ರಿಷಬ್ ಸಿನಿಮಾಗಳಂದ್ರೆ ಮುಲಾಜಿಲ್ಲದೇ ಥಿಯೇಟರ್ಗೆ ಹೋಗಬಹುದು. ಏನೋ ಫ್ರೆಶ್ನೆಸ್, ಹೊಸ ಕಥೆ, ಹೊಸ ವಿಚಾರಗಳ ಕಲಸಿಟ್ಟ ಸಿಹಿ ಹೂರಣ. ಇನ್ನೂ, ಅವ್ರ ಕರಾವಳಿ ಕಥೆ ಕಾಂತಾರ ಚಿತ್ರ ಕೂಡ ಸದ್ಯದ್ರಲ್ಲೇ ತೆರೆಗೆ ಬರೋಕೆ ತುದಿಗಾಲಲ್ಲಿ ನಿಂತಿದೆ. ಕಂಬಳ ಪ್ರಿಯರಿಗೆ ಈ ಗುಡ್ ನ್ಯೂಸ್ ಕೇಳಿ ಸಖತ್ ಥ್ರಿಲ್ ಆಗಿದೆ.
- ದಸರಾಗೆ ಸಿಲ್ವರ್ ಸ್ಕ್ರೀನ್ ಮೇಲೆ ‘ಕಾಂತಾರ’ ಕಮಿಂಗ್
- ಕರಾವಳಿ ಗಂಡು ಕಲೆ ಕಂಬಳ ಸವಾರಿಗೆ ರಿಷಭ್ ರೆಡಿ..!
- ಕಂಬಳ ಕಲಿತು ಕೋಣ ಓಡಿಸ್ತಾರೆ ರಿಷಭ್ ಶೆಟ್ಟಿ..!
- ದಸರಾ ಸಡಗರದ ಜೊತೆಗೆ ಕಂಬಳದ ಕಾಡ್ಗಿಚ್ಚು
ಶೆಟ್ರ ಗ್ಯಾಂಗ್ ಬತ್ತಳಿಕೆಯಿಂದ ಒಂದೊಂದೇ ಸಿನಿಮಾಗಳು ತೆರೆಗೆ ಬರ್ತಾ ಇದೆ. ಅವ್ರ ಸಿನಿಮಾಗಳನ್ನು ಎಂಜಾಯ್ ಮಾಡೋದೆ ಒಂದು ಆನಂದ. ರಿಷಭ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳಿರೋ ಕಾಂತಾರ ಚಿತ್ರ, ದಿನಕಳೆದಂತೆ ಹೈಪ್ ಕ್ರಿಯೇಟ್ ಮಾಡ್ತಿದೆ. ಸಿಂಗಲ್ ಟೀಸರ್, ಪೋಸ್ಟರ್ ಮೂಲಕವೇ ಭೇಜಾನ್ ಸೌಂಡ್ ಮಾಡ್ತಿರೋ ಕಾಂತಾರ ಹೊಸ ಅಪ್ಡೇಟ್ ಕೊಟ್ಟಿದೆ. ರಿಲೀಸ್ ಡೇಟ್ ಅನೌನ್ಸ್ ಮಾಡಿ ಚಿತ್ರಪ್ರೇಮಿಗಳ ಎದೆಗೆ ಸೋನೆ ಮಳೆ ಸುರಿಸಿದೆ.
ಕರಾವಳಿಯ ಸಂಸ್ಕೃತಿ, ಕಲೆ, ಜೀವನ, ಉಡುಪು ಎಲ್ಲವೂ ಮಡಚಿಟ್ಟ ಭಾವಗಳ ಆಕಾಶ. ಮಗೆದಷ್ಟು ಕೂತೂಹಲ. ಅಲ್ಲಿನ ಜನಜೀವನದಲ್ಲಿ ಬೆರೆತು ಹೋದ ಕಂಬಳ ಕುರಿತಾದ ಸಿನಿಮಾ ಕಾಂತಾರ. ಕಂಬಳ ಕ್ರೀಡೆಯನ್ನ ಉಸಿರಾಗಿಸಿಕೊಂಡಿರುವ ಮಂಗಳೂರಿನ ಚಿತ್ರಕಥೆಯನ್ನು ಈ ಸಿನಿಮಾದಲ್ಲಿ ಕಣ್ಣಿಗೆ ಕಟ್ಟಿದಂತೆ ತೋರಿಸೋಕೆ ರಿಷಭ್ ಹೊರಟಿದ್ದಾರೆ. ಸೆಪ್ಟೆಂಬರ್ 30ಕ್ಕೆ ಕಾಂತಾರ ಚಿತ್ರ ತೆರೆಗೆ ಬರೋದಾಗಿ ಅನೌನ್ಸ್ ಮಾಡಿದೆ.
