ಹುಟ್ಟುವಾಗ ಅಣ್ಣ ತಮ್ಮಂದಿರು. ಬೆಳೀತಾ ದಾಯಾದಿಗಳು ಅಂತಾರೆ. ಈ ಮಾತಿಗೆ ತದ್ವಿರುದ್ಧವಾಗಿ ರಾಮ ಲಕ್ಷ್ಮಣರಂತೆ ಪ್ರೀತಿಯಿಂದ ಬಾಳಿದವರು ಚಿರು ಹಾಗೂ ಧ್ರುವ ಸರ್ಜಾ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡ್ತಿದ್ದ ಚಿರು ಇಲ್ಲದೇ ಪ್ರತಿ ದಿನ ನೋವಿನ ದಿನಗಳನ್ನ ಕಳೀತಾ ಇದ್ದಾರೆ ಧ್ರುವ. ಆದ್ರೆ, ಮಾರ್ಟಿನ್ ಜೊತೆ ನಾನಿದಿನಿ ಅಂತಾ ಗಟ್ಟಿಯಾಗಿ ನಿಂತಿದಾನೆ ಜ್ಯೂನಿಯರ್ ಚಿರು ಅಲಿಯಾಸ್ ಮಾರ್ಟಿನ್ ಶಿಷ್ಯ. ಅರೆ, ಈ ಶಿಷ್ಯ ಯಾರು ಅಂತೀರಾ..?
- ಚಿರು ಇಲ್ಲದ ನೋವು ನೀಗಿದ ಮಾರ್ಟಿನ್ ಪ್ರೀತಿಯ ಶಿಷ್ಯ
- ರಾಯನ್ ಕಣ್ಣಲ್ಲಿ ಕಾಣ್ತಿದೆ ಚಿರಂಜೀವಿ ಸರ್ಜಾ ಭವಿಷ್ಯ..!
- ಚಿರುಗಾಗಿ ಸಿಟಿ ಬಿಟ್ಟು ಫಾರ್ಮ್ ಹೌಸ್ಗೆ ಫ್ಯಾಮಿಲಿ ಶಿಫ್ಟ್..!
- ಶಿಷ್ಯ-ಮಾರ್ಟಿನ್ ಫ್ರೆಂಡ್ಶಿಪ್.. ನೆಕ್ಸ್ಟ್ ಹೀರೋ ರಾಯನ್..?
ಪುರಾಣ ಕಥೆಗಳಲ್ಲಿ ರಾಮ ಲಕ್ಷ್ಮಣ ಹೇಗಿದ್ರೂ ಅಂತಾ ನಾವೆಲ್ಲಾ ಕೇಳಿದಿವಿ. ಈಗಿನ ಅಣ್ಣ ತಮ್ಮಂದಿರನ್ನು ನೋಡಿದ್ರೆ ಇವೆಲ್ಲಾ ಕೇಳೋಕೆ ಮಾತ್ರ ಚಂದ ಅಲ್ವಾ..? ಆದ್ರೇ, ಈ ಮಾತು ಚಿರು, ಧ್ರುವ ಅವರ ಭಾಂಧವ್ಯ ನೋಡಿದ್ರೆ ಅಕ್ಷರಶಃ ಸುಳ್ಳು ಅನ್ನಿಸುತ್ತೆ. ರಾಮ ಲಕ್ಷ್ಮಣರೂ ನಾಚುವಂತೆ ಬಾಳಿ ಬದುಕಿದವರು ಚಿರು-ಧ್ರುವ. ಆದ್ರೇ, ಕ್ರೂರ ವಿಧಿಯ ಲೆಕ್ಕಾಚಾರವೇ ಬೇರೆ ಅಲ್ವಾ. ಈ ಜೋಡಿಯನ್ನು ಇಷ್ಟು ಬೇಗ ದೂರ ಮಾಡಿಬಿಡ್ತು.
ಚಿರಂಜೀವಿ ಸರ್ಜಾ ಜನಮಾನಸದಲ್ಲಿ ಇಂದಿಗೂ ಶಾಶ್ವತವಾಗಿ ಉಳಿದಿದ್ದಾರೆ. ಚಿರು ನಮ್ಮನ್ನ ಅಗಲಿ 2 ವರ್ಷಗಳೆ ಕಳೆದಿದ್ದರೂ ಇಂದಿಗೂ ಅವರ ನೆನಪು ಅಚ್ಚಳಿಯದೆ ಉಳಿದಿದೆ. ಪತ್ನಿ ಮೇಘನಾ ರಾಜ್ಗೆ ಆ ಆಘಾತದಿಂದ ಹೊರ ಬರಲು ಸಾಧ್ಯವಾಗಿಲ್ಲ. ಧ್ರುವ ಸರ್ಜಾ ಮಾತ್ರ ಇಂದಿಗೂ ಅವರ ಮೆಸೇಜ್ ಕೂಡ ಡಿಲೀಟ್ ಮಾಡದೇ ಪದೇ ಪದೇ ನೋಡ್ತಾ ಇರ್ತಾರೆ. ರಾತ್ರಿ ಕನಸಲ್ಲಿ ಚಿರು ನೆನಪುಗಳು ಧ್ರುವ ಅವರಿಗೆ ಕಾಡ್ತಾ ಇರುತ್ತವೆ. ಆದ್ರೆ ಈ ಎಲ್ಲಾ ನೋವನ್ನು ಮರೆಸೋಕೆ ಮಾರ್ಟಿನ್ಗೆ ಬಲಗೈ ಬಂಟನಾಗಿ ನಿಂತಿದ್ದು ರಾಯನ್. ಅವನೇ ಒನ್ ಆಂಡ್ ಓನ್ಲಿ ಮಾರ್ಟಿನ್ ಶಿಷ್ಯ.
