Monday, November 25, 2024

ಒಂದು ಸ್ಥಾನಕ್ಕಾಗಿ ಮೂರು ಪಕ್ಷಗಳಿಂದ ಕಾದಾಟ..!

ಬೆಂಗಳೂರು: ರಾಜ್ಯಸಭೆಯ ಚುನಾವಣೆ ಕದನ ದಿನದಿಂದ ದಿನಕ್ಕೆ ಕುತೂಹಲ ಹುಟ್ಟುಹಾಕ್ತಿದೆ. ಅದ್ರಲ್ಲೂ ನಾಲ್ಕನೆಯ ಅಭ್ಯರ್ಥಿಯ ಗೆಲುವು ಚದುರಂಗದಾಟವಾಗ್ತಿದೆ. ಅಂಕಿ ಸಂಖ್ಯೆಗಳ ಲೆಕ್ಕಾಚಾರ ಗೊಂದಲ ಮೂಡಿಸ್ತಿದೆ. ದಿನಕ್ಕೊಂದು ಬೆಳವಣಿಗೆಳು ನಡೆಯುತ್ತಿದ್ದು, ಯಾರ್ ಗೆಲ್ತಾರೋ ಯಾರ್ ಸೋಲ್ತಾರೋ ಅನ್ನೋದನ್ನ‌ ಜಡ್ಜ್ ಮಾಡುವುದಕ್ಕೂ ಕಷ್ಟವಾಗ್ತಿದೆ. ಒಂದು ಸೀಟಿನ ಮೇಲೆ ಮೂರು ಪಕ್ಷಗಳು ಕಣ್ಣಿಟ್ಟಿದ್ದು, ಅಡ್ಡಮತದಾನದ ಭೀತಿಯೂ ಎದುರಾಗಿದೆ.

ನಾಲ್ಕನೇ ಅಭ್ಯರ್ಥಿ ಆಯ್ಕೆಗೆ ಮೂರು ಪಕ್ಷಗಳಲ್ಲೂ ಸ್ಪಷ್ಟ ಬಹುಮತವಿಲ್ಲ. ಬಿಜೆಪಿಯ 121 ಹಾಗೂ ಓರ್ವ ಪಕ್ಷೇತರ ಸೇರಿ 122 ಮತಗಳಿವೆ. ಓರ್ವ ಅಭ್ಯರ್ಥಿ ಗೆಲ್ಲೋಕೆ 45 ಮತಗಳು ಬೇಕಿದೆ. ಬಿಜೆಪಿ ನಿರಾಯಾಸವಾಗಿ ಇಬ್ಬರನ್ನ ಗೆಲ್ಲಿಸಿಕೊಳ್ಳಬಹುದು. ನಿರ್ಮಲಾ ಸೀತಾರಾಮನ್, ಜಗ್ಗೇಶ್ ಆಯ್ಕೆ ಸುಲಭ. ಆದ್ರೆ ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಗೆಲ್ಲಿಸಿಕೊಳ್ಳೋಕೆ 32 ಮತ ಉಳಿಯಲಿವೆ. ಇದಕ್ಕೆ ಜೆಡಿಎಸ್ ಬೆಂಬಲ ಬೇಕು. ಇಲ್ಲವೇ 13 ಮತಗಳು ಜೆಡಿಎಸ್, ಕಾಂಗ್ರೆಸ್‌ನಿಂದ ಬೀಳಬೇಕು.

ಅತ್ತ ಕಾಂಗ್ರೆಸ್ ಬಳಿ 70 ಮತಗಳು ಇದ್ದು ಅಧಿಕೃತ ಅಭ್ಯರ್ಥಿ ಜೈರಾಂ ರಮೇಶ್ ಗೆಲ್ಲಿಸಿಕೊಳ್ಳಬಹುದು. ಆದ್ರೆ ಜೆಡಿಎಸ್ ಗೆ ಟಾಂಗ್ ಕೊಡೋಕೆ ಉಳಿದ 25 ಮತಗಳಿಗೆ ಎರಡನೇ ಅಭ್ಯರ್ಥಿ ಕಣಕ್ಕಿಳಿಸಿದೆ. ಮನ್ಸೂರ್ ಖಾನ್ ಗೆಲ್ಲೋಕೆ 20 ಮತಗಳು ಹೆಚ್ಚುವರಿ ಬೇಕು.ಇದ್ರ ನಡುವೆ 32 ಮತಗಳಿರುವ ಜೆಡಿಎಸ್ ಕುಪೇಂದ್ರ ರೆಡ್ಡಿಯನ್ನ ಕಣಕ್ಕಿಳಿಸಿದೆ. ಇಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋಕೆ 13 ಮತಗಳು ಬೇಕು. ಕಾಂಗ್ರೆಸ್ ಬಿಜೆಪಿ ಹೆಚ್ಚುವರಿ ಮತಗಳು ನೀಡಬೇಕು. ಹೀಗಾಗಿ ಮೂರು ಪಕ್ಷಗಳ ಅಭ್ಯರ್ಥಿಗಳು ಇರೋದ್ರಿಂದ ಗೊಂದಲ ಮುಂದುವರಿದಿದೆ. ಇದರ ನಡುವೆ ಜೆಡಿಎಸ್ ನಾಯಕರು ಸಹ ಅಭ್ಯರ್ಥಿಗಳ ಗೆಲುವಿಗೆ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ.

ಒಟ್ಟಿನಲ್ಲಿ ರಾಜ್ಯಸಭಾ ರಣಕಣದಲ್ಲಿ ಮೂರು ಪಕ್ಷದ ಅಭ್ಯರ್ಥಿಗಳ ರಣಾಂಗಣದಲ್ಲಿದ್ದು ಗೆಲುವಿಗೆ ಸತತ ಪ್ರಯತ್ನ ಮಾಡ್ತಿವೆ.. ಅದೃಷ್ಟದ ಬೆಂಬಲ‌ ಸಿಕ್ಕಿದ್ರೆ ಲಾಟರಿ ಮೂಲಕ ಜೆಡಿಎಸ್ ಅಥವಾ ಬಿಜೆಪಿಯ ಅಭ್ಯರ್ಥಿ ಗೆಲುವ ಸಾಧ್ಯತೆ ಹೆಚ್ಚು.

RELATED ARTICLES

Related Articles

TRENDING ARTICLES