ಭಾರತೀಯ ಚಿತ್ರರಂಗದಲ್ಲೇ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿ ಧೂಳೆಬ್ಬಿಸಿರೋ ಹೊಂಬಾಳೆ ಬ್ಯಾನರ್ ಕಾಂತಾರ ಚಿತ್ರ ನಿರ್ಮಾಣ ಮಾಡ್ತಿದೆ. ಅದ್ಧೂರಿ ಸಿನಿಮಾಗಳನ್ನೇ ನೀಡಿರುವ ಹೊಂಬಾಳೆ ಟೀಂ ರಿಷಭ್ ಶೆಟ್ಟಿಯ ಕೈಯಲ್ಲಿ ಈ ಸಿನಿಮಾ ನೀಡಿದೆ. ಭರವಸೆಯ ಕಿಚ್ಚು ಹಚ್ಚಿರೋ ಈ ಚಿತ್ರದ ಮೇಲೆ ನಿರೀಕ್ಷೆ ಕೂಡ ದುಪ್ಪಟ್ಟಾಗಿದೆ. ಸಿಂಗಲ್ ಟೀಸರ್ ಅನ್ನ ಚಿತ್ರರಸಿಕರು ರಿಪೀಟ್ ಮೋಡ್ನಲ್ಲಿ ನೋಡಿರೋದೆ ಇದಕ್ಕೆ ಸಾಕ್ಷಿ.
ಚಿತ್ರಕ್ಕಾಗಿ ಸ್ವತಃ ಕಂಬಳ ಕಲಿತಿದ್ದಾರೆ ರಿಷಬ್. ಸಸ್ಪೆನ್ಸ್ ಥ್ರಿಲ್ಲರ್ ಇರೋ ಹಳ್ಳಿಗಾಡಿನ ಕಥೆಯಿದು. ವರ್ಸಟೈಲ್ ನಟ ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಸಪ್ತಮಿ ಗೌಡ, ಕಿಶೋರ್ ಸೇರಿದಂತೆ ಕಲಾವಿದರ ದಂಡೇ ಚಿತ್ರದಲ್ಲಿದೆ. ಬಿ.ಅಜನೀಶ್ ಲೋಕನಾಥ್ ಸಂಗೀತ ಆಲಾಪನೆ ಮೋಡಿ ಮಾಡಲಿದೆ. ಈ ಚಿತ್ರ ರಿಷಭ್ ಸಿನಿಕರಿಯರ್ನಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಠಿ ಮಾಡಲಿದೆ.
ಕರಾವಳಿಯ ಕ್ರೀಡೆಯನ್ನು ಪ್ರಪಂಚಕ್ಕೆ ತಿಳಿಸೋಕೆ ಹೊರಟಿರುವ ರಿಷಭ್, ಮೊದಲ ಬಾರಿ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿರೋ ಚಿತ್ರತಂಡ ದಸರಾ ಉಡುಗೊರೆಯನ್ನು ಕೊಟ್ಟಿದೆ. ಹರಿಕಥೆ ಅಲ್ಲ ಗಿರಿಕಥೆ ಚಿತ್ರದ ಬ್ಯುಸಿ ನಡುವೆ ಕಾಂತಾರ ಕಾತರ ಕೂಡ ಹೆಚ್ಚಾಗಿದೆ.ಅರವಿಂದ್ ಎಸ್ ಕಶ್ಯಪ್ ಕ್ಯಾಮೆರಾ ಕಣ್ಣು ಚಿತ್ರಕ್ಕೆ ಪ್ಲಸ್ ಆಗಲಿದೆ. ಅಜನೀಶ್ ಲೋಕನಾಥ್ ಸಂಗೀತ ಇಂಪಾಗಿರಲಿದೆ. ಒಟ್ನಲ್ಲಿ ರಿಷಭ್ ಸಿನಿಮಾಗೆ ಆಲ್ ದಿ ಬೆಸ್ಟ್ ಹೇಳೋಣ.
ರಾಕೇಶ್ ಆರುಂಡಿ, ಫಿಲ್ಮ್ ಬ್ಯೂರೋ, ಪವರ್ ಟಿವಿ