Friday, September 20, 2024

ಜಮ್ಮು-ಕಾಶ್ಮೀರದಲ್ಲಿ ಉಗ್ರರ ಕರಿನೆರಳು ಆತಂಕದಲ್ಲಿ ಪಂಡಿತ್

ಜಮ್ಮು-ಕಾಶ್ಮೀರ: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಉಗ್ರರ ಉಪಟಳ ಜೋರಾಗುತ್ತಲೇ ಇದೆ. ಹಿಂದೂಗಳು, ಕಾಶ್ಮೀರಿ ಪಂಡಿತರನ್ನೇ ಟಾರ್ಗೆಟ್‌ ಮಾಡಿ ಹತ್ಯೆ ಮಾಡಲಾಗ್ತಿದೆ.. ಈ ಹಿನ್ನೆಲೆಯಲ್ಲಿ ಆತಂಕದಲ್ಲಿರುವ ಕಣಿವೆಯ ಹಿಂದೂ ಕುಟುಂಬಗಳು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ.. ಇತ್ತೀಚೆಗೆ, ಸರ್ಕಾರಿ ಉದ್ಯೋಗಿಗಳನ್ನೇ ಟಾರ್ಗೆಟ್‌ ಮಾಡಿ ಹತ್ಯೆ ಮಾಡಲಾಗ್ತಿದ್ದು, ಸುರಕ್ಷತೆ ವಿಚಾರದಲ್ಲಿ ಟೆನ್ಷನ್ ಹೆಚ್ಚಾಗಿದೆ.. ಜಮ್ಮು ಮತ್ತು ಕಾಶ್ಮೀರದ ಸ್ಥಳೀಯ ಆಡಳಿತವು ಸರಕಾರಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾಶ್ಮೀರಿ ಪಂಡಿತ್ ಶಿಕ್ಷಕರನ್ನು ಕಣಿವೆ ರಾಜ್ಯದ ಸುರಕ್ಷಿತ ಸ್ಥಳಗಳಿಗೆ ವರ್ಗಾವಣೆ ಮಾಡಿದೆ. ಕಳೆದ ಒಂದು ತಿಂಗಳಲ್ಲಿ ಉಗ್ರರು 9 ಮಂದಿ ಕಾಶ್ಮೀರಿ ಪಂಡಿತರನ್ನು ಹತ್ಯೆ ಮಾಡಿದ್ದಾರೆ. ಈ ಸರಣಿ ಹತ್ಯೆಗಳ ನಂತರ ಕಾಶ್ಮೀರಿ ಪಂಡಿತರು ಜಮ್ಮು ಮತ್ತು ಕಾಶ್ಮೀರ ತೊರೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಣಿವೆ ರಾಜ್ಯದ ಸ್ಥಳೀಯ ಆಡಳಿತವು ಈ ಕ್ರಮ ಕೈಗೊಂಡಿದೆ. ಶ್ರೀನಗರದ ಮುಖ್ಯ ಶಿಕ್ಷಣ ಅಧಿಕಾರಿಗಳು ಮತ್ತು ಪ್ರಧಾನಿಗಳ ವಿಶೇಷ ಪರಿಹಾರ ಪ್ಯಾಕೇಜ್ ಅಡಿಯಲ್ಲಿ ನೇಮಕಗೊಂಡಿರುವ 177 ಕಾಶ್ಮೀರಿ ಪಂಡಿತ್ ಶಿಕ್ಷಕರನ್ನು ನಗರಗಳ ಹೆಚ್ಚು ಸುರಕ್ಷಿತ ಪ್ರದೇಶಗಳಿಗೆ ನಿಯೋಜಿಸಿದ್ದಾರೆ.

