Friday, November 22, 2024

ಕೋಲಾರದ ಸೀಪೂರು ಸರ್ಕಾರಿ ಶಾಲೆಗೆ ಕೊಠಡಿಗಳೇ ಇಲ್ಲ..!

ಕೋಲಾರ : ಅರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಪೂರು ಗ್ರಾಮದಲ್ಲಿ ಇರುವ ಉನ್ನತೀಕರಿಸಿದ ಸರ್ಕಾರಿ ಶಾಲೆಯ ಅವ್ಯವಸ್ಥೆ. ಈ ಶಾಲೆಯಲ್ಲಿ ಒಂದರಿಂದ ಎಂಟನೇ ತರಗತಿವರೆಗೆ ಒಟ್ಟು 93 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದ್ರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿಗಳು ಒಂದೇ ಕೊಠಡಿಯಲ್ಲಿ ಪಾಠ ಕೇಳಬೇಕಿದೆ. ಗ್ರಾಮದಲ್ಲಿ ಇರುವ ಹಳೇಯ ಶಾಲಾ ಕಟ್ಟಡ ಶಿಥಿಲವಾಗಿ ಹನ್ನೆರಡು ವರ್ಷಗಳೇ ಆಗಿದೆ. ಇಪ್ಕೋ ಕಂಪನಿಯ ಸಮುದಾಯ ಭವನದಲ್ಲಿ ಶಾಲೆಯನ್ನ ನಡೆಸಲಾಗುತ್ತಿದೆ.

ಒಂದೇ ಕೊಠಡಿಯಲ್ಲಿ ಒಂದನೇ ತರಗತಿಯಿಂದ ಎಂಟನೇ ತರಗತಿಯವರೆಗೆ ಪಾಠಗಳನ್ನ ಮಾಡುತ್ತಾರೆ. ಐದು ಮಂದಿ ಶಿಕ್ಷಕರು ಒಂದೇ ಕೊಠಡಿಯಲ್ಲಿ ತಮ್ಮ ವಿದ್ಯಾರ್ಥಿಗಳಿಗೆ ಪಾಠ ಹೇಳಿ ಕೊಡುತ್ತಾರೆ. ಗೊಂದಲದ ನಡುವೆ ಮಕ್ಕಳು ಪಾಠ ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ. ಆದರೂ ಕೂಡ ವಿಧಿ ಇಲ್ಲದೆ ಪಾಠ ಕೇಳಬೇಕು. ಈ ಮಕ್ಕಳಿಗೆ ಕೂರಲು ಡೆಸ್ಕ್ ಬೆಂಚ್ ಅಂದ್ರೇನೂ ಅಂತಾನೂ ಗೊತ್ತಿಲ್ಲ. ಎಲ್ಲ ವಿದ್ಯಾರ್ಥಿಗಳು ನೆಲದ ಮೇಲೆಯೇ ಕೂತು ಪಾಠ ಕೇಳಬೇಕು. ಆಟದ ಮೈದಾನವೆಂದರೆ ಯಾವ ಮಕ್ಕಳಿಗೆ ಇಷ್ಟವಿಲ್ಲ. ಆದ್ರೆ, ಈ ಶಾಲೆಯ ಮಕ್ಕಳಿಗೆ ಅದರ ಅದೃಷವೂ ಇಲ್ಲ. ಇರಲಿ ಶೌಚಾಲಯವೂ ಇಲ್ಲ. ಇರುವ ಎರಡು ಕೊಠಡಿಗಳು ಅದರಲ್ಲಿ ಒಂದರಿಂದ ಮೂರರವರೆಗೆ ಒಂದು ತರಗತಿ ಮತ್ತೊಂದು ಕೊಠಡಿಯಲ್ಲಿ ನಾಲ್ಕರಿಂದ 8 ರವರೆಗೆ ತರಗತಿ.

ಗ್ರಾಮದಿಂದ ನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪಕ್ಕದ ಗ್ರಾಮಗಳಿಗೆ ಮತ್ತು ಕೋಲಾರದಲ್ಲಿ ಶಾಲೆಗೆ ಸೇರ್ಪಡೆಯಾಗಿದ್ದಾರೆ. ಗ್ರಾಮದ ಶಾಲೆಯಲ್ಲಿಯೇ ವ್ಯವಸ್ಥೆ ಇದ್ದಿದ್ದರೆ ಅವರೂ ಇಲ್ಲೇ ಕಲಿಯಬಹುದಿತ್ತು ಅಂತಾರೆ ಗ್ರಾಮಸ್ಥರು.

ಸ್ಥಳೀಯ ಶಾಸಕರು, ಅಧಿಕಾರಿಗಳು ಇತ್ತ ಗಮನ ಹರಿಸಿ ಮಕ್ಕಳ ಕಲಿಕೆಗೆ ಸಹಕರಿಸಬೇಕಾಗಿದೆ. ಇಲ್ಲವಾದಲ್ಲಿ ಈ ಮಕ್ಕಳ ಶಾಪ ತಟ್ಟುವುದರಲ್ಲಿ ಅನುಮಾನವೇ ಇಲ್ಲ.

RELATED ARTICLES

Related Articles

TRENDING ARTICLES