Friday, November 22, 2024

ಈದ್ಗಾ ವಿವಾದದ ಮತ್ತೊಂದು ಮಾಹಿತಿ ಬಹಿರಂಗ

ಬೆಂಗಳೂರು: ರಾಜ್ಯದಲ್ಲಿ ಒಂದಲ್ಲ ಒಂದು ವಿವಾದಗಳು ಹುಟ್ಟಿಕೊಳ್ಳುತ್ತಿವೆ. ಹಿಂದೂ – ಮುಸ್ಲಿಂ ಅಂತ ಒಬ್ಬರ ಮೇಲೆ ಒಬ್ಬರು ಕೆಂಡ ಕಾರುತ್ತಿದ್ದಾರೆ. ಹಿಜಾಬ್‌ನಿಂದ ಶುರುವಾದ ವಿವಾದ ಹಲಾಲ್, ಆಜಾನ್, ಮಂದಿರ ವರ್ಸಸ್ ಮಸೀದಿ ಸೇರಿ ಇದೀಗ ಕ್ರಿಡಾಂಗಣ ಅನ್ನೋ ಹೊಸ ವಿವಾದ ಭುಗಿಲೆದ್ದಿದೆ.

ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನದ ಸುತ್ತ ಸಾಕಷ್ಟು ವಿವಾದಗಳು ಸೃಷ್ಟಿಯಾಗುತ್ತಿವೆ. ಇಷ್ಟೂ ದಿನ ಬೂದಿ ಮುಚ್ಚಿದ ಕೆಂಡದಂತಿದ್ದು, ಸದ್ಯ ವಿವಾದದ ಕಿಚ್ಚು ರಭಸವಾಗಿ ಹೊರಬರಲು ಶುರುವಾಗಿದೆ. ಪ್ರತಿ ದಿನ ಈ ಪ್ರಕರಣಕ್ಕೆ ಒಂದೊಂದೇ ತಿರುವು ಸಿಗುತ್ತಿದೆ. ಅದಕ್ಕಾಗಿ ಬಿಬಿಎಂಪಿ ಸ್ಪಷ್ಟನೆ ಕೊಟ್ಟಿದೆ.

ಮಂಗಳವಾರವಷ್ಟೇ ಈದ್ಗಾ ಮೈದಾನ ವಕ್ಫ್ ಮಂಡಳಿಗೆ ಸೇರಿದ್ದು ಎಂಬುದಾಗಿ ಅಧ್ಯಕ್ಷರು ತಿಳಿಸಿದ್ದರು. ಅಲ್ಲದೆ, ಸುಪ್ರೀಂಕೋರ್ಟ್ ಆದೇಶ ಕೂಡ ಆಗಿದೆ. ಆ ಬಗ್ಗೆ ನಮ್ಮ ಬಳಿ ದಾಖಲೆ ಕೂಡ ಇದೆ ಎಂಬುದಾಗಿಯೂ ಸ್ಪಷ್ಟಪಡಿಸಿದ್ದರು. ಮೈದಾನಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್‌ ನೀಡಿದಂಥಾ ತೀರ್ಪಿನ ಬಗ್ಗೆ ಕೆಲ ದಾಖಲೆಗಳನ್ನು ಕೊಟ್ಟಿರುವುದರಲ್ಲಿ ಕೆಲವು ಕಡೆ ತಿದ್ದುಪಡಿ ಮಾಡಲಾಗಿದೆ. ಕೆಲವು ಕಡೆ ಇಂಕ್‌ನಲ್ಲಿ ಬರೆದಿದ್ದಾರೆ. ಯಾವ ಉದ್ದೇಶಕ್ಕಾಗಿ ತಿದ್ದುಪಡಿ ಮಾಡಿದ್ದಾರೆ ಎಂಬುದು ಗೊತ್ತಿಲ್ಲ ಅಂತ ಬಿಬಿಎಂಪಿ ಆಯುಕ್ತರೇ ಸ್ಪಷ್ಟಪಡಿಸಿದ್ದಾರೆ.

ಈ ಸಂಬಂಧ 1964ರ ಸುಪ್ರೀಂಕೋರ್ಟ್ ಆದೇಶ ಪ್ರತಿಯ ದಾಖಲೆಯಲ್ಲಿ ಒಂದು ಪುಟ ಮಿಸ್ ಕೂಡ ಆಗಿದೆ.. ಆ ದಾಖಲೆಯಲ್ಲಿ ಸಿಟಿ ಸರ್ವೆ, ಕಾರ್ಪೊರೇಷನ್ ಎಂಬುದಾಗಿಯೂ ಬರೆಯಲಾಗಿದೆ. ನಂತ್ರ ದರ್ಗಾ, ಈದ್ಗಾ ಎಂದು ಬರೆಯಲಾಗಿದೆ. ಕೋರ್ಟ್ ದಾಖಲೆಯಲ್ಲಿ ಒಂದು ಪುಟ ಮಿಸ್ ಆಗಿದೆ. ಅದನ್ನು ತಂದುಕೊಟ್ರೇ ಕಾನೂನಿನ ಅಡಿಯಲ್ಲಿ ಸಲಹೆ ಪಡೆದು, ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ. ಆದ್ರೆ, ಬಿಬಿಎಂಪಿ ವಿಶೇಷ ಆಯುಕ್ತ ಚಾಮರಾಜಪೇಟೆಯ ಈದ್ಗಾ ಮೈದಾನ ಬಿಬಿಎಂಪಿಗೆ ಸೇರಿದ್ದು ಎಂಬುದಾಗಿ ತಿಳಿಸಿದ್ದಾರೆ. ಸದ್ಯ ಈದ್ಗಾ ಮೈದಾನದಲ್ಲಿ ಕಾರ್ಯಕ್ರಮ ನಡೆಸಲು ಹಿಂದೂ ಸಂಘಟನೆಗಳಿಂದ ಅರ್ಜಿಗಳು ಬರುತ್ತಿವೆ. ಈ ಬಗ್ಗೆ ಸ್ಥಳೀಯ ಜಂಟಿ ಆಯುಕ್ತರು ನಿರ್ಧಾರ ಕೈಗೊಳ್ಳಲಿದ್ದಾರೆ. ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ, ಆ ಅರ್ಜಿಗಳ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ. ಮೈದಾನದಲ್ಲಿ ಕಾರ್ಯಕ್ರಮ ನಡೆಸೋ ಸಂಬಂಧ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಸೇರಿದಂತೆ ಯೋಗ ಆಚರಣೆಗೆ ಈಗಾಗಲೇ ಅನುಮತಿ ಪತ್ರಗಳು ಬಂದಿದ್ದು, ಅರ್ಜಿಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

ಒಟ್ನಲ್ಲಿ ಮೈದಾನಕ್ಕೆ ಯಾರು ಮಾಲೀಕರು ಅಂತ ತಿಳಿಯದ ಸರ್ಕಾಕ್ಕೆ ಈ ಜಾಗ ಹೊರೆಯಾಗಿದ್ದು , ಸಂಘಟನೆಗಳು ಮಾತ್ರ ಜಾಗಕ್ಕೆ ಜಂಗೀಕುಸ್ತಿಗಿಳಿದಿವೆ.ಇನ್ನು ಇದನ್ನು ಬಿಬಿಎಂಪಿ ಯಾವ ರೀತಿಯಲ್ಲಿ ಬಗೆಹರಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಕ್ಯಾಮರಾ ಮ್ಯಾನ್ ಪವನ್ ಜೊತೆ ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES