ಅಂತೂ ಇಂತೂ ಲೇಡಿ ಸೂಪರ್ ಸ್ಟಾರ್ ನಯನತಾರ ಹಸೆಮಣೆ ಏರೋಕೆ ರೆಡಿಯಾಗಿದ್ದಾರೆ. ಬಿಂದಾಸ್ ಆಗಿ ಪ್ರೇಮಪಕ್ಷಿಗಳಂತೆ ಹಾರಾಡಿಕೊಂಡಿದ್ದ ನಯನತಾರ -ವಿಘ್ನೇಶ್ ಜೋಡಿ ಸಂಸಾರ ಸಾಗರದಲ್ಲಿ ಈಜೋಕೆ ತಯಾರಾಗಿದೆ. ಸೂಪರ್ ಸ್ಟಾರ್ಗಳ ಸಮ್ಮುಖದಲ್ಲಿ ಸಪ್ತಪದಿ ತುಳಿಯೋಕೆ ಕೆಲವೇ ಗಂಟೆಗಳು ಮಾತ್ರ ಬಾಕಿ ಇವೆ. ಹಾಗಾದ್ರೇ ಹೇಗಿರುತ್ತೆ ಬ್ಯೂಟಿ ಕ್ವೀನ್ ಮದ್ವೆ ಅಂತೀರಾ..?
- ಸೌತ್ ಅರಗಿಣಿ ನಯನತಾರಾ ಬಾಳಲ್ಲಿ ಮದುವೆ ಸಂಭ್ರಮ
- ಮೀಟಿಂಗ್, ಡೇಟಿಂಗ್, ಬ್ರೇಕಪ್..ಯಾರು ಬರ್ತಾರೆ..?
- ಹಳದಿ ಶಾಸ್ತ್ರ, ಮೆಹಂದಿ ಶಾಸ್ತ್ರದಲ್ಲಿ ನಯನ ಮಿಂಚಿಂಗ್
- ಮಹಾಬಲಿಪುರಂನಲ್ಲಿ ಅದ್ದೂರಿ ಮದುವೆಗೆ ಕ್ಷಣಗಣನೆ..!
ನಯನತಾರ ಸಪ್ತಪದಿ ತುಳಿಯೋಕೆ ಸಜ್ಜಾಗಿರೋ ಸುದ್ದಿ ರಂಗೀನ್ ಲೋಕದಲ್ಲಿ ಸಖತ್ ಸದ್ದು ಮಾಡ್ತಿದೆ. ಇಲ್ಲಿವರೆಗೂ ಪ್ರಣಯ ಪಕ್ಷಿಗಳಂತೆ ನಯನತಾರ ವಿಘ್ನೇಶ್ ಜೋಡಿ ಎಲ್ಲಾ ಕಡೆ ಜಾಲಿಯಾಗಿ ಸುತ್ತಾಡಿಕೊಂಡಿದ್ರು. ತಿರುಪತಿಯಲ್ಲಿ ಸಿಂಪಲ್ ಆಗಿ ತಾಳಿ ಕಟ್ಟಿಸ್ಕೋತಿನಿ ಅಂದಿದ್ದ ನಯನತಾರಾ ಆಪ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದ್ವೆ ಆಗ್ತಿದ್ದಾರೆ.
ಎಲ್ಲಾ ಕಡೆ ನಯನತಾರಾ ಮದುವೆಯ ಆಮಂತ್ರಣ ತಲುಪಿದ್ದು, ಕಾಲಿವುಡ್ ಚೆಲುವೆಯ ಮದ್ವೆ ಸಡಗರ ನೋಡೋಕೆ ಯಾರೆಲ್ಲಾ ಬರ್ತಾರೆ ಅನ್ನೋ ಕ್ಯೂರಿಯಾಸಿಟಿ ಹೆಚ್ಚಾಗಿದೆ. ಲವ್ವು ಆಮೇಲೆ ಬ್ರೇಕಪ್ ಅಂತಾ ಯಾರ ಕೈಗೂ ಸಿಗದೆ ಮಿಂಚುಳ್ಳಿಯಂತೆ ಬಿಂದಾಸ್ ಆಗಿದ್ದ ಗ್ಲಾಮರ್ ಗೊಂಬೆ ಕೊನೆಗೂ ನಿರ್ದೇಶಕ ವಿಘ್ನೇಶ್ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದರು. ಇದೀಗ 7 ವರ್ಷದ ಪ್ರೀತಿ, ಪ್ರೇಮ, ಪ್ರಣಯಕ್ಕೆ ಫುಲ್ ಸ್ಟಾಪ್ ಇಟ್ಟು ಬಾಳಸಂಗಾತಿಯಾಗೋಕೆ ಸಜ್ಜಾಗಿದ್ದಾರೆ.
