Sunday, November 24, 2024

ಪಠ್ಯ ಪುಸ್ತಕದಲ್ಲಿ ನೈತಿಕ ಕೊರತೆ ಹೆಚ್ಚಿದೆ : ಸಿದ್ಧಲಿಂಗ ಸ್ವಾಮೀಜಿ

ದಾವಣಗೆರೆ : ಮಕ್ಕಳಿಗೆ ನೈತಿಕ ಶಿಕ್ಷಣವು ಅತ್ಯಂತ ಅಗತ್ಯ. ಆದ್ದರಿಂದ ಮೂಲ ತಿದ್ದದೆ ವಾಸ್ತವತೆ ಕೊಡಬೇಕು ಎಂದು ದಾವಣಗೆರೆಯಲ್ಲಿ ತುಮಕೂರು ಸಿದ್ದಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಪಠ್ಯ ಪುಸ್ತಕ ವಿವಾದ ಹಿನ್ನೆಲೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಠ್ಯ ಪುಸ್ತಕದ ವಿಷಯ ಈಗಾಗಲೇ ಬಹಳಷ್ಟು ತಿರುವು ಪಡೆದುಕೊಳ್ಳುತ್ತಿದೆ. ಯಾವುದೇ ಕಾರಣದಿಂದ ಇಂತಹ ವಾತಾವರಣ ಸೃಷ್ಟಿ ಆಗಬಾರದು ಎಂದರು.

ಇನ್ನು ಪಠ್ಯದಲ್ಲಿ ಗೊಂದಲ ಇದೆ, ಈ ಕೂಡಲೇ ಸರಿಪಡಿಸಬೇಕು. ಪಠ್ಯ ಪುಸ್ತಕದಲ್ಲಿ ನೈತಿಕ ಕೊರತೆ ಹೆಚ್ಚು ಕಾಣ್ತಾ ಇದೆ. ಮೂಲ ವಿಚಾರವನ್ನು ತಿದ್ದದೆ ವಾಸ್ತವವಾಗಿ ಕೊಡಬೇಕು.  ವಾದ ವಿವಾದಗಳು ಪೂರ್ಣಗೊಂಡು ಶಾಂತಿ ವಾತವರಣ ನಿರ್ಮಾಣ ಆಗಬೇಕು. ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಉಂಟಾಗಬೇಕು. ಬಸವಣ್ಣನವರು ಸಮಾಜಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಅವರ ತತ್ವಗಳು ಪ್ರತಿಯೊಬ್ಬ ವ್ಯಕ್ತಿಗೂ ಬೇಕಾಗಿದೆ. ಅವರ ವಚನಗಳೇ ನಮಗೆ ಆಧಾರ. ಆದ್ದರಿಂದ ಅದನ್ನು ತಿರುಚುವ ಪ್ರಯತ್ನ ಆಗಬಾರದು ಎಂದು ತಿಳಿಸಿದರು.

ವಾಸ್ತವ ವಿಚಾರಗಳನ್ನ ಪ್ರಕಟ ಮಾಡುವುದು ಒಳ್ಳೆಯದು. ಮಾನವ ಬದುಕಿಗೆ ಬೇಕಾದ ತತ್ಚವನ್ನು ಕೊಟ್ಟಿರುವುದು ಮುಖ್ಯ. ನಮ್ಮನ ನಾವು ತಿದ್ದಿಕೊಳ್ಳುವ ಪ್ರಯತ್ನ ಮಾಡಿದರೆ ಅದು ಬಸವಣ್ಣನವರಿಗೆ ನಾವು ಕೊಡುವ ಗೌರವವಾಗಿದೆ ಎಂದು ಸಿದ್ದಲಿಂಗ ಸ್ವಾಮೀಜಿ ಅವರು ಹೇಳಿದರು.

RELATED ARTICLES

Related Articles

TRENDING ARTICLES