ಹೃದಯಾಘಾತದಿಂದ ಸಾವನ್ನಪ್ಪಿದ್ದ ಕನ್ನಡದ ಸ್ಮೈಲಿಂಗ್ ಸ್ಟಾರ್, ಎಲ್ಲರ ಹೃದಯ ಗೆದ್ದಿದ್ದ ವಾಯುಪುತ್ರ ಚಿರಂಜೀವಿ ಸರ್ಜಾ. ಚಿರುಗಾಗಿಯೇ ಅಮೃತಶಿಲೆಯ ಗುಡಿಯೊಂದು ಕನಕಪುರದ ಫಾರಂ ಹೌಸ್ನಲ್ಲಿ ತಲೆ ಎತ್ತಿ ನಿಂತಿದೆ. ಕೋಟೆಗೊಬ್ಬ ಚಿರು ಸವಿನೆನಪುಗಳ ಜೊತೆ ಸದಾ ಇರೋಕೆ ಸರ್ಜಾ ಫ್ಯಾಮಿಲಿ ಫಾರ್ಮ್ ಹೌಸ್ಗೆ ಶಿಪ್ಟ್ ಆಗ್ತಿದೆ. ಚಿರು ಕೋಟೆಯೊಳಗೆ ಇಡೀ ಫ್ಯಾಮಿಲಿ ಕಾಲ ಕಳೆಯೋಕೆ ತೀರ್ಮಾನ ಮಾಡಿದೆ. ಪ್ರತಿ ದಿನವೂ ಚಿರು ನೆನಪಲ್ಲೇ ದಿನಗಳನ್ನು ದೂಡುತ್ತಿರೋ ಧ್ರುವ ಅಂಡ್ ಫ್ಯಾಮಿಲಿಗೆ ನೋವನ್ನು ರಾಯನ್ ಮರೆಸುತ್ತಿದ್ದಾನೆ.
ಎಲ್ಲೇ ಹೋಗಲಿ, ಎಲ್ಲೇ ಬರಲಿ ಇಡೀ ಕುಟುಂಬ ರಾಯನ್ ಇಲ್ಲದೇ ಒಂದು ಕ್ಷಣ ಇರೋಕೂ ಇಷ್ಟ ಪಡೋದಿಲ್ಲ. ಆ್ಯಕ್ಷನ್ ಫ್ರಿನ್ಸ್ ಧ್ರುವ ಕೂಡ ನೆಚ್ಚಿನ ಅಣ್ಣ ಚಿರುಗಿಂತ ಜಾಸ್ತಿ, ರಾಯನ್ನ ಹಚ್ಚಿಕೊಂಡಿದ್ದಾರೆ. ಪ್ರೀತಿಯಿಂದ ಹೋಗೋ ಬಾರೋ, ಎಲ್ಲಿದಿಯೋ ಶಿಷ್ಯ ಅಂತಾ ಮುದ್ದು ಮುದ್ದಾಗಿ ರಾಯನ್ ಜೊತೆ ಸಮಯ ಕಳೆಯುತ್ತಾರೆ. ರಾಯನ್ ಜೊತೆಗಿದ್ರೆ ಧ್ರುವ ಸರ್ಜಾ ಅವರಿಗೆ ಸ್ವಂತ ಅಣ್ಣನೇ ಜತೆಗಿದ್ದಂತೆ.
ಅರ್ಜುನ್ ಸರ್ಜಾ ಕೂಡ, ಚಿರುನಾ ಲಾಂಚ್ ಮಾಡಿದ್ದೇ ನಾನು. ಅದೇ ರೀತಿ ಅದೃಷ್ಟ ಇದ್ರೆ, ರಾಯನ್ನ್ನು ನಾನೆ ಫಿಲ್ಮ್ಗೆ ಲಾಂಚ್ ಮಾಡ್ತೀನಿ ಎಂದಿದ್ದಾರೆ. ಧ್ರುವ ಕೂಡ ರಾಯನ್ ಕನಸುಗಳಿಗೆ ನಾವೆಂದೂ ಅಡ್ಡಿ ಮಾಡೋದಿಲ್ಲ. ನಾನು ಎಂದಿಗೂ ಶಿಷ್ಯ ಅಂತಾನೆ ಅವನನ್ನು ಕರೆಯೋದು. ಅವನ ಕನಸುಗಳಿಗೆ ನಾನೆಂದೂ ಅಡ್ಡಿ ಬರೋದಿಲ್ಲ ಅಂದ್ರು. ಒಟ್ಟಾರೆಯಾಗಿ ಧ್ರುವ ಅವ್ರ ಬಾಳಿಗೆ ಧೈರ್ಯ ತುಂಬ್ತಾ ಇರೋದು ಅಣ್ಣನ ಪ್ರತಿರೂಪದ ಶಿಷ್ಯ, ರಾಯನ್ ಅನ್ನೋದೆ ಖುಷಿಯ ವಿಚಾರ.
ರಾಕೇಶ್ ಆರುಂಡಿ, ಫಿಲ್ಮ್ ಬ್ಯೂರೋ, ಪವರ್ ಟಿವಿ