ಬೀದರ್ : ಐದು ದಿನಗಳ ಹಿಂದೆ ಮನೆಯಿಂದ ಹೊರಗಡೆ ಹೋದ ಮಗ ವಾಪಸ್ ಆಗದ ಹಿನ್ನೆಲೆಯಲ್ಲಿ ಊರು ತಿರುಗಿ ಮಗನ ಹುಡುಕಾಟ ನಡೆಸುತ್ತಿರುವ ತಾಯಿ ಕಲಾವತಿ,. ಈ ತಾಯಿಗೆ ಊರಿನ ಮಹಿಳೆಯರು, ಯುವಕರು ಸಾಥ್ ನೀಡಿದ್ದಾರೆ.
ಜಿಲ್ಲೆಯ ಭಾಲ್ಕಿ ತಾಲೂಕಿನ ಜೈನಾಪುರ ಗ್ರಾಮದ ಕಲಾವತಿ ಎಂಬ ಮಹಿಳೆಯ ನೆಚ್ಚಿನ ಮಗ ಶ್ರೀಕಾಂತ್(20) ಎಂಬಾತ ಜೂನ್ 3ರಂದು ಸಂಜೆ 4 ಗಂಟೆಗೆ ಅಮ್ಮ ನನಗೆ ತುಂಬ ಕೆಲಸ ಇದೆ ಎಂದು ಹೇಳಿ ಹೊರಗಡೆ ಹೋಗುತ್ತಾನೆ,. ಹಾಗೆ ಹೋದ ಶ್ರೀಕಾಂತ್ ಒಂದು ವಾರ ಕಳೆಯುತ್ತಾ ಬಂದರೂ ಮನೆಗೆ ವಾಪಸ್ ಆಗಲೇ ಇಲ್ಲ,. ಈಗಾಗಲೇ ಈ ಕುರಿತು ಗ್ರಾಮಸ್ಥರೆಲ್ಲ ಸೇರಿ ಧನ್ನೂರಾ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಿಸಿದ್ದಾರೆ,. ಆದರೆ ಪ್ರಕರಣ ದಾಖಲಿಸಿಕೊಳ್ಳಲು ವಿಳಂಬ ಮಾಡಿ ಪೊಲೀಸರು, ಶ್ರೀಕಾಂತ್ ಪತ್ತೆ ಹಚ್ಚಲು ಕಾಳಜಿ ತೋರುತ್ತಿಲ್ಲ ಎಂದು ಜೈನಾಪುರ ಗ್ರಾಮಸ್ಥರು ಹೇಳುತ್ತಾರೆ,. ಇತ್ತ ಮನೆಯಲ್ಲಿ ಅತ್ಯಂತ ಪ್ರತಿಭಾವಂತ ಮತ್ತು ಎಲ್ಲ ಕೆಲಸ ಕಾರ್ಯಗಳನ್ನ ಕ್ಷಣದಲ್ಲಿ ಮುಗಿಸಿ ಬಿಡುತ್ತಿದ್ದ ಶ್ರೀಕಾಂತ್ನನ್ನ ಕಳೆದುಕೊಂಡ ತಾಯಿ ಕಲಾವತಿ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ,.
ಇನ್ನು ಇವರ ಮಗ ಹುಡುಕಲು ಸಾಥ್ ಕೊಟ್ಟಿರುವ ಗ್ರಾಮದ ಮಹಿಳೆಯರು, ಯುವಕರು ಸೇರಿ ಜಿಲ್ಲೆಯ ಹುಮನಾಬಾದ್, ಚಿಟಗುಪ್ಪಾ, ಔರಾದ್, ಭಾಲ್ಕಿ ಸೇರಿದಂತೆ ಮೂಲೆ ಮೂಲೆಯಲ್ಲಿ ಹುಡುಕಾಡುತ್ತಿದ್ದಾರೆ,. ಹಲವು ಗ್ರಾಮಗಳ, ಪಟ್ಟಣಗಳ ಬಸ್ ನಿಲ್ದಾಣ್, ಬೀದಿ ಬದಿ ಕಂಪೌಂಡ್ಗಳಲ್ಲಿ ಯುವಕ ಚಿತ್ರ ಇರುವ ಬಿತ್ತಿ ಪತ್ರ ಅಂಟಿಸಿ ಶ್ರೀಕಾಂತ್ಗೆ ಕಾಣಿಸಿದ್ದರೇ 9353615469 ಮೊಬೈಲ್ ನಂ. ಕರೆ ಮಾಡುವಂತ ಮನವಿ ಮಾಡಿಕೊಳ್ಳುತ್ತಿದ್ದಾರೆ.