡಲಿದೆ.
ಮೇ 24 ರಂದು ಅರ್ಜಿ ವಿಚಾರಣೆ ನಡೆಸಿದ್ದು ಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು. ಹಿಂದೂ ಸಂಘಟನೆಗಳ ಅರ್ಜಿಗೆ ಪುರಾತತ್ವ ಇಲಾಖೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಯಾವುದೇ ಕಾರಣಕ್ಕೂ ಸ್ಮಾರಕದ ಬಳಿ ಪೂಜೆಗೆ ಅವಕಾಶ ನೀಡಬಾರದು ಎಂದು ವಾದಿಸಿತ್ತು. ಇದೇ ವೇಳೆ ಜೂನ್ 6 ರಂದು ದೆಹಲಿ ಹೈಕೋರ್ಟ್ ನ ರಜಾ ಕಾಲದ ಪೀಠಕ್ಕೆ ಸಲ್ಲಿಕೆಯಾಗಿದ್ದ ಅರ್ಜಿ ಗೆ ಹಿನ್ನಡೆಯಾಗಿತ್ತು. ಅರ್ಜಿಯ ತುರ್ತು ವಿಚಾರಣೆ ಅಗತ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿತ್ತು. ಕುತುಬ್ ಮಿನಾರ್ ಬಳಿ ನಮಾಜ್ ಮಾಡುವುದನ್ನು ನಿಲ್ಲಿಸಬೇಕು ಎಂಬ ASI ಆದೇಶಕ್ಕೆ ತಡೆ ಕೋರಿ ಮುಸ್ಲಿಂ ಸಂಘಟನೆಗಳು ಕೋರ್ಟ್ ಮೊರೆ ಹೋಗಿದ್ದವು.