ಬೆಂಗಳೂರು : ರಾಜ್ಯಸಭೆ ಚುನಾವಣೆಗೆ ಇನ್ನು ಎರಡೇ ದಿನ ಬಾಕಿ ಇದ್ದು, ಎಲ್ಲಾ ಪಕ್ಷಗಳಿಗೂ ಟೆನ್ಷನ್ ಹೆಚ್ಚಾಗುತ್ತಿದೆ. ಮೇಲ್ನೋಟಕ್ಕೆ ನಾವೇ ಗೆಲ್ಲೋದು ಅಂತ ಬೀಗುತ್ತಿರೋರಿಗೆಲ್ಲಾ ಅಡ್ಡ ಮತದಾನವಾದ್ರೆ ಏನು ಕಥೆ ಎಂಬ ಲೆಕ್ಕಾಚಾರ ಕಾಡುತ್ತಿದೆ. ಇದನ್ನು ತಪ್ಪಿಸಲು ಕೆಲವರು ರೆಸಾರ್ಟ್ ಮೊರೆ ಹೋದ್ರೆ ಇನ್ನೂ ಕೆಲವರು ಬೇರೆಯದೇ ಕಾರ್ಯತಂತ್ರ ಹೆಣೆಯುತ್ತಿದ್ದಾರೆ.
ರಾಜ್ಯಸಭೆಯ ಚುನಾವಣೆಯ ಆರಂಭದಿಂದಲೂ ಕಾಂಗ್ರೆಸ್ ಹಟಕ್ಕೆ ಬಿದ್ದು ತನ್ನ ಅಭ್ಯರ್ಥಿಯನ್ನು ಹಾಕಿದೆ. ಹಾಗೆ ಬೆಂಬಲ ಕೊಡಿ ಎಂದ ಜೆಡಿಎಸ್ ನಾಯಕರಿಗೆ ನೀವೆ ಏಕೆ ಬೆಂಬಲ ಕೊಡಬಾರದು ಎಂದು ಮರುಪ್ರಶ್ನೆ ಹಾಕಿದೆ. ಅಲ್ಲದೇ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೆವಾಲ ಕೂಡ ಜೆಡಿಎಸ್ ನಾಯಕ ಕುಮಾರಸ್ವಾಮಿ ಗೆ ಸ್ಪಷ್ಟವಾಗಿ ಬೆಂಬಲ ನೀಡುವುದು ಸಾಧ್ಯವಿಲ್ಲ. ನೀವೆ ಜಾತ್ಯತೀತ ತತ್ವದಿಂದ ನಮ್ಮನ್ನು ಬೆಂಬಲಿಸಿ ಅಂದಿದ್ದಾರೆ. ಜೆಡಿಎಸ್ ಇಷ್ಟೆಲ್ಲ ಬೇಡಿಕೊಂಡ್ರು ಸಿದ್ದರಾಮಯ್ಯ ಸೇರಿದಂತೆ ಯಾವ ನಾಯಕರೂ ಸೊಪ್ಪು ಹಾಕ್ತಿಲ್ಲ. ಇದ್ರ ಹಿಂದೆ ಕಾಂಗ್ರೆಸ್ ಹಲವು ಸ್ಟ್ಯಾಟಜಿಗಳಿವೆ.
ಅತ್ತ ಕಾಂಗ್ರೆಸ್‌ಗೆ ನಾಲ್ಕನೆಯ ರಾಜ್ಯಸಭಾ ಸ್ಥಾನ ಗೆಲ್ಲೋದು ಕಷ್ಟ. ಅಷ್ಟು ಸಂಖ್ಯಾಬಲ ಕೂಡ ಇಲ್ಲ. ಹೀಗಾಗಿ ಇಂದಲ್ಲ ನಾಳೆ ನಮ್ಮನ್ನು ಕಾಂಗ್ರೆಸ್ ಬೆಂಬಲಿಸಲಿದೆ ಎಂದು ನಂಬಿದ್ದ ಜೆಡಿಎಸ್ ನಂಬಿಕೆ ಹುಸಿಯಾಗಿದೆ.ಅತ್ತ ಆಡಳಿತಾರೂಢ ಬಿಜೆಪಿ ಮಾತ್ರ ಲೆಹರ್ ಸಿಂಗ್ ಅವರನ್ನ ಗೆಲ್ಲಿಸಲೇಬೇಕು ಅಂತ ಪಣ ತೊಟ್ಟಿದ್ದು, ಆಪರೇಷನ್ ಕಮಲಕ್ಕೆ ಮುಂದಾಗಿದೆ ಅಂತ ಚರ್ಚೆಯಾಗ್ತಿದೆ. ಜೆಡಿಎಸ್‌ನ ಕೆಲ ಶಾಸಕರಿಗೆ ಮತ ನೀಡುವಂತೆ ಆಫರ್ ನೀಡುತ್ತಿದೆ ಎನ್ನಲಾಗ್ತಿದೆ. ಜೆಡಿಎಸ್ ಬಗ್ಗೆ ಹಲವು ಶಾಸಕರಲ್ಲಿ ಭಿನ್ನಾಭಿಪ್ರಾಯಗಳಿವೆ. ಹೀಗಾಗಿ ಈಸಿಯಾಗಿ ಬಿಜೆಪಿ, ಕಾಂಗ್ರೆಸ್ ಬುಟ್ಟಿಗೆ ಮತ ಬೀಳುವ ಸಾಧ್ಯತೆ ಕೂಡ ತಳ್ಳಿ ಹಾಕುವಂತಿಲ್ಲ. ಹೀಗಾಗಿ ಎಲ್ಲಾ ಜೆಡಿಎಸ್ ಶಾಸಕರನ್ನು ರಾತ್ರಿ ಅಥವಾ ಬೆಳಗ್ಗೆ ರೆಸಾರ್ಟ್‌ಗೆ ಶಿಫ್ಟ್ ಮಾಡಲು ಜೆಡಿಎಸ್ ನಾಯಕರು ಚಿಂತಿಸುತ್ತಿದ್ದಾರೆ.
ಅತ್ತ ಬಿಜೆಪಿ ನಾಲ್ಕನೆಯ ರಾಜ್ಯಸಭಾ ಸ್ಥಾನ ಗೆಲ್ಲಲು ಹೆಚ್ಚು ಉತ್ಸಾಹ ತೋರಿಸುತ್ತಿದೆ. ಹೀಗಾಗಿ ಖಾಸಗಿ ಹೋಟೆಲ್‌ನಲ್ಲಿ ಶಾಸಕಾಂಗ ಸಭೆ ಕರೆದು ಹೇಗೆ ಮತದಾನ ಮಾಡಬೇಕು. ಅಸಿಂಧು ಮತ ಆಗದಂತೆ ಹೇಗೆ ಮುಂಜಾಗ್ರತೆ ವಹಿಸಬೇಕು ಅಂತ ಶಾಸಕರಿಗೆ ತಿಳಿಸಿದೆ. ಒಟ್ಟಾರೆ ಮೂರೂ ಪಕ್ಷಗಳು ಗೆಲ್ಲುವ ವಿಶ್ವಾಸದಲ್ಲಿದ್ದು ಅಂತಿಮವಾಗಿ ಜಯ ಯಾರಿಗೆ ಲಭಿಸುತ್ತೆ ಎಂಬುದನ್ನು ಕಾದು ನೋಡಬೇಕಿದೆ.
ಕ್ಯಾಮರಮ್ಯಾನ್ ರಮೇಶ್ ಜೊತೆ ರೂಪೇಶ್ ಬೈಂದೂರು ಪವರ್ ಟಿವಿ