ಸಹಜವಾಗಿ ನಯನತಾರ ಖಾಸಗಿ ಜೀವನ ಅಂದ್ರೆ ಎಲ್ಲರಿಗೂ ಸಖತ್ ಥ್ರಿಲ್ಲಿಂಗ್. ಯಾರಿಗೂ ಅಂಜದೇ ತನ್ನದೇ ಲೈಫ್ಸ್ಟೈಲ್ ಮೂಲಕ ಸಿಕ್ಕಾಪಟ್ಟೆ ಫ್ಯಾನ್ಸ್ ಫಾಲೊಯಿಂಗ್ ಇರೋ ಮುದ್ದು ಪೋರಿ ನಯನತಾರ. ಹಾಗಾಗಿ ಇವರಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಇದ್ರ ಜೊತೆಗೆ ಹಳೆ ಬಾಯ್ಫ್ರೆಂಡ್ಸ್ಗಳೆಲ್ಲಾ ಮದ್ವೆಗೆ ಬರ್ತಾರಾ ಅನ್ನೋ ಕ್ಯೂರಿಯಾಸಿಟಿಗೆ ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ. ಚೆಂದದ ಸೀರೆ ಉಟ್ಟು ಮೆಹಂದಿ ಶಾಸ್ತ್ರ ಮುಗಿಸಿ ಹಸೆಮಣೆ ಹೇರಲಿದ್ದಾರೆ ಲೇಡಿ ಸೂಪರ್ ಸ್ಟಾರ್.
ಜೂನ್ 09 ರಂದು ಮಹಾಬಲಿಪುರಂನ ಶೆರಾಟನ್ ಗ್ರ್ಯಾಂಡ್ನಲ್ಲಿ ನಯನತಾರಾ, ವಿಘ್ನೇಶ್ ಅದ್ಧೂರಿ ಮದುವೆ ಸಮಾರಂಭ ನಡೆಯಲಿದೆ. ಇತ್ತೀಚೆಗೆ, ಈ ಜೋಡಿ ತಮಿಳುನಾಡು ಸಿಎಂ ಸ್ಟಾಲಿನ್ ಬೇಟಿಯಾಗಿ ಮದ್ವೆಗೆ ಇನ್ವೇಯ್ಟ್ ಮಾಡಿದ್ರು. ಇದ್ರ ಜೊತೆಗೆ ಟಾಲಿವುಡ್ , ಕಾಲಿವುಡ್ನ ಸೂಪರ್ ಸ್ಟಾರ್ಗಳಾದ ಕಮಲ್ ಹಾಸನ್, ರಜಿನಿಕಾಂತ್, ಸಮಂತಾ , ಚಿರಂಜೀವಿ, ಸೂರ್ಯ, ವಿಜಯ್ ಸೇತುಪತಿ ಸೇರಿದಂತೆ ಎಲ್ಲಾ ಸ್ಟಾರ್ ನಟ ನಟಿಯರು ಆಗಮಿಸೋ ಸಾಧ್ಯತೆ ಇದೆ.
ರೌಡಿ ಧಾನ್ ಚಿತ್ರದ ಸೆಟ್ನಲ್ಲಿ ಮೊದಲು ಭೇಟಿಯಾಗಿದ್ದ ಈ ಜೋಡಿ ಸ್ನೇಹಿತರಾಗಿ ಒಂದಾಗಿದ್ರು. ನಂತ್ರ ಸ್ನೇಹ ಪ್ರೀತಿಗೆ ತಿರುಗಿ ಮದುವೆಯವರೆಗೂ ಬಂದು ನಿಂತಿದೆ. ಈ ಹಿಂದೆ ತಮಿಳಿನ ಹೀರೋ ಸಿಂಬು ಜೊತೆ ಸುತ್ತಾಡಿ ಕೊನೆಗೂ ಬ್ರೇಕಪ್ ಮಾಡಿಕೊಂಡಿತ್ತು. ಅದಾದ ನಂತ್ರ ಇಂಡಿಯಾದ ಮೈಕಲ್ ಜಾಕ್ಸನ್ ಪ್ರಭುದೇವ ಅವರ ಜೊತೆ ಲವ್ವಿ ಡವ್ವಿ ಸಖತ್ ಸೌಂಡ್ ಮಾಡಿತ್ತು. ಪಕ್ಕಾ ಈ ಜೋಡಿ ಮದ್ವೆಯಾಗುತ್ತೆ ಅಂತಾ ಎಲ್ಲರೂ ಭಾವಿಸಿದ್ರು. ಆದ್ರೆ, ಈ ಜೋಡಿಯ ಸಂಬಂಧವು ಮುರಿದು ಬಿತ್ತು.
ಇದಾದ ಕೆಲವು ವರ್ಷಗಳ ನಂತ್ರ ವಿಘ್ನೇಶ್ ಪರಿಚಯ ಪ್ರೀತಿಗೆ ತಿರುಗಿ ಮದುವೆಯ ಹಂತಕ್ಕೆ ತಂದು ನಿಲ್ಲಿಸಿದೆ. ಹಲವು ತಪ್ಪುಗಳಿಂದ ಪಾಠ ಕಲಿತಿರೋ ರೆಬೆಲ್ ನಯನತಾರ ಮಾಜಿ ಪ್ರೇಮಿಗಳಿಗೂ ಮದುವೆಗೆ ಕರಿದಿದ್ದಾರಾ ಅನ್ನೋ ಪ್ರಶ್ನೆಗೆ ಸದ್ಯದಲ್ಲೇ ಉತ್ತರ ಸಿಗಲಿದೆ. ಎನಿವೇ ಪವರ್ ಟಿವಿ ಕಡೆಯಿಂದ ಶುಭಾಶಯಗಳು. ನೂರಾರು ಕಾಲ ಸುಖವಾಗಿ ಬಾಳಿ.
ರಾಕೇಶ್ ಆರುಂಡಿ, ಫಿಲ್ಮ್ ಬ್ಯೂರೋ, ಪವರ್ ಟಿವಿ.