Friday, November 22, 2024

ನಾವು ತಿಂದು ಮಿಕ್ಕಿದ್ದನ್ನ ಬೇರೆ ದೇಶಕ್ಕೆ ಕಳಿಸಲಾಗ್ತಿದೆ : ಸಚಿವೆ ಶೋಭಾ ಕರಂದ್ಲಾಜೆ

ಬೆಂಗಳೂರು : ಯಾವ ದೇಶಕ್ಕೆ ಏನು ಬೇಕಿದೆ ಎಂದು ಪಟ್ಟಿ ಮಾಡಿ, ತರಕಾರಿ, ದವಸ, ಧಾನ್ಯಗಳನ್ನು ಎಕ್ಸ್‌ಪೋರ್ಟ್ ಮಾಡಲಾಗಿದೆ. ನಾವು ತಿಂದು ಮಿಕ್ಕಿದ್ದನ್ನ ಬೇರೆ ದೇಶಕ್ಕೆ ಕಳಿಸಲಾಗುತ್ತಿದೆ ಎಂದು ಕೆಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ತಿಳಿಸಿದರು.

ನಗರದ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರೈತ ದೇಶದ ಬೆನ್ನೆಲುಬು ಅಂತಾರೆ. ಎಂಟು ವರ್ಷದ ಅವಧಿಯಲ್ಲಿ ಪ್ರಧಾನಿ 1,32,000 ಕೋಟಿ ರೈತ ಬಜೆಟ್ ಮಾಡಿದ್ದಾರೆ. ರೈತ ಸಮ್ಮನ್ ಯೋಜನೆ ಮೂಲಕ ಕೋಟ್ಯಾಂತರ ರೈತರಿಗೆ ಧನ ಸಹಾಯ ಮಾಡಲಾಗಿದೆ. 1,83,000ಕೋಟಿ ಈವರೆಗೂ ರೈತರ ಅಕೌಂಟಿಗೆ ಹಾಕಲಾಗಿದೆ. ಬೆಳೆದ ಬೆಲೆಗೆ ಬೆಲೆ ಇಲ್ಲ ಅಂತ ಬೆಳೆ ತಂದು ರಸ್ತೆಗೆ ಸುರಿಯುತ್ತಿದ್ದಾನೆ. ಹೀಗಾಗಿ ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗುವ ಕೆಲಸ ಮಾಡಲಾಗಿದೆ ಎಂದರು.

ಅಲ್ಲದೇ ವಿದೇಶಗಳಿಗೆ ಎಕ್ಸ್‌ಪೋರ್ಟ್ ಮಾಡುವ ಕೆಲಸ ಮಾಡಲಾಗಿದೆ. 314ಮಿಲಿಯನ್ ಮೆಟ್ರಿಕ್ ಟನ್ ಆಹಾರ ಧಾನ್ಯ ಕಳೆದ ವರ್ಷ ಬೆಳೆದಿದ್ದೇವೆ. ನಮ್ಮ ದೇಶದ 135ಕೋಟಿ ಜನ ತಿನ್ನಲು ಇಷ್ಟು ಬೇಕಿಲ್ಲ. ಹಾಗಾಗಿ ‌ಇದನ್ನ ಮಾರ್ಕೆಟಿಂಗ್ ಮಾಡಿ, ಎಕ್ಸ್‌ಪೋರ್ಟ್ ಮಾಡುವ ಕೆಲಸ ಆಗ್ತಿದೆ. ಅಗ್ರಿ ಬಿಸ್‌ನೆಸ್ ಮಾಡಿ ಲಾಭ ಪಡೆಯುವ ಕೆಲಸ ಆಗುತ್ತಿದೆ. ಕೃಷಿ ಉತ್ಪನ್ನ ಮಾತ್ರ ಎಕ್ಸ್‌ಪೋರ್ಟ್ ಮಾಡುವ ಸಂಸ್ಥೆಯನ್ನ ಮಾಡಲಾಗಿದೆ. ಕಳೆದ ಒಂದು ವರ್ಷದಲ್ಲಿ ಅತಿ ಹೆಚ್ಚು ಎಕ್ಸ್‌ಪೋರ್ಟ್ ಮಾಡುವ ಕೆಲಸ ಮಾಡಲಾಗಿದೆ ಎಂದು ಹೇಳಿದರು.

ಇನ್ನು ಮೋದಿಯವರು 20 ವರ್ಷ ಆಡಳಿತ ಮಾಡಿದ್ದಾರೆ. ಅದರಲ್ಲಿ 12ವರ್ಷ ಗುಜರಾತ್ ಸಿಎಂ ಆಗಿ, 8 ವರ್ಷ ದೇಶದ ಪ್ರಧಾನಿಯಾಗಿ ಒಂದು ಕಪ್ಪು ಚುಕ್ಕೆ ಇಲ್ಲದೆ, ಭ್ರಷ್ಟಾಚಾರ ರಹಿತ ಸರ್ಕಾರ ನೀಡಿದ್ದಾರೆ. ಮೋದಿಯವರಿಗೆ ಗೌರವ ಕೊಟ್ಟರೆ, ಇಡೀ ದೇಶಕ್ಕೆ ಗೌರವ ಸಿಕ್ಕಂತಾಗುತ್ತದೆ.ಉಕ್ರೇನ್-ರಷ್ಯಾ ಯುದ್ಧದಲ್ಲಿ 20ಸಾವಿರ ಜನರನ್ನ ಸುರಕ್ಷಿತವಾಗಿ ಕರೆತಂದರು.

ಏಕ‌ಕಾಲದಲ್ಲಿ ಎರಡೂ ದೇಶದ ಪ್ರಧಾನಿಗಳ ಜೊತೆ ಮಾತನಾಡಿದರೆ ಅದು ಮೋದಿ ಅವರು ಮಾತ್ರ. ನೆರೆಯ ದೇಶಗಳ ಜೊತೆ ವ್ಯವಹಾರ ಮಾಡುವ, ಸಂಕಷ್ಟದಲ್ಲಿದ್ದಾಗ ಸಹಾಯ ಮಾಡೋ‌ ಧೈರ್ಯ ಬಂದಿದೆ. ಇದು ದೇಶದ ತ್ರಿವರ್ಣ ಧ್ವಜಕ್ಕೆ ಹೆಚ್ಚು ಗೌರವ ದೊರೆತಿದೆ ಎಂದರು.

RELATED ARTICLES

Related Articles

TRENDING ARTICLES