ಕೊಪ್ಪಳ : ಆಂಜನೇಯ ಹೆಸರಲ್ಲಿ ಟಿಟಿಡಿ,ಮಹಾರಾಷ್ಟ್ರ ಬಿಸಿನೆಸ್ ಗೆ ಹೊರಟಿದ್ದಾರೆ ಎಂದು ಕೊಪ್ಪಳದಲ್ಲಿ ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.
ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕಿಷ್ಕಿಂಧೆಯೇ ಹನುಮ ಹುಟ್ಟಿದ ಸ್ಥಳ ನಾವು ಎಲ್ಲ ಸಂಸದರು ಕೂಡಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕ್ತೀವಿ. ನಮ್ಮ ಬಳಿ ಇರೋ ದಾಖಲೆಗಳನ್ನ ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕ್ತೀವಿ. ಕೇಂದ್ರ ಸರ್ಕಾರ ಕಿಷ್ಕಿಂಧೆಯೇ ಅಂಜನಾದ್ರಿ ಪ್ರದೇಶ ಅನ್ನೋದು ಪ್ರಕಟಣೆ ಮಾಡೋ ಸಾಧ್ಯತೆ ಇದೆ ಎಂದರು.
ಅದಲ್ಲದೇ, ಇವತ್ತು ಹಂಪಿಗಿಂತ ಅಂಜನಾದ್ರಿಗೆ ಬರೋ ಪ್ರವಾಸಿಗರ ಸಂಖ್ಯೆ ಜಾಸ್ತಿ ಆಗಿದೆ. ಹನುಮನ ಹೆಸರು ಹೇಳಿಕೊಂಡು ಮಹಾರಾಷ್ಟ್ರ ,ಟಿಟಿಡಿ ಬಿಸಿನೆಸ್ ಮಾಡಲು ಹೊರಟಿವೆ. ಇದೀಗ ಎರಡು ರಾಜ್ಯಗಳು ಸುಮ್ನೆ ವಿವಾದ ಹುಟ್ಟು ಹಾಕೋ ಕೆಲಸ ಮಾಡ್ತೀವೆ. ರಾಮಾಯಣದಲ್ಲಿ ಕಿಷ್ಕಿಂಧೆ ಪ್ರದೇಶವೇ ಹನುಮನ ಹುಟ್ಟಿದ ಸ್ಥಳ ಎಂದು ಉಲ್ಲೇಖವಿದೆ. ಮಹಾರಾಷ್ಟ್ರ ಸುಮ್ನೆ ವಿವಾದ ಮಾಡ್ತಿದೆ,ಇದನ್ನು ನಾನು ಖಂಡಸ್ತೀನಿ. ಆಂಜನೇಯ ಇಡೀ ಜಗತ್ತಿಗೆ ದೇವರು. ಕಿಷ್ಕಿಂಧೆ ಪಂಪಾ ಸರೋವರ ಇದೆ,ಆದ್ರೆ ಮಹಾರಾಷ್ಟ್ರದಲ್ಲಿ ಪಂಪಾ ಸರೋವರದಲ್ಲಿದೆ. ಕಾಲ್ಪನಿಕವಾಗಿ ಸುಮ್ನೆ ವಿವಾದ ಮಾಡ್ತಿದೆ ಎಂದು ಸಂಗಣ್ಣ ಕರಡಿ ಹೇಳಿದ್ದಾರೆ.