ಈ ಪೈಕಿ ಹೆಚ್ಚಿನವರನ್ನು ಸೇನಾ ಕಂಟೋನ್‌ಮೆಂಟ್‌ ಸುತ್ತಮುತ್ತಲಿನ ಬಾದಾಮಿಬಾಗ್, ಬಟ್ವಾರಾ ಮತ್ತು ಅಥ್ವಾಜನ್ ಹಾಗೂ ಹೆಚ್ಚಿನ ಭದ್ರತೆ ಇರುವ ಜವಾಹರ್ ನಗರ, ರಾಜ್ ಬಾಗ್ ಮತ್ತು ಬರ್ಜುಲ್ಲಾದಂತ ಪ್ರದೇಶಗಳಿಗೆ ವರ್ಗಾಯಿಸಲಾಗಿದೆ. ಇದೇ ವೇಳೆ ಬೋಧಕೇತರ ಕಾಶ್ಮೀರಿ ಪಂಡಿತ್ ಸಿಬ್ಬಂದಿಯನ್ನು ಸಹ ಸುರಕ್ಷಿತ ಸ್ಥಳಗಳಿಗೆ ನಿಯೋಜಿಸಲಾಗಿದೆ.

ದೆಹಲಿಯ ಜಂತರ್ ಮಂತರ್‌ನಲ್ಲಿ ಆಮ್ ಆದ್ಮಿ ಪಕ್ಷದಿಂದ ಹಮ್ಮಿಕೊಂಡಿದ್ದ ಜನಾಕ್ರೋಶ ರ್ಯಾಲಿ ಉದ್ದೇಶಿಸಿ ಮಾತನಾಡಿದ ಕೇಜ್ರೀವಾಲ್‌, ಕಾಶ್ಮೀರದಲ್ಲಿ 1990ರಲ್ಲಿ ಏನಾಗಿತ್ತೋ, ಇಂದು ಅದೇ ಮರುಕಳುಹಿಸುತ್ತಿದೆ. ಕಾಶ್ಮೀರ ಪಂಡಿತರು ತಮ್ಮ ಮನೆಗಳನ್ನು ತೊರೆಯುವ ವಾತಾವರಣ ನಿರ್ಮಾಣವಾಗಿದೆ.

ಬಿಜೆಪಿಗೆ ಕಾಶ್ಮೀರದ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಬಿಜೆಪಿಯವರಿಗೆ ಕೊಳಕು ರಾಜಕೀಯ ಮಾತ್ರ ಗೊತ್ತು. ದಯವಿಟ್ಟು ಕಾಶ್ಮೀರದ ಹೆಸರಲ್ಲಿ ರಾಜಕೀಯ ಮಾಡಬೇಡಿ ಎಂದು ಟೀಕಿಸಿದ್ಧಾರೆ. ಇದ್ರ ಜೊತೆಗೆ, ಕಾಂಗ್ರೆಸ್‌ ನಾಯಕರು ಕೂಡ ಕೇಂದ್ರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ ಜಿಲ್ಲೆಯಲ್ಲಿ ಹಿಜ್ಬುಲ್ ಮುಜಾಹಿದೀನ್‌ ಉಗ್ರ ಸಂಘಟನೆಯ ತಾಲಿಬ್‌ ಹುಸೇನ್‌ ಎಂಬ ಭಯೋತ್ಪಾದಕನನ್ನು ಬಂಧಿಸಲಾಗಿದೆ.. ಇದಷ್ಟೇ ಅಲ್ಲ, ಈಗಾಗಲೇ ಉಗ್ರರ ಸದೆಬಡಿಯಲು ಎಲ್ಲಾ ರೀತಿಯ ಕೋಟೆ ಕಟ್ಟಿದ್ದಾರೆ.. ಮುಂದಿನ ದಿನಗಳಲ್ಲಿ ಕಠಿಣ ನಿರ್ಧಾರವನ್ನು ಕೇಂದ್ರ ಸರ್ಕಾರ ಘೋಷಿಸುವ ಸಾಧ್ಯತೆಯೂ ಇದೆ.

RELATED ARTICLES

Related Articles

TRENDING ARTICLES