ಕಾನ್ಪುರ: ನಾನು ದೇಶದಲ್ಲಿ ಪ್ರಬಲ ಪ್ರತಿಪಕ್ಷದ ಪರವಾಗಿದ್ದೇನೆ.ಅಲ್ಲದೇ ಅವರು ಕುಟುಂಬ ರಾಜಕೀಯವನ್ನು ಕಟುವಾಗಿ ಟೀಕಿಸಿದ್ದಾರೆ ಹಾಗೂ ಕುಟುಂಬ ರಾಜಕೀಯ ಪ್ರತಿಭೆಗಳನ್ನು ಕೊಲ್ಲುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಉತ್ತರ ಪ್ರದೇಶದ ಕಾನ್ಪುರ್ ದೇಹಟ್‌ನಲ್ಲಿ ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು ಕುಟುಂಬ ರಾಜಕೀಯ ದ ಬಗ್ಗೆ ನನ್ನ ಹೇಳಿಕೆಗಳನ್ನು ಜನ ಸಾಮಾನ್ಯವಾಗಿ ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ ಮತ್ತು “ಪರಿವಾರದ” ಕುರಿತ ನನ್ನ ಟೀಕೆ ಯಾವುದೇ ಪಕ್ಷ ಅಥವಾ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಮಾಡಿದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಾನು ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಯ ಬಗ್ಗೆ ಮಾತನಾಡುವುದಿಲ್ಲ, ಪರಿವಾರದ ನನ್ನ ವ್ಯಾಖ್ಯಾನಕ್ಕೆ ಸರಿಹೊಂದುವ ಜನರು ನನ್ನ ಮೇಲೆ ಕೋಪಗೊಂಡಿದ್ದಾರೆ. ಈ ಕುಟುಂಬಗಳು ದೇಶಾದ್ಯಂತ ನನ್ನ ವಿರುದ್ಧ ಒಂದಾಗುತ್ತಿವೆ. ಆದರೆ ಸ್ವಜನಪಕ್ಷಪಾತದಲ್ಲಿ ಸಿಲುಕಿರುವ ವಿಪಕ್ಷಗಳು, ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗೊತ್ತಿ ದೇಶದ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡಬೇಕು” ಎಂದು ಸಲಹೆ ನೀಡಿದರು.
PM Modi wants strong opposition in country, asks parties entangled in nepotism to rise above it
Read @ANI Story | https://t.co/amz3IJC67G#PMModi #nepotism #Democracy #StrongOpposition pic.twitter.com/F6R8X5PLY4
— ANI Digital (@ani_digital) June 3, 2022
The dynastic parties are huddling against me… I want to tell them that I don’t have any personal issues with anyone, I just want a strong opposition in the country. These parties entangled in nepotism should rise above it to strengthen democracy: PM Modi in Kanpur Dehat, UP pic.twitter.com/gjwtseL36A
— ANI UP/Uttarakhand (@ANINewsUP) June 3